NEWS

ಮದ್ದೂರು ತಾಲ್ಲೂಕಿನ ಚೊಟ್ಟನಹಳ್ಳಿಯ ಶ್ರೀ ಮಲೈ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್‌ 9

ಜಾತ್ರಾ ಮಹೋತ್ಸವದ ಸಮಿತಿ ಸದಸ್ಯರು ಇಂದು ಪತ್ರಿಕಾ ಗೋಷ್ಠಿ ನಡೆಸಿ ತಿಳಿಸಿದರು

ಪಾಲನೆ ನ್ಯೂಸ್

ಮಂಡ್ಯ: 41 ನೇ ವರ್ಷದ ಶ್ರೀ ಮಲೈ ಮಹದೇಶ್ವರ ಸ್ವಾಮಿ ಪೂಜಾ ಮತ್ತು 5 ನೇ ವರ್ಷದ ಭಾರಿ ದನಗಳ ಜಾತ್ರಾ ಮಹೋತ್ಸವವನ್ನು ಮಾರ್ಚ್‌ 9 ರಂದು ಹಮ್ಮಿಕೊಳ್ಳಲಾಗಿದೆ.

ಜಾತ್ರಾ ಮಹೋತ್ಸವವು ಬೆಳಿಗ್ಗೆ 5 ರಿಂದ 7 ರ ವರೆಗೆ ಶಂಕರ ಶಾಸ್ತ್ರಿಗಳ ಹೋಮದಿಂದ ಆರಂಭವಾಗುತ್ತದೆ ಮತ್ತು ಮಧ್ಯಾಹ್ನ 2 ಗಂಟೆಗೆ ಶ್ರೀ ಮಲೈ ಮಹದೇಶ್ವರ ಸ್ವಾಮಿ ಪೂಜಾ ಕಾರ್ಯಕ್ರಮ ಮಹಾ ಮಂಗಳಾರತಿ  ಮತ್ತು ಸಂಜೆ 5 ಗಂಟೆಗೆ ಅನ್ನ ಸಂತರ್ಪಣೆ ನಡೆಯುತ್ತದೆ.

09-03-2026 ನೇ ಸೋಮವಾರ ಜಾತ್ರಾ ಮಹೋತ್ಸವ ಪ್ರಾರಂಭವಾಗುತ್ತದೆ.10-03-2026 ನೇ ಮಂಗಳವಾರ ರಾತ್ರಿ 12 ಗಂಟೆಯೊಳಗೆ ಬಹುಮಾನದ ಸ್ಫದಿಗಳ ರಾಸುಗಳು ಸೇರತಕ್ಕದ್ದು, 11-03-2026 ನೇ ಬುಧವಾರ ದೇಶಹಳ್ಳಿ ಶ್ರೀ ಕೊಳ್ಳಿಕೊಡುಗೆ ಆದಶಕ್ತಿ ಬಸವಣ್ಣ ನವರ ಮೆರವಣಿಗೆ, 13-03-2026 ನೇ ಗುರುವಾರ ರಾಸುಗಳ ಆಯ್ಕೆ ಮತ್ತು 14-03-2026 ನೇ ಶುಕ್ರವಾರ ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಜಾತ್ರೆಯಲ್ಲಿ ಭಾಗವಹಿಸಿ ಆಯ್ಕೆಯಾದ ರಾಸುಗಳಿಗೆ, ಸೀಮೆ ಗೂಳಿ ರಾಸುಗಳಿಗೆ ಮತ್ತು ಹಳ್ಳಿಕಾರ್‌ ಬೀಜದ ಹೋರಿಗಳಿಗೆ ಬಹುಮಾನ ನೀಡಲಾಗುವುದು.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಶಿಕ್ಷಕರ ಸೇವೆ ಸಮಾಜಕ್ಕೆ‌ ಅಮೂಲ್ಯವಾದದ್ದು

ಮಹಿಳೆಯರ ಸಬಲೀಕರಣ ನಮ್ಮ ಸರ್ಕಾರ ಬದ್ಧವಾಗಿದೆ

ಸಂಸದ ಯದುವೀ‌ರ್ ಮನವಿಗೆ ನಿರ್ಮಲಾ ಸ್ಪಂದನೆ

Leave a Comment