ಪಾಲನೆ ನ್ಯೂಸ್

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಿಂಗ್ ಮತ್ತು ಇ-ನೋಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ.
‘ಫ್ರಾನ್ಸ್‌ನಿಂದ ತರಿಸ ಲಾಗುತ್ತಿರುವ ಇ-ಟಂಗ್ ವ್ಯವಸ್ಥೆಯು ತುಪ್ಪದ ರುಚಿ ನೋಡಿ ಗುಣಮಟ್ಟ ಪತ್ತೆ ಮಾಡಲಿದೆ. ಅಂತೆಯೇ ಇ-ನೋಸ್‌ನಿಂದ ಘಮವನ್ನು ಆಘ್ರಾಣಿಸಿ ಕಲಬೆರಕೆಯನ್ನು ಪತ್ತೆಹಚ್ಚಲಾಗುವುದು. ಈ ಎಲೆಕ್ಟ್ರಾನಿಕ್ ಉಪಕರಣಗಳಿಂದ, ತುಪ್ಪದ ಗುಣಮಟ್ಟದಲ್ಲಿ ಸಣ್ಣ ಕೊರತೆಯಾದರೂ ತಿಳಿಯುತ್ತದೆ’ ಎಂದು ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ. 25 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ನೂತನ ಲ್ಯಾಬ್ ಮುಂದಿನ ತಿಂಗಳಿಂದ ಕಾರ್ಯಾಚರಣೆ ನಡೆಸಲಿದೆ. ಇದು ತುಪ್ಪ, ಒಣಹಣ್ಣು, ಸಕ್ಕರೆ ಸೇರಿ ಪ್ರಸಾದಕ್ಕೆ ಬಳಸುವ ಇನ್ನಿತರ ವಸ್ತುಗಳ ಪರೀಕ್ಷೆ ನಡೆಸಲಿದೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

