NEWS

ಸಿಎಂ ಸ್ಟಾಲಿನ್ ಸ್ಟಾಂಡ್ ಅಪ್ ಕಾಮೆಡಿಯನ್ ಎಂದು ನಟ ವಿಜಯ್ ವ್ಯಂಗ್ಯ

ಪಾಲನೆ ನ್ಯೂಸ್

ವೆಲ್ಲೂರು: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ‘ಸ್ಟ್ಯಾಂಡ್ ಅಪ್ ಕಾಮೆಡಿಯನ್’ ಎಂದು ಟಿವಿಕೆ ಪಕ್ಷದ ಸ್ಥಾಪಕ, ನಟ ವಿಜಯ್ ” ವಾಡಿದ್ದಾರೆ.

ವ್ಯಂಗ್ಯ ಸೋಮವಾರ’ ಮಾತನಾಡಿದ ಅವರು, ‘ತಮ್ಮ ಆಳ್ವಿಕೆಯಲ್ಲಿ ತಮಿಳುನಾಡು ಸೂಪರ್‌ಸ್ಟಾರ್‌ ರಾಜ್ಯ ಎಂದು ಸ್ಟಾಲಿನ್ ಹೇಳುತ್ತಾರೆ. ಮಾಜಿ ಸಿಎಂಗಳಾದ ಕಾಮರಾಜ್, ಅಣ್ಣಾದೊರೈ ಮತ್ತು ಎಂಜಿಆರ್ ಅವರ ಅಡಿಯಲ್ಲಿ ಸೂಪರ್‌ಸ್ಟಾ‌ರ್ ರಾಜ್ಯವಾಗಿತ್ತು, ಆದರೆ ಸ್ಟಾಲಿನ್ ಅವರ ಅಡಿಯಲ್ಲಲ್ಲ.

ಈಗ ಅದು ಸೂಪರ್‌ಸ್ಟ್ಯಾಂಡ್ ಅಪ್ ಕಾಮಿಕ್ ನಡೆಸುವ ರಾಜ್ಯವಾಗಿದೆ’ ಎಂದು ವ್ಯಂಗ್ಯವಾಡಿದರು. ಅಲ್ಲದೆ, ‘ನಾನು ಅನುಭವ ಇಲ್ಲದಿದ್ದರೂ ಹುಲ್ಲು ತಿನ್ನಿಸಿ ಜಲ್ಲಿಕಟ್ಟು ಗೂಳಿಯನ್ನು ಪಳಗಿಸುವ ಪುಟ್ಟ ಬಾಲಕನಂತೆ’ ಎಂದು ಹೇಳಿದ ವಿಜಯ್, ಸ್ಟಾಲಿನ್‌ರನ್ನು ಮಣಿಸುವ ಪರೋಕ್ಷ ಎಚ್ಚರಿಕೆ ನೀಡಿದರು. ವಿಜಯ್ ಚೆನ್ನೈ ಉತ್ತರ ದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ಟಿ20

ಓದುಗರ ಬೇಡಿಕೆ ಮೇಲೆ ಹಾಗೂ ಓದುಗರ ಆಸಕ್ತಿ ಮೇರೆಗೆ ಪುಸ್ತಕ ಖರೀದಿ ಮಾಡಲು ಅಗತ್ಯ ಕ್ರಮವಹಿಸಿ – ಡಾ ಕುಮಾರ

ನಕಲಿ ಗನ್ ಇಟ್ಟು ಕೊಂಡು ಪ್ರಾಂಕ್ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ

Leave a Comment