ಪಾಲನೆ ನ್ಯೂಸ್
ಬೆಂಗಳೂರು : ಕಾನ್ಸಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಮೊದಲ ಹಂತದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪೂರ್ಣಗೊಳಿಸಿದೆ. ಕಳೆದ ಒಂದೂವರೆ ತಿಂಗಳಿಂದ ಕಲೆಹಾಕಿರುವ ತನಿಖೆ ನಡೆಸಿ ಮಾಹಿತಿ ಎಸ್‌ಐಟಿ, ರಾಯ್ ಶೂಟೌಟ್ ಮಾಡಿಕೊಂಡಿದ್ದ ಸ್ಥಳದಲ್ಲಿನ ಡಿವಿಆರ್, ಮೊಬೈಲ್, ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ತನಿಖಾಧಿಕಾರಿಗಳು ಎಫ್‌ಎಸ್ ಎಲ್‌ಗೆ ಕಳುಹಿಸಿದ್ದಾರೆ.
ಘಟನೆಯ ಕುರಿತು ಎಲ್ಲ ಆಯಾಮದಲ್ಲಿ ತನಿಖೆ ನಡೆಸಿರುವ ಅವರು, ತಾಂತ್ರಿಕ ಸಾಕ್ಷಾಧಾರಗಳ ವರದಿಗಾಗಿ ಕಾಯುತ್ತಿದ್ದಾರೆ. ಈವರೆಗೆ ನಡೆದ ಮೊದಲ ಹಂತದ ತನಿಖೆಯನ್ನು ಮುಕ್ತಾಯಗೊಳಿಸಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾನಸಿಕ ಖಿನ್ನತೆ?: ಕೇರಳ ಮೂಲದ ಐಟಿ ಅಧಿಕಾರಿಗಳ ತಂಡ ಕೆಲವು ತಿಂಗಳಲ್ಲಿ ನಾಲ್ಕು ಬಾರಿ ಕಾನ್ಸಿಡೆಂಟ್ ಗ್ರೂಪ್ ಸೇರಿ ಸಿ.ಜೆ. ರಾಯ್‌ಗೆ ಸಂಬಂಧಿಸಿದ ಅನೇಕ ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಸರ್ಕಾರಕ್ಕೆ ತೆರಿಗೆ ವಂಚನೆ ಆರೋಪದಿಂದಾಗಿ ರಾಯ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅವರ ಆತ್ಮಹತ್ಯೆ ನಿರ್ಧಾರಕ್ಕೆ ಇದೇ ಒಂದು ಕಾರಣ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಅಧಿಕಾರಿಗಳ ದಾಳಿ ವಿರುದ್ಧ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ರಾಯ್ ವಾಪಸ್ ತೆಗೆದುಕೊಳ್ಳಲು ಕಾರಣ ಏನು ಎಂಬುದರ ಕುರಿತು ಮಾಹಿತಿ ಕಲೆಹಾಕಿರುವ ಅಧಿಕಾರಿಗಳು, ರಿಯಲ್ ಎಸ್ಟೇಟ್ ದಂಧೆಯಲ್ಲಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದರು ಎನ್ನಲಾಗುತ್ತಿದೆ. ಈ ಕಾರಣದಿಂದ ಐಟಿ ಅಧಿಕಾರಿಗಳ ದಾಳಿ ವಿರುದ್ಧ ನ್ಯಾಯಾಂಗ ಹೋರಾಟದಿಂದ ಹಿಂದೆ ಸರಿದಿದ್ದರು.
ಜ. 30ರಂದು ಮಧ್ಯಾಹ್ನ ರಾಯ್ ತಮ್ಮ ಕಚೇರಿಯಲ್ಲಿ ಶೂಟೌಟ್ ಮಾಡಿಕೊಂಡು ಸೂಯಿಸೈಡ್ ಮಾಡಿಕೊಂಡಿದ್ದರು. ಪ್ರಕರಣದ ರಾಯ್ ಆತ್ಮಹತ್ಯೆ ಹಿನ್ನೆಲೆ ಅಶೋಕನಗರ ಹಿನ್ನೆಲೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ರಾಜ್ಯ ಸೇರಿ ದೇಶಾದ್ಯಂತ ಚರ್ಚೆಯಾಗಿದ್ದರಿಂದ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಹೆಚ್ಚುವರಿ ತನಿಖೆಗೆ ಎಸ್‌ಐಟಿ ತಂಡ ರಚನೆ ಮಾಡಿದ್ದರು. ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ್ ಜಗಲಸಾರ್, ಕೇಂದ್ರ ಉಪ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ ಸೇರಿ ಸಿಸಿಆರ್‌ಬಿ ಎಸಿಪಿ ರಾಮಚಂದ್ರ, ಇನ್‌ಸ್ಪೆಕ್ಟರ್ ಕೆ.ಬಿ. ರವಿ ಅವರನ್ನು ಒಳಗೊಂಡಂತೆ ಎಸ್‌ಐಟಿ ತಂಡ ನೇಮಿಸಲಾಗಿತ್ತು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
