NEWS

ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ

ಮಂಡ್ಯ : ನಗರದ ಅಧಿದೇವತೆ, ಪುರಾಣ ಪ್ರಸಿದ್ಧ ಮಾಂಡವ್ಯ ಕ್ಷೇತ್ರಾಧಿಪತಿಯಾದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಸಹಸ್ರಾರು
ಮಂದಿ ಭಕ್ತರ ಜಯಘೋಷದ ನಡುವೆ ವಿಜೃಂಭಣೆಯಿಂದ ನಡೆಯಿತು. ಉತ್ತರಾಯಣ, ಶಿಶಿರಋತು, ಬೆಳಗ್ಗೆ ೧೧.೧೨ ಗಂಟೆಗೆ ಸಲ್ಲುವ ಶುಭ ವೃಷಭ
ಲಗ್ನ ಮಹೋರ್ತದಲ್ಲಿ ಅಲಂಕರಿಸಿದ ಶ್ರೀ ಉಮಾಮಹೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಕೃತಗೊಂಡಿದ್ದ ಬ್ರಹ್ಮ ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಲಾ ಯಿತು.

ನಂತರ ಭಕ್ತರ ಜಯಘೋಷದ ನಡುವೆ ರಥ ಬೀದಿಯಲ್ಲಿ ರಥವನ್ನು ಎಳೆಯಲಾಯಿತು. ಇದಕ್ಕೂ ಮುನ್ನ ದೇವಳದಲ್ಲಿ ಪಂಚಾ
ಮೃತ ಅಭಿಷೇಕ, ಅನುಜ್ಞೆಪೂಜೆ, ರುದ್ರಾಭಿಷೇಕ, ಪಂಚಮೂರ್ತಿ ಹವನ ಹೋಮ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಬೆಳಗಿನ ಜಾವ ೫ ಗಂಟೆಗೆ ರಥಕ್ಕೆ ತಾಲೂಕಿನ ಚನ್ನಪ್ಪನದೊಡ್ಡಿ ಗ್ರಾಮಸ್ಥರು ಕುರಿಬಲಿ ನೀಡುತ್ತಾರೆ. ಬಳಿಕ ದೇವಾಲಯದ ವತಿಯಿಂದ ರಥಶುದ್ಧಿ, ಬಲಿಪೂಜೆ, ರಥ ಹಾದುಹೋಗುವ ಪ್ರಮುಖ ಬೀದಿಯಲ್ಲಿ ವಾಸ್ತುಬಲಿ ಪ್ರದಾನ ನಡೆಸಲಾಯಿತು.ಬಳಿಕ ರಥೋತ್ಸವ ಸಾಂಗೋಪಸಾಂಗವಾಗಿ ನಡೆಯಿತು.


ರಥವನ್ನು ಎಳೆದು ತಂದು ಪೂಜಾ ಮಂಟಪದ ಬಳಿ ನಿಲ್ಲಿಸಲಾಯಿತು. ಸಾಮಾನ್ಯವಾಗಿ ರಾತ್ರಿ ಸುಮಾರು ೮ ಗಂಟೆಯವರೆವಿಗೂ ಶ್ರೀ ಸ್ವಾಮಿಯು
ರಥದಲ್ಲಿ ವೀರಾಜಮಾನರಾಗಿ ಭಕ್ತರಿಗೆ ದರ್ಶನ ನೀಡುತ್ತಾರೆ. ಆದರೆ ಚಂದ್ರಗ್ರಹಣ ಇರುವ ಕಾರಣ ಸಂಜೆ ರಥದಿಂದ ಸ್ವಾಮಿಯನ್ನು ಕೆಳಗಿಳಿಸಿ ಮತ್ತೊಮ್ಮೆ ರಥ
ಬೀದಿಯಲ್ಲಿ ಉತ್ಸವ ಮಾಡಿದ ಬಳಿಕ ದೇವಾಲಯದ ಸ್ವಸ್ಥಾನಕ್ಕೆ ಹಿಂದಿರುಗಿಸಲಾಗುತ್ತದೆ. ರಥೋತ್ಸವ ನಡೆಯುವ ವೇಳೆ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಗುತ್ತದೆ. ಉತ್ಸವ ಮುಗಿದು ಸ್ವಾಮಿಯು ಸ್ವಸ್ಥಾನಕ್ಕೆ ತೆರಳುವವಗೂ ಬಾಗಿಲು ತೆಗೆಯಲಾಗುವುದಿಲ್ಲ.

ಇಂದು ಚಂದ್ರ ಗಹಣದ ಕಾರಣ ಸಂಜೆ ೫.೪೫ರ ಹೊತ್ತಿಗೆ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕೊಂಡೊಯ್ದು ಪೂಜಾ ಕರ‍್ಯ ಕೈಗೊಂಡ ನಂತರ ದೇವಾಲಯದ ಬಾಗಿಲನ್ನು ಬಂದ್ ಮಾಡಲಾಯಿತು. ರಾತ್ರಿ ಸುಮಾರು ೮ ಗಂಟೆಯ ಹೊತ್ತಿಗೆ ದೇವಾಲ ಯದ ಬಾಗಿಲು ತೆರೆದು ಹೋಮ, ಪುಣ್ಯ,
ಅಭಿಷೇಕ ಪೂಜಾ ಕರ‍್ಯದ ನಂತರ ರಾತ್ರಿ ೯ ಗಂಟೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ದೇವಾಲಯದ ಅರ್ಚಕ ಗಿರೀಶ್ ಅವರು ತಿಳಿಸಿದರು.


ಶ್ರೀ ಅರ್ಕೇಶ್ವರ ಸ್ವಾಮಿಯ ರಥೋತ್ಸವದ ನಿಮಿತ್ತ ಪ್ರತಿ ಮನೆ ಮನೆಯ ಮುಂದೆಯೂ ಭಕ್ತರಿಗೆ ಬೆಲ್ಲದ ಪಾನಕ ಮತ್ತು ನೀರು ಮಜ್ಜಿಗೆಯನ್ನು ವಿತರಿಸುವ
ಮೂಲಕ ಬಿಸಿಲ ಬೇಗೆಯ ದಣಿವನ್ನು ನೀಗಿಸಲಾಯಿತು. ಸಹಸ್ರಾರು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಟಿ-20 ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಪ್ರಧಾನಿ ಮೋದಿ ಮತ್ತು ನನಗೆ ‘ಪತ್ನಿ ಸಮಸ್ಯೆ’ ಇಲ್ಲ’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಸ್ಯ

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿ: ಡಾ. ಕುಮಾರ

Leave a Comment