NEWS

ರೇಷನ್‌ ಗಾಗಿ ಪರದಾಟ

ಪಾಲನೆ ನ್ಯೂಸ್

ಕಳೆದ 8-10 ದಿನಗಳಿಂದ ತಾಂತ್ರಿಕ ಸರ್ವರ್ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್ ದೃಢೀಕರಣ ವಿಫಲವಾಗುತ್ತಿದೆ. ಕೆಲವೊಮ್ಮೆ ನಿಧಾನವಾಗಿ ಸಿಗುತ್ತಿದ್ದು, ಇಂಥ ಸಂದರ್ಭದಲ್ಲಿ ಒಬ್ಬೊಬ್ಬ ಪಡಿತರ ಫಲಾನುಭವಿಯ ಬೆರಳಚ್ಚು ಪೂರ್ಣವಾಗಲು 20ರಿಂದ 25 ನಿಮಿಷ ಬೇಕಾಗುತ್ತಿದೆ! ಸರ್ವರ್ ಸಿಕ್ಕರೂ ಬಯೋಮೆಟ್ರಿಕ್ ತೀರಾ ವಿಳಂಬವಾಗುತ್ತಿರುವುದು, ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಬಯೋ ಮೆಟ್ರಿಕ್ ಆಗದಿರುವುದು ಪಡಿತರ ಫಲಾನುಭವಿಗಳು ಕಾದು ಕಾದು ಸುಸ್ತಾಗುವಂತೆ ಮಾಡಿದೆ.

ಸುಡು ಬಿಸಿಲ ಈ ದಿನಗಳಲ್ಲಿ ಕಾದು ನಿಂತು ಹೆಬ್ಬೆರಳಿಟ್ಟ ಮೇಲೆ ಸರ್ವ ರ್ ಸಿಗದೆ ನಿರಾಸೆಯಿಂದ ಹಿಂದಿರುಗುವುದು ಸಾಮಾನ್ಯವಾಗಿದೆ. ಪಡಿತರ ವಿತರಕರು ಕೂಡ ಇದರಿಂದ ಹೈರಾಣಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಲವು ತಿಂಗಳುಗಳಿಂದ ಸರ್ವ‌ರ್ ಸಮಸ್ಯೆ ಇದೆ ಎನ್ನಲಾಗುತ್ತಿದೆ. ಇದರಿಂದ ಫಲಾನುಭವಿಗಳು ಗಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದರೊಂದಿಗೆ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇಂಟರ್‌ನೆಟ್ ಸೇವೆ ಕಡಿಮೆ ಇದೆ. ಕೆಲವೆಡೆ ಮೊಬೈಲ್‌ನಿಂದಲೇ ಇಂಟರ್‌ನೆಟ್ ಬಳಸಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದರಿಂದಲೂ ಪಡಿತರ ವಿತರಣೆ ತಡವಾಗುತ್ತಿದೆ ಎಂದು ಹೇಳಲಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಅಂತಹ ಹೇಳಿಕೊಳ್ಳುವಂತಹ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕನ್ನಡ ಭವನ ನಿರ್ಮಾಣಕ್ಕೆ ಶುಂಕುಸ್ಧಾಪನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವರು

ಕರ್ನಾಟಕ ಸಂಘ ಕತಾರ್ ದೋಹಾದಲ್ಲಿ ಭವ್ಯವಾಗಿ ಕಾರ್ಮಿಕ ದಿನಾಚರಣೆ 2026 ಆಚರಣೆ

ರಜೆಯಲ್ಲಿರುವ ಶಿಕ್ಷಕರಿಗೆ ತಕ್ಷಣ ಕರ್ತವ್ಯಕ್ಕೆ

Leave a Comment