NEWS

ಅರಣ್ಯಾಧಿಕಾರಿಗಳಿಂದಲೇ ಮರಗಳ ನಾಶ

ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

ಪಾಲನೆ ನ್ಯೂಸ್

ಮೈಸೂರು: ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣ ದಲ್ಲಿ ಕ್ವಾರ್ಟಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು ಮರ ಗಳನ್ನು ಅನುಮತಿಯಿಲ್ಲದೇ ಅರಣ್ಯ ಇಲಾಖೆಯ ಅಧಿ ಕಾರಿಗಳೇ ಮರಗಳ ಮಾರಣ ಹೋಮ ನಡೆಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕಾನೂನು ಕ್ರಮಗೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರಿಗೆ ಹೋರಾಟಗಾರ್ತಿ ಭಾನುಮೋಹನ್ ದೂರು ಸಲ್ಲಿಸಿದ್ದಾರೆ.

ಅರಣ್ಯ ಅಧಿಕಾರಿಗಳೇ ಅರಣ್ಯ ನಾಶಕ್ಕೆ ಕೈಹಾಕಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇಂತಹ ಕೆಲವು ಅಧಿಕಾರಿಗಳ ಅಮಾನವೀಯ ನಡೆ ಯಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಅಲ್ಲದೇ, ಯಾವುದೇ ಅನುಮತಿ ಇಲ್ಲದೆ, ಮರಗಳನ್ನು ಕತ್ತರಿಸ ಲಾಗಿದೆ.

ಈ ಸ್ಥಳದಲ್ಲಿ ಹಳೆಯ ಕ್ವಾರ್ಟಸ್ ಇದ್ದು, ಅದನ್ನು ದುರಸ್ತಿ ಮಾಡಿಸದೇ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ.ಅದಕ್ಕಾಗಿ ಹತ್ತಾರು ಮರಗಳನ್ನು ಕತ್ತರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಸುಂದರವಾದ ಕೃತಿಯನ್ನು ನಾಶ ಮಾಡಿ ಇಂತಹ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಅವಶ್ಯಕವಿ ತೇ? ಕಟ್ಟಡದ ಅವಶ್ಯಕತೆಯಿದ್ದಲ್ಲಿ ಬೇರೆಡೆ ನಿರ್ಮಾಣಮಾಡಬೇಕಿತ್ತು. ಅದರ ಬದಲಾಗಿ ಮರಗಳನ್ನು ನಾಶ ಮಾಡಲಾಗಿದ್ದು, ಕೂಡಲೇ ಅಧಿಕಾರಿ ಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳ ಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಭಯ ಬಿಟ್ಟು ಪರೀಕ್ಷೆ ಎದುರಿಸಿ: ರವಿಕುಮಾರ್

ಕವಿ, ಶಿಕ್ಷಕ ಕೊನಾಪು ಇನ್ನಿಲ್ಲ

ಯುವ ಜನತೆ ಅಂಬಿಗರ ಚೌಡಯ್ಯ ರವರ ನಡೆ-ನುಡಿ ಜ್ಞಾನವನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಬೇಕು

Leave a Comment