NEWS

ಟಿ-20 ವಿಶ್ವಕಪ್ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು

ಪಾಲನೆ ನ್ಯೂಸ್‌

ಅಹಮದಾಬಾದ್: ಟಿ-20 ವಿಶ್ವಕಪ್‌ನ ಸೂಪರ್ -8 ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ದ ನಡೆದಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ 76 ರನ್‌ಗಳ ಸೋಲನುಭವಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 187 ರನ್‌ಗಳ ಗುರಿಯನ್ನ ಬೆನ್ನತ್ತಿದ ಭಾರತ 111 ರನ್‌ ಗಳಿಗೆ ಸರ್ವಪತನ ಕಂಡಿತು. ಕಲೆಹಾಕಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್‌ಗಳನ್ನು ಕಳಪೆ ಆರಂಭದ ಹೊರತಾಗಿಯೂ ಡೇವಿಡ್ ಮಿಲ್ಲರ್ ಅವರ ಅರ್ಧಶತಕ, ಡೆವಾಲ್ಡ್ ಬ್ರೇವಿಸ್ (42) ಮತ್ತು ಟ್ರಿಸ್ಟನ್ ಸ್ಟಬ್ ಅವರ ಅಜೇಯ 44 ರನ್‌ಗಳ ಬ್ಯಾಟಿಂಗ್ ಬಲದಿಂದ ಹರಿಣ ಪಡೆ 180+ ಸ್ಟೋರ್ ಗಳಿಸಲು ಸಾಧ್ಯವಾಯಿತು.

ಆರಂಭದಲ್ಲಿ ತಂಡ ಕೇವಲ 20 ರನ್ ಗಳಿಗೆ ಪ್ರಮುಖ 3 ವಿಕೆಟ್ ಗಳನ್ನು ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಗಳಾದ ಕ್ವಿಂಟನ್ ಡಿಕಾಕ್ (6), ಐಡೆನ್ ಮಾಕ್ರ್ರಮ್ (4), ರಯಾನ್ ರಿಕಲ್ಡನ್ (7) ಬಹುಬೇಗನೆ ವಿಕೆಟ್ ಕಳೆದುಕೊಂಡರು. ಒಂದು ಹಂತದಲ್ಲಿ ತಂಡ 150 ರನ್ ತಲುಪುವುದು ಅನುಮಾನವಾಗಿತ್ತು. ಬಳಿಕ 4ನೇ ವಿಕೆಟ್ ಗೆ ಜೊತೆಯಾದ ಬ್ರೆವಿಸ್ ಮತ್ತು ಮಿಲ್ಲರ್ 97 ರನ್‌ಗಳ ಜೊತೆಯಾಟವಾಡಿ ಇನ್ನಿಂಗ್ಸ್ ಸುಧಾರಿಸಿದರು. ಭಾರತದ ಪರ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ ಅವರು 4 ಓವರ್ ಗಳಲ್ಲಿ ಕೇವಲ 15 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದುಕೊಂಡರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಸೇನಾ ಪರೀಕ್ಷೆ ವೇಳೆ ಅಕ್ರಮ ನಡೆಸಿರುವ 18 ಮಂದಿ ವಿರುದ್ದ ದೂರು

ಭಾರತಕ್ಕೆ ಸೌರಶಕ್ತಿ ಶಾಕ್ ನೀಡಿದ ಟ್ರಂಪ್‌

ಮೈಸೂರಿಗರ ಮನಸೂರೆ

Leave a Comment