NEWS

ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ

ಪಾಲನೆ ನ್ಯೂಸ್

ಸಕಲೇಶಪುರ: ಪಶ್ಚಿಮಘಟ್ಟ ಅಂಚಿನಲ್ಲಿರುವ ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಾಲೂಕು ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷ ಮಾಲ್‌ಮನೆ ಪುರುಷೋತ್ತಮ್ ಹೇಳಿದರು.


ಮಂಗಳವಾರ ಹೋಂಸ್ಟೇ ಮಾಲೀಕರ ಸಂಘ, ಯಸಳೂರು ಪೊಲೀಸ್ ಠಾಣೆ ಹಾಗೂ ವನಗೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಕೆಲ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿ ಸೇರಿದಂತೆ ಕಸವನ್ನು ಬೇಕಾ ಬಿಟ್ಟಿಯಾಗಿ ಎಸೆದು ಪರಿಸರವನ್ನು ಕಲುಷಿತ ಗೊಳಿಸುತ್ತಿದ್ದಾರೆ.

ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಸಂಬಂಧಿತ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು
ಅಭಿಪ್ರಾಯಪಟ್ಟರು. ಯಸಳೂರು ಪೊಲೀಸ್ ಠಾಣೆಯ ಪಿಎಸ್‌ಐ ಟಿ. ಸಲ್ಮಾನ್ ಮಾತನಾಡಿ, ಸುಂದರ ಪರಿಸರವನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರವಾಸಿ ತಾಣಗಳ ಅಶುಚಿತೆಯನ್ನು ತಡೆಯಲು ಮುಂದಿನ
ದಿನಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ನಿಗಾ ವಹಿಸಲಾಗುವುದುಎಂದು ತಿಳಿಸಿದರು.


ಹೋಂಸ್ಟೇ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಣಿಗಲ್ ಪ್ರಸನ್ನ ಮಾತನಾಡಿ, ಬಿಸ್ಥೆ ಅಭಯಾರಣ್ಯದ ಅಂಚಿನ ಪ್ರವಾಸಿ ತಾಣಗಳಲ್ಲಿ ನಡೆದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಸುಮಾರು ಒಂದು ಟನ್‌ಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ
ಸಂಗ್ರಹವಾಗಿದೆ ಎಂದು ಹೇಳಿದರು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಒಂದು ಸಂಸ್ಥೆ ಅಥವಾ ಇಲಾಖೆಯಿಂದ
ಮಾತ್ರ ಸಾಧ್ಯವಿಲ್ಲ. ಸಮಾಜದ ಎಲ್ಲಾ ವರ್ಗದವರು ಕೈಜೋಡಿಸಿದರೆ ಮಾತ್ರ ಮಲೆನಾಡು ಕಸದ ತೊಟ್ಟಿಯಾಗುವುದನ್ನು
ತಡೆಯಲು ಸಾಧ್ಯ.


ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು
ವುದು ಎಂದು ಹೇಳಿದರು. ಸ್ವಚ್ಛತಾ ಅಭಿಯಾನದ ಅಂಗವಾಗಿ ವನಗೂರು-ಕೂಡರಸ್ತೆಯಿಂದ ಬಿಗ್ಗೆ ಗ್ರಾಮವರೆಗೆ ಹಾಗೂ ಮೂಕನಮನೆ ಪಾಲ್ಸ್, ಪಟ್ಲಬೆಟ್ಟ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವನಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀರ್, ಸದಸ್ಯ ಸತೀಶ್, ವನಗೂರು ಕೃಷಿ ಬ್ಯಾಂಕ್ ಅಧ್ಯಕ್ಷ ಕೌಶಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಉಲ್ಲೇಖದ ಪಠ್ಯಪುಸ್ತಕ ನಿಷೇಧ ಮುದ್ರಿತ

ಅಬಾಕಸ್ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ

ಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಲ್ಲಬೇಕು – ಡಾ. ಬಿ.ವಿ ನಂದೀಶ್

Leave a Comment