NEWS

ಸಾರ್ವಜನಿಕ ಪ್ರದೇಶದಲ್ಲಿಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸಲು ಆದೇಶ

ಪಾಲನೆ ನ್ಯೂಸ್


ಮೈಸೂರು : ಸಂಘ-ಸಂಸ್ಥೆಗಳ, ಸಂಘಟನೆಗಳು, ಸಾರ್ವಜನಿಕರು ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಪ್ಲೇಕ್ಸ್ ಮತ್ತು ಬ್ಯಾನರ್ಸ್ ಗಳನ್ನು ಅಳವಡಿಸಬೇಕಾದ್ದಲ್ಲಿ ಸಂಬಂಧಿಸಿದ ಪ್ರದೇಶದ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದ್ದು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗದಂತೆ ನಿಗಧಿತ ಅವಧಿ ಮುಕ್ತಾಯ ನಂತರ ತೆರವುಗೊಳಿಸಬೇಕಾಗಿರುತ್ತದೆ.


ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಪ್ಲೇಕ್ಸ್ ಮತ್ತು ಬ್ಯಾನರ್ಸ್ ಗಳನ್ನು ಅಳವಡಿಸಿರುವುದು ಜಿಲ್ಲೆಯ ಪಾರಂಪಾರಿಕತೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗುತ್ತಿರುತ್ತದೆ. ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) (ತಿದ್ದುಪಡಿ) ಅಧಿನಿಯಮ ೨೦೨೦ ರನ್ವಯ ಕಾಯ್ದೆಯ ಕಲಂ ೩ ರನ್ವಯ ಜಾಹೀರಾತುಗಳ ಮೂಲಕ ಅನಧಿಕೃತವಾಗಿ ವಿರೂಪಗೊಳಿಸುವುದಕ್ಕೆ ಗರಿಷ್ಠ ೬ ತಿಂಗಳುಗಳ ಸೆರೆವಾಸದ ದಂಡನೆ ಅಥವಾ ಗರಿಷ್ಠ ಒಂದು ಸಾವಿರ ರೂಗಳವರೆಗೆ ದಂಡ ವಸೂಲಾತಿ ಅಥವಾ ಎರಡು ವಿಧವಾದ ದಂಡನೆ ವಿಧಿಸಲು ಅವಕಾಶ
ಇರುತ್ತದೆ.


ಕರ್ನಾಟಕ ಮುನ್ಸಿಪಲ್ ಆಕ್ಟ್ ೧೯೬೪ರ ಕಲಂ ೧೩೩ ಹಾಗೂ ೧೩೬ ರಲ್ಲಿ ಕ್ರಮವಾಗಿ ಜಾಹೀರಾತು ಹಾಗೂ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಬಗ್ಗೆ ಸ್ಪಷ್ಟವಾದ ಆದೇಶವಿರುತ್ತದೆ. ಆದ್ದರಿಂದ ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳ, ಸಂಘಟನೆಗಳು, ಸಾರ್ವಜನಿಕರು, ಹಾಗೂ ಇತರರು ಸಾರ್ವಜನಿಕ ಪ್ರದೇಶದಲ್ಲಿ ಪ್ಲೇಕ್ಸ್ ಮತ್ತು ಬ್ಯಾನರ್ಸ್ ಗಳನ್ನು ಅಳವಡಿಸಲು ಅನುಮತಿ ನೀಡುವಾಗ ಕಾರ್ಯಕ್ರಮಗಳ ನಿಗಧಿತ ಅವಧಿಗೆ ಮಾತ್ರ ಸೀಮಿತಗೊಳಿಸಿ, ಕಾರ್ಯಕ್ರಮಗಳು ಮುಕ್ತಾಯವಾದ ನಂತರ ಸಂಬAಧಪಟ್ಟವರೇ ಪ್ಲೇಕ್ಸ್ ಮತ್ತು ಬ್ಯಾನರ್ಸ್ ಗಳನ್ನು
ಕಡ್ಡಾಯವಾಗಿ ತೆರವುಗೊಳಿಸಬೇಕು.


ಒಂದು ವೇಳೆ ತೆರವುಗೊಳಿಸದಿದ್ದರೇ ಸಂಬಂಧಪಟ್ಟವರ ಮೇಲೆ Echiditchinchinchinchi othite thitchichchichchies (thideevetineioti oji jijigudiemetine) chichin ೧೯೮೧ ಹಾಗೂ ಕರ್ನಾಟಕ ಮುನ್ಸಿಪಾಲಿಟಿಗಳ ಅಧಿನಿಯಮ ೧೯೬೪ ಕಾಯ್ದೆಗಳನ್ವಯ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು. ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ
ಪ್ರದೇಶಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪ್ಲೇಕ್ಸ್ ಮತ್ತು ಬ್ಯಾನರ್ಸ್ ಗಳನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ್ ರೆಡ್ಡಿ ಅವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಈಸ್ಟ್ ಇಂಡಿಯಾ ಕಂಪನಿ ಎರಡನೇ ಬಾರಿಗೆ ಬಾಗಿಲು ಮುಚ್ಚಿದೆ

ಸೇನಾ ಪರೀಕ್ಷೆ ವೇಳೆ ಅಕ್ರಮ ನಡೆಸಿರುವ 18 ಮಂದಿ ವಿರುದ್ದ ದೂರು

“ಅಕ್ಷರ ಹೊಸ ಕಾವ್ಯ” ವಸಂತ ಕವಿಗೋಷ್ಠಿ ಇಂದು ಸಂಜೆ

Leave a Comment