ಪಾಲನೆ ನ್ಯೂಸ್
ಕೋಲ್ಕತ್ತ: ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ ವೆಸ್ಟ್ ಇಂಡೀಸ್ ತಂಡ ಟಿ-20 ವಿಶ್ವಕಪ್ ಪಂದ್ಯದಲ್ಲಿ ಗುರುವಾರ ಇಟಲಿ ತಂಡದ ವಿರುದ್ದ 42 ರನ್‌ಗಳ ಸುಲಭಗೆಲುವು ಸಾಧಿಸುವುದರೊಂದಿಗೆ ಲೀಗ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯಗಳಿಸಿದ್ದು, ಸೂಪರ್ ಎಂಟರ ಹಂತಕ್ಕೆ ಸಜ್ಜಾಯಿತು.
ಹೋಪ್ 46 ಎಸೆತಗಳಲ್ಲಿ 75 ರನ್ ಹೊಡೆದು ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ನೆರವಾದರು. 164 ರನ್ ಗಳಿಸಲು ಉತ್ತರವಾಗಿ ಇಟಲಿ 18 ಓವರುಗಳಲ್ಲಿ 123 ರನ್ ಗಳಿಗೆ ಆಲ್ ಔಟ್ ಆಯಿತು. ಮಧ್ಯಮ ವೇಗಿಗಳಾದ ಮ್ಯಾಥ ಫೋರ್ಡ್ (19ಕ್ಕೆ3), ಶಮರ್ ಜೋಸೆಫ್ (30ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಗುಡಕೇಶ್ ಮೋತಿ (24ಕ್ಕೆ2) ಅವರು ಎದುರಾಳಿ ತಂಡದ ಪತನಕ್ಕೆ ಕಾರಣರಾದರು. ಹೋಪ್ WESTA ಸರಾಗವಾಗಿ ಆಡಿ ಆರು ಬೌಂಡರಿ, ನಾಲ್ಕು ಸಿಕ್ಸರ್ ಬಾರಿಸಿದರು.

ಇಟಲಿಯ ಅನುಭವಿ ಸ್ಪಿನ್ನರ್‌ಗಳಾದ ಬೆನ್ ಮನೆಂಟಿ (37ಕ್ಕೆ2) ಮತ್ತು ಕ್ರಿಶನ್ ಕಲುಗಮಗೆ (25ಕ್ಕೆ2) ಅವರು ವಿಂಡೀಸ್ ರನ್ ವೇಗಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಿದರು. ಇಟಲಿ ಒಂದು ಗೆಲುವಿನೊಡನೆ (ನೇಪಾಳ ವಿರುದ್ದ ತನ್ನ ಅಭಿಯಾನ ಮುಗಿಸಿತು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

