NEWS

ಚಲಾವಣೆಯಲ್ಲಿ ಇಲ್ಲದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಬದಲಾಯಿಸಲು ಯತ್ನ

ಪಾಲನೆ ನ್ಯೂಸ್

ಬೆಂಗಳೂರು: ಚಲಾವಣೆಯಲ್ಲಿ ಇಲ್ಲದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಯಲ್ಲಿ ಬದಲಾಯಿಸಲು ಯತ್ನಿಸಿದ ವ್ಯಕ್ತಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.


ನಾಗಶೆಟ್ಟಿಹಳ್ಳಿಯ ನಿವಾಸಿ ಎಸ್.ವಿ. ರಮೇಶ್ (52) ಬಂಧಿತ ಆರೋಪಿ. ಏ.9ರಂದು ನೃಪತುಂಗ ರಸ್ತೆಯ ಆರ್‌ಬಿಐ ಕಚೇರಿಗೆ ಭೇಟಿ ನೀಡಿದ್ದ ಆರೋಪಿಯು 2 ಸಾವಿರ ರೂ. ಮುಖಬೆಲೆಯ 300ಕ್ಕೂ ಅಧಿಕ ನಕಲಿ ನೋಟುಗಳನ್ನು ತಂದಿದ್ದ. ಅಧಿಕಾರಿಗಳು ನೋಟುಗಳ ತಪಾಸಣೆ ನಡೆಸಿದಾಗ ಅವುಗಳು ನಕಲಿ ಎಂಬುದು ತಿಳಿದುಬಂದಿದೆ.


300 ಅಧಿಕ ನೋಟು ಬಂಧನ ತಂದಿದ್ದ ಆರೋಪಿ ಆರ್‌ಬಿಐ ಸಹಾಯಕ ಜನರಲ್ ಮ್ಯಾನೇಜ‌ರ್ ಭೀಮ್ ಚೌಧರಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗೆ ನಕಲಿ ನೋಟು ನೀಡಿದವರಾರು ಮತ್ತು ಅವುಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು 2023ರಲ್ಲಿ ಆರ್‌ಬಿಐ ಚಲಾವಣೆಯಿಂದ ಹಿಂಪಡೆದಿದೆ. ಆದರೆ ಸಾರ್ವಜನಿಕರಿಗೆ ಆರ್‌ಬಿಐ ಕಚೇರಿಗಳಲ್ಲಿ ಇವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಬ್ಬ ವ್ಯಕ್ತಿ ಏಕಕಾಲಕ್ಕೆ ಗರಿಷ್ಠ 20,000 ರೂ. ಮೌಲ್ಯದ ನೋಟುಗಳನ್ನು ಬದಲಾಯಿಸಲು ಅವಕಾಶವಿದೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅಫ್ಘಾನ್ ಸೇನೆ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ; 150ಕ್ಕೂ ಹೆಚ್ಚು ಸಾವು

ರಾಜಧಾನಿ ಬೆಂಗಳೂರಿನ ಜೀವನ ಅತ್ಯಂತ ದುಬಾರಿ.

ಕಾವ್ಯದ ಕಡುಮೋಹಿಯಾಗಿದ್ದ ಕವಿ ಕೊನಾಪು – ಸಾಹಿತಿ ಸತೀಶ್ ಜವರೇಗೌಡ ಬಣ್ಣನೆ

Leave a Comment