NEWS

ಫೆ.1ರಂದು ಶಿವಳ್ಳಿ ಗ್ರಾಮದಲ್ಲಿ ಹಿಂದು ಸಮಾಜೋತ್ಸವ

ಪಾಲನೆ ನ್ಯೂಸ್

ಮಂಡ್ಯ : ಶಿವಳ್ಳಿ ಗ್ರಾಮದ ಹಿಂದು ಸಮಾಜೋತ್ಸವ ಆಯೋಜನಾ ಸಮಿತಿ ವತಿಯಿಂದ ಫೆ.1ರಂದು ಹಿಂದು ಸಮಾಜೋತ್ಸವವು ಶಿವಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಸಮಿತಿ ಸದಸ್ಯ ರಾಘವೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಗಳ ನಡುವೆ ಸಾಮರಸ್ಯ, ಹಿಂದು ಧರ್ಮೀಯರಲ್ಲಿ ಒಗ್ಗಟ್ಟು, ಜಾಗೃತಿ, ಧಾರ್ಮಿಕ ಅಸಡ್ಡೆ ತಪ್ಪಸುವುದು ಸಮಾಜೋತ್ಸವದ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಂದು ಮಧ್ಯಾಹ್ನ 3 ಗಂಟೆಗೆ ಗ್ರಾಮದ ಶ್ರೀ ತಿರುಮಲನಾರಾಯಣ ಸ್ವಾಮಿ ದೇವಸ್ಥಾನದಿಂದ ವಿಶ್ವೇಶ್ವರಯ್ಯ ವೃತ್ತದ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಪಕ್ಕದ ಹಳೇ ಚೆನ್ನಯ್ಯಗೌಡ ಚಿತ್ರಮಂದಿರ ಮೈದಾನದವರೆಗೆ ಶೋಭಾಯಾತ್ರೆ ನಡೆಸಲಾಗುವುದು. ಸಂಜೆ 4.30ಕ್ಕೆ ಮೈದಾನದ ಆವರಣದಲ್ಲಿ ಸಾರ್ವಜನಿಕ ಸಮಾರಂಭನಡೆಯಲಿದೆ ಎಂದು ಹೇಳಿದರು.

ಹಿಂದು ಸಮಾಜೋತ್ಸವದ ಸಮಾ ರಂಭವು ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ನಿವೃತ್ತಯೋಧ, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ಆರ್.ಲೂಯಿಸ್ ಮುಖ್ಯ ಅತಿಥಿಗಳಾಗಿ, ಮೈಸೂರು ವಿಭಾಗ ಸಹ ಬೌದ್ಧಿಕ್ ಪ್ರಮುಖ್ ಮಹೇಂದ್ರ ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ಸಾಧ್ಯತೆಯಿದ್ದು, ಪಕ್ಷ ಬೇದ, ಜಾತಿ ತೊರೆದುಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಸಮುದಾಯ ಭಾಗವಹಿಸುವಂತೆ ಮನವಿ ಮಾಡಿದರು.

ಗೋಷ್ಟಿಯಲ್ಲಿ ವೇಣುಗೋಪಾಲ್, ಕುಮಾರ್, ನಾಗರಾಜ್, ವೆಂಕಟೇಶ್ ಇದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಶ್ರೀ ಕೃಷ್ಣ ದೇವರಾಯ ಜಯಂತಿ ಶುಭಾಶಯಗಳು

ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ವಂಚನೆ

ಮೋದಿಜೀ ಕರೆ ನೀಡಿದ ಮಿತ ಬಳಕೆ, ಮನವಿಯೇ ಹೊರತು ಕಾನೂನಲ್ಲಾ, ವಿರೋಧವೇಕೇ?

Leave a Comment