ಪಾಲನೆ ನ್ಯೂಸ್
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸ್ವಪ್ರತಿಷ್ಠೆಯ ಕಾರಣದ ಯುದ್ಧದಿಂದಾಗಿ, ಅದರ ಆಜು- ಬಾಜು ಹಾಗೂ ಜಗತ್ತಿನ ಹಲವಾರು ರಾಷ್ಟ್ರ ಗಳಲ್ಲಿ ಪೆಟ್ರೋಲ್ -ಡೀಸೆಲ್ -ಗ್ಯಾಸ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ಭಾರತಕ್ಕೆ ಬರಬೇಕಾದ ಪೆಟ್ರೋಲ್ ಹಾಗೂ ಡೀಸೆಲ್ ಟ್ಯಾಂಕರ್ ರ್ಹೊರ್ಮುಜ್ ಜಲ ಸಂಧಿ ಮಾರ್ಗದಲ್ಲಿ ತಡೆಹಿಡಿದಾಗ, ರಾಜತಾಂತ್ರಿಕ ಮಾರ್ಗದ ಮೂಲಕ ಭಾರತಕ್ಕೆ ತೈಲ ಟ್ಯಾಂಕರ್ ಗಳು ತಲುಪುವಂತೆ ಮಾಡುವ ಮೂಲಕ ಕಚ್ಚಾ ತೈಲದ ಸಮಸ್ಯೆಯಾಗದಂತೆ ಮಾಡಲಾಯಿತು. ಆದರೆ, ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತಡವಾಗಿ ಸರಬರಾಜಾದ ಕಾರಣ ಸಮಸ್ಯೆ ಸೃಷ್ಟಿಯಾಯಿತು. ಹಾಗೂ ಹೀಗೂ ಮಾಡಿ ಸರ್ಕಾರ ಹೇಗೋ ಅದನ್ನು ಒಂದು ಹಂತಕ್ಕೆ ಪರಿಸ್ಥಿತಿ ನಿಭಾಯಿಸಿಕೊಂಡು ಬರುತ್ತಿದೆ.
ಯುದ್ಧ ನಡೆಯುತ್ತಲ್ಲೇ ಇರುವ ಸುಮಾರು ಎರಡು ತಿಂಗಳ ಅವಧಿಯಲ್ಲಿ ಅನಿರೀಕ್ಷಿತವಾಗಿ ಸೃಷ್ಟಿಯಾದ ಈ ತೈಲ ಸಮಸ್ಯೆಯಿಂದ ಹಲವಾರು ದೇಶಗಳಲ್ಲಿ ತೈಲ ಹಾಗೂ ತೈಲೋತ್ಪನ್ನಗಳ ಬೆಲೆ ಹಾಗೂ ಇತರೆ ಪದಾರ್ಥಗಳ ಬೆಲೆ ಏರಿಸಿವೆ. ಈ ಎಲ್ಲವುಗಳ ಬೆಲೆ ಏರಿಕೆ ಅನಿವಾರ್ಯವಾದರೂ ಸಹಾ, ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಅಷ್ಟೊಂದು ಮಟ್ಟದಲ್ಲಿ ಬೆಲೆ ಏರಿಕೆ ಯಾಗದಿರುವುದನ್ನು ಸ್ಮರಿಸಬಹುದಾಗಿದೆ.
ಅದೇನೇ ಇರಲಿ, ಇಂತಹ ಸಂದರ್ಭದಲ್ಲಿ, ರಾಷ್ಟ್ರದ ಅಭಿವೃದ್ಧಿ ಹಾಗೂ ಭದ್ರತೆ ದೃಷ್ಟಿಯಿಂದ, ರಫ್ತ್ತು ಹೆಚ್ಚಿಸಿ-ಆಮದು ಕಡಿಮೆ ಗೊಳಿಸಿ ವಿದೇಶಿ ವಿನಿಮಯ ಹೆಚ್ಚಿಸಿ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ದೂರದೃಷ್ಟಿಯಿಂದ -ವಡೋದರಾಧಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋಧಿಯವರು ಸಾರ್ವಜನಿಕ ರನ್ನು ಉದ್ದೇಶಿಸಿ ಮಾತನಾಡುತ್ತಾ, ತೈಲ ಉತ್ಪನ್ನ ಗಳ ಬಳಕೆ ಕಡಿಮೆ, ಚಿನ್ನ ಖರೀದಿ ಕಡಿಮೆಗೊಳಿಸಿ, ಆನ್ಲೈನ್ ಶಿಕ್ಷಣ, ಆನ್ಲೈನ್ ಉದ್ಯೋಗ, ವರ್ಕ್ ಫ್ರಮ್ ಹೋಮ್, ಅಡುಗೆ ಅನಿಲ ಹಾಗೂ ರಾಸಾಯನಿಕ ಗೊಬ್ಬರ ಕಡಿಮೆ ಬಳಕೆ -ಸಾವಯವ ಕೃಷಿ ಉತ್ತೇಜಿಸಿ, ವೊಕಲ್ ಫಾರ್ ಲೋಕಲ್,ವರ್ಚಯಲ್ ಮೀಟಿಂಗ್, ಅನಗತ್ಯ ಪ್ರವಾಸ ಕಡಿತ, ಡಿಜಿಟಲ್ ಟೆಕ್ನಾಲಜಿ ಬಳಕೆ,
ಈ ರೀತಿಯಲ್ಲಿ ಮಿತ ಬಳಕೆಯ ಬಗ್ಗೆ ಭಾರತ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಇದನ್ನು ವಿರೋಧ ಪಕ್ಷದವರು ಟೀಕಿಸುತ್ತಾ, ಮೋಧಿಯವರ ಭಾಷಣವನ್ನು ವ್ಯಂಗ್ಯ ಮಾಡುತ್ತಾ, ಅಗತ್ಯ ವಸ್ತುಗಳ ಬಳಕೆ ಕಡಿಮೆ ಮಾಡಿ ಎನ್ನುವುದು, ತೈಲೋತ್ಪನ್ನಗಳು ಹಾಗೂ ಇತರೆ ಪದಾರ್ಥಗಳ ಬೆಲೆ ಏರಿಸುವ ಮುನ್ಸೂಚನೆ ಹಾಗೂ ಚಿನ್ನ ಖರೀದಿಯ ಕಡಿತದ ಬಗ್ಗೆ ಹೇಳಿರುವುದು ಜನರ ಆಶೆಗಳಿಗೆ ಕಡಿವಾಣ ಹಾಕುತ್ತಿದೆ. ಇದು ಮೋಧಿ ಸರ್ಕಾರದ ವೈಫಲ್ಯ ಎಂದು ಟೀಕಿಸುತ್ತಿವೆ.
ತೈಲೋತ್ಪನ್ನಗಳ ಕೊರತೆ ಇರುವುದರಿಂದ ಈ ರೀತಿಯಾಗಿ ಹೇಳುತ್ತಿದ್ದಾರೆ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಆತಂಕ ಬೇಡ ಸದ್ಯಕ್ಕೆ ತೈಲೋತ್ಪನ್ನಗಳ ಕೊರತೆ ಇಲ್ಲ ಎಂಬುದಾಗಿ ಸ್ಪಷ್ಟೀಕರಣ ನೀಡಿದೆ.
ಈ ಹಿಂದೆ ಆರ್ಥಿಕವಾಗಿ ಸಬಲರಾಗಿರುವವರು ಸಿಲಿಂಡರ್ ಸಬ್ಸಿಡಿಯನ್ನು ತ್ಯಜಿಸುವಂತೆ ಹೇಳಿಕೆ ನೀಡಿದ್ದ ಮೋದಿಜೀ ಯವರ ಕರೆಗೆ ಓಗೊಟ್ಟು ಲಕ್ಷಾಂತರ ಮಂದಿ ಸಿಲಿಂಡರ್ ಸಬ್ಸಿಡಿ ತ್ಯಜಿಸಿದ ಪರಿಣಾಮವಾಗಿ ಕೇಂದ್ರ ಸರ್ಕಾರಕ್ಕೆ ಕೋಟ್ಯಂತರ ಹಣ ಉಳಿಕೆಯಾಗಿ, ಇದರಿಂದ ದೇಶದ ಅಭಿವೃದ್ಧಿಗೆ ಅಲ್ಪ ಕಾಣಿಕೆ ನೀಡಿದಂತಾಗಿತ್ತು.mಈ ಹಿಂದೆಯೂ ರಾಷ್ಟ್ರದ ಹಲವಾರು ನೇತಾರರು ರಾಷ್ಟ್ರದ ಹಿತದೃಷ್ಟಿಯಿಂದ ಈ ರೀತಿಯ ಕರೆ ನೀಡಿದ್ದು ದೇಶವಾಸಿಗಳು ಸಕಾರಾತ್ಮಕವಾಗಿಯೇ ಸ್ಪಂದಿಸಿರುವುದನ್ನು ಕಾಣಬಹುದಾಗಿದೆ.
ಅಂತೆಯೇ, ಮದ್ಯಪ್ರಾಜ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ರೂಪಾಯಿ ಮೌಲ್ಯ ಕಡಿಮೆಯಾಗದಂತೆ, ವಿದೇಶಿ ವಿನಿಮಯ ಸ್ಥಿರವಾಗಿರುವಂತೆ ಹಾಗೂ ಭಾರತ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗದಂತೆ ಮಾಡುವ ದೂರದೃಷ್ಟಿಯ ಉದ್ದೇಶದಿಂದ ಮಿತ ಬಳಕೆಗೆ ಮೋಧಿಯವರು ನೀಡಿರುವ ಕರೆಯ ಬಗ್ಗೆ ಅನಾನುಕೂಲ ವಾಗುವವರು /ವೈಯಕ್ತಿಕ ಹಿತಾಶಕ್ತಿಗೆ ಧಕ್ಕೆ ಯಾಗುವವರು ಈ ಕರೆಗೆ ಸ್ಪಂಧಿಸುವುದು ಬೇಡ. ದೇಶ ಮೊದಲು ಅನ್ನುವವರು, ಅವರ ಉದ್ದೇಶ ರಾಷ್ಟ್ರೀಯ ಹಿತಶಕ್ತಿಯಿಂದ ಕೂಡಿದೆ ಎನ್ನುವವರು ಕೈ ಜೋಡಿಸಲಿ.


ಮೋಧಿಯವರ ಈ ಕರೆ ಅನಾವಶ್ಯಕ ಹಾಗೂ ಅನಗತ್ಯ ಎನ್ನುವವರು ಅರೋಗ್ಯಕರವಾಗಿ ಚರ್ಚಿಸಿ ಸಾಧಕ -ಭಾಧಕಗಳ ಅಭಿಪ್ರಾಯ ಮಂಡಿಸಿ ತೀರ್ಮಾನ ಜನರಿಗೆ ಬಿಡಲಿ. ಮೋಧೀಜೀಯವರ ಈ ಕರೆ ಮನವಿಯೇ ಹೊರತು ಕಾನೂನಲ್ಲ. ನೀವೆಂನಂತೀರಾ.
ಜಿ. ಧನಂಜಯ ದರಸಗುಪ್ಪೆ, ಮಂಡ್ಯ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
