NEWS

ತಾಂತ್ರಿಕ ದೋಷ: ವಾಷಿಂಗ್ಟನ್‌ಗೆ ಮರಳಿದ ಟ್ರಂಪ್‌ ಅವರ ಏ‌ರ್ ಫೋರ್ಸ್ ಒನ್ ವಿಮಾನ

ಪಾಲನೆ ನ್ಯೂಸ್

ವಾಷಿಂಗ್ಟನ್: ದಾವೋಸ್‌ಗೆ ತೆರಳುತ್ತಿದ್ದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ಗೆ ಹಿಂದಿಗಿರುವ ಘಟನೆ ವರದಿಯಾಗಿದೆ.

ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಟ್ರಂಪ್‌ ಪ್ರಯಾಣ ಬೆಳೆಸಿದ್ದರು. ಆದರೆ ಏರ್ ಫೋರ್ಸ್ ವಿಮಾನದ ಎಲೆಕ್ನಿಕ್ ಸಮಸ್ಯೆ ಕಾಣಿಸಿಕೊಂಡಿತು. ಬಳಿಕ ಜಾಯಿಂಟ್ ಬೇಸ್ ಆಂಡ್ರಸ್ ಮಿಲಿಟರಿ ನೆಲೆಯಲ್ಲಿ ವಿಮಾನ ಸುರಕ್ಷಿತವಾಗಿ ಇಳಿಸಲಾಯಿತು.

ಟ್ರಂಪ್‌ ಅವರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದೆ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳನ್ನು ಟ್ರಂಪ್‌ ಭೇಟಿಯಾಗಲಿದ್ದಾರೆ.

ಈ ಮೊದಲು ಗ್ರೀನ್‌ಲ್ಯಾಂಡ್ ಅನ್ನು ವಶಕ್ಕೆ ಪಡೆದುಕೊಳ್ಳುವ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಲವಂತವಾದರೂ ಸರಿ ಆ ದೇಶವನ್ನು ಪಡೆದುಕೊಳ್ಳುವುದನ್ನು ನಿರಾಕರಿಸಲಾಗದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಟ್ರಂಪ್‌ ದಾವೋಸ್ ಪ್ರಯಾಣ ಬೆಳೆಸಿದ್ದಾರೆ.

ಗುರುವಾರದಂದು ಶಾಂತಿ ಮಂಡಳಿ (ಬೋರ್ಡ್ ಆಫ್ ಪೀಸ್) ಕಾರ್ಯಕ್ರಮದಲ್ಲೂ ಟ್ರಂಪ್ ಭಾಗವಹಿಸಲಿದ್ದು, ಗಾಂಜಾ ಶಾಂತಿ ಯೋಜನೆ ಅನುಮೋದಿಸುವ ನಿರ್ಣಯಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಸಮಾಜಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ಚೇತನ ಭಗವಾನ್ ಬುದ್ಧ

ಕ್ರೆಡಿಟ್ – ಐ ವರ್ಷಗೆ ನ್ಯಾಷನಲ್ ಅಚಿವರ್ಸ್ ಪ್ರಶಸ್ತಿ

“2025ರ ಮೇ ತಿಂಗಳ ಅಪರೇಷನ್ ಸಿಂಧೂರ್ ಸಂಘರ್ಷ ತಡೆಯದಿದ್ದರೆ 3.5 ಕೋಟಿ ಜನರು ಸಾಯುತ್ತಿದ್ದರು”

Leave a Comment