NEWS

ಯುವ ಜನತೆ ಅಂಬಿಗರ ಚೌಡಯ್ಯ ರವರ ನಡೆ-ನುಡಿ ಜ್ಞಾನವನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಬೇಕು

ಮೂಢನಂಬಿಕೆಗಳು ಮೌಢ್ಯ ಮತ್ತು ಜಾತಿ ವ್ಯವಸ್ಥೆಯಿಂದ ಮಾನವೀಯತೆಯ ಕಡೆಗೆ ಸಾಗಬೇಕು -ಬಿ.ಸಿ ಶಿವಾನಂದಮೂರ್ತಿ

ಪಾಲನೆ ನ್ಯೂಸ್

‌ಮಂಡ್ಯ: ಸಮಾಜದಲ್ಲಿನ ಮೂಢನಂಬಿಕೆ, ಮೌಢ್ಯ ಮತ್ತು ಜಾತೀಯತೆಯನ್ನು ಹೋಗಲಾಡಿಸಿ ಮಾನವೀಯತೆಯ ಕಡೆಗೆ ಸಮಾಜ ಸಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಅವರು ಹೇಳಿದರು.

ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಅಂಬಿಗರ ಚೌಡಯ್ಯ ರವರು ಮೂಡನಂಬಿಕೆಗಳು, ಜಾತಿ ವ್ಯವಸ್ಥೆ ಮತ್ತು ಮೌಢ್ಯತೆಯ ವಿರುದ್ಧ ವಚನಗಳ ಮೂಲಕ ಸಮರ ಸಾರಿದವರು. 247 ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ರವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬೇಕು ಎಂಬ ಉದ್ದೇಶದಿಂದ ಹಲವು ಸಂದೇಶ ಮತ್ತು ವಚನಗಳನ್ನು ನೀಡಿದ್ದಾರೆ. ಅಂಬಿಗರ ಚೌಡಯ್ಯ ಜಯಂತಿಯನ್ನು ಶಾಲೆ ಕಾಲೇಜು ಮಟ್ಟದಲ್ಲಿ ಮಾಡಬೇಕು. ಯುವ ಜನತೆ ಅಂಬಿಗರ ಚೌಡಯ್ಯ ರವರ ನಡೆ-ನುಡಿ ಜ್ಞಾನವನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

ಅಂಬಿಗರ ಚೌಡಯ್ಯ ಅವರು 12 ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರು. ವೃತ್ತಿಯಿಂದ ಅಂಬಿಗನಾದರು ಪ್ರವೃತ್ತಿಯಲ್ಲಿ ಅನುಭಾವಿ ವಚನಕಾರ ಆಗಿದ್ದರು ಎಂದು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಸ್. ಬಿ ಶಂಕರೇಗೌಡ ಅವರು ಮಾತನಾಡಿ ಕಾಯಕ ಮತ್ತು ವ್ಯಕ್ತಿನಾಮದಿಂದ ಅಂಬಿಗರ ಚೌಡಯ್ಯ ಎಂಬುದೇ ಅವರ ವಚನಗಳ ಅಂಕಿತವಾಗಿದೆ, ಅನೇಕ ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕು ಡೊಂಕು ತಿದಿದ್ದಾರೆ ಎಂದು ಉಪನ್ಯಾಸ ನೀಡಿದರು

ಮಂಡ್ಯ ತಾಲೂಕಿನ ಮರಡೀಪುರ ಗ್ರಾಮದ ಅಂಬಿಗರ ಚೌಡಯ್ಯ ರವರ ಸಮುದಾಯದ ವಿದ್ಯಾರ್ಥಿ ಅಂಜನಾ.ಪಿ ಸರ್ ಎಂ ವಿಶ್ವೇಶ್ವರಯ್ಯ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತಿದ್ದು ಬಾಲ್ ಬ್ರಾಂಡ್ಮಿಟನ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಅಂಜನಾ ಗೆ ಗೌರವಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಬಿ ವಿ ನಂದೀಶ್,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕರು ಬಿ ಲಿಂಗಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಈರಯ್ಯ ಮತ್ತು ಮುಖಂಡರುಗಳಾದ ಸಂದೇಶ್, ಜೆ ರಾಜಶೇಖರಯ್ಯ ಬಿ. ಎಸ್ ಅನುಪಮಾ ಇನ್ನಿತರರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ರಾಜ್ಯ ಕಂಡ ಧೀಮಂತ ನಾಯಕ ಕೆಂಗಲ್ ಹನುಮಂತಯ್ಯ : ಸಿಎಂ

ಎಸ್ ಅಬ್ರಹಾಂ ಲಿಂಕನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

ಇಂದು ಎಂಆರ್‌ಎಂ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

Leave a Comment