ಪಾಲನೆ ನ್ಯೂಸ್
ಮಂಡ್ಯ: ಈ ಜಗತ್ತಿನ ಹುಟ್ಟುವಿಕೆಯ ಜೊತೆಯೇ ಧರ್ಮವು ಜನಿಸಿದೆ. ಹೀಗಾಗಿ ಧರ್ಮ ಕ್ಕೂ ಮತಕ್ಕೂ ಯಾವುದೇ ಸಂಬಂಧವಿಲ್ಲ ಧರ್ಮವು ಸತ್ಯವಾದುದು ಇದನ್ನು ನಿಷ್ಠೆಯಿಂದ ಅನುಸರಿಸುವುದರ ಮೂಲಕ ಮನುಷ್ಯ ಏಳಿಗೆಯನ್ನು, ಸಂಸ್ಕೃತಿಯನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಜಗದ್ಗುರು ಶ್ರೀ ವಿದು ಶೇಖರ ಭಾರತಿ ಸ್ವಾಮಿಗಳು ಕರೆ ನೀಡಿದರು.
ಮಂಡ್ಯ ನಗರಕ್ಕೆ ಎರಡು ದಿನಗಳ ಭೇಟಿ ನೀಡಿ ನಗರದ ವಿದ್ಯಾಗಣಪತಿ ದೇವಾಲಯದಲ್ಲಿ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಮತ್ತು ಶ್ರೀ ಶಂಕರ ಸೇವಾಪ್ರತಿಷ್ಟಾನ ಆಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಭಕ್ತಾದಿಗಳಿಗೆ ಆಶೀರ್ವಾಚನ ನೀಡಿದರು.
ಧರ್ಮವು ಜನರ ಕಣ್ಣಿಗೆ ಗೋಚರಿಸುವುದಿಲ್ಲ ಆದರೆ ಅದರ ಫಲಗಳು ಜನರನ್ನು ತಲುಪುತ್ತವೆ. ಯಾರೋ ಟೀಕೆ ಮಾಡಿದಾಕ್ಷಣ ಧರ್ಮಕ್ಕೆ ಯಾವ ಹಾನಿಯು ಆಗಿವುದಿಲ್ಲ. ಅದು ಶಾಶ್ವತ. ಆದ್ದರಿಂದಲೇ 12 ನೇ ಶತಮಾನದಲ್ಲೇ ಭಗವಾನ್ ಶಂಕರರು ಧರ್ಮವನ್ನು ಪ್ರಚಾರಪಡಿಸಲು ಅನೇಕ ಬಾರಿ ದೇಶ ಸಂಚಾರ ಮಾಡಿ ಜಾಗೃತಗೊಳಿಸಲು ದೇಶದ 4 ಕ್ಕು ಕಡೆ ಶಕ್ತಿ ಪೀಠಗಳನ್ನು ಸ್ಥಾಪಿಸಿ ಧರ್ಮ ವನ್ನು ಎತ್ತಿ ಹಿಡಿಯುವ ಮಹಾಕಾರ್ಯದಲ್ಲಿ ತೊಡಗಿಸಿಕೊಂಡರು. ಶಂಕರರು ಪ್ರತಿಪಾದಿಸಿದಂತೆ, ಆಸ್ತಿಕ ಪರಂಪರೆಯನ್ನು ಎತ್ತಿ ಹಿಡಿದು ಧರ್ಮ ವನ್ನು ಉಳಿಸಿಕೊಳ್ಳಬೇಕು. ವೈಕ್ತಿಯಿಂದ ಅವರವರ ವಿಶ್ಲೇಷಣೆ ಅನುಸಾರವಾಗಿ ಹುಟ್ಟಿಕೊಂಡಿರುವುದೇ ಮತ. ಮತಗಳನ್ನು ಯಾರು ಬೇಕಾದರೂ ಸ್ಥಾಪಿಸಬಹುದು. ಆದರೆ ಧರ್ಮವನ್ನ ಯಾವ ರೀತಿ ಮಾತನಾಡಬೇಕು ಎಂಬುದನ್ನು ಕಲಿಸಿಕೊಟ್ಟಿದ್ದೆ ಧರ್ಮ. ಏನು ಮಾತನಾಡಿದರು ತರ್ಖ ಬದ್ದವಾಗಿ ಮಾತನಾಡಬೇಕು. ಖುತರ್ಖ ವನ್ನು ಮಾಡಬಾರದು. ಶಾಸ್ತ್ರ ಆಧಾರಿತವಾಗಿ ಚರ್ಚಿಸಿ. ವಿತಂಡ ವಾದಕ್ಕೆ ಬೆಲೆಯಿಲ್ಲ. ಲೋಕದಲ್ಲಿ ಎಲ್ಲರೂ ಒಪ್ಪಲೇಬೇಕಾದ ವಿಷಯ ಎಂದರೆ ಯಾವುದೇ ಕಾರ್ಯದ ಹಿಂದೆ ಕಾರಣವೊಂದಿರುತ್ತದೆ. ಆತ್ಮವು ನಾನಾ ಶರೀರಗಳನ್ನು ಪ್ರವೇಶಿಸುತ್ತದೆ. ಆತ್ಮಕ್ಕೆ ಸಾವಿಲ್ಲ. ಜಗತ್ತಿನಲ್ಲಿ ಎಲ್ಲವನ್ನು ತಿಳಿಯಲಾಗುವುದಿಲ್ಲ ಕೆಲವು ರಹಸ್ಯವಾಗಿರುತ್ತವೆ ಅದನ್ನು ಹುಡುಕುವ ಪ್ರಯತ್ನವೇ ಸಂಶೋಧನೆ. ವಿಜ್ಞಾನಿಗಳಿಗೂ ಅನೇಕ ಬಾರಿ ಇದರ ರಹಸ್ಯ ಗೋಚರವಾಗುವುದಿಲ್ಲ.ಅದನ್ನೇ ದೇವರು ಅಥವಾ ಅಗೋಚರ ಶಕ್ತಿ ಅದನ್ನು ಮೊರೆಹೋಗುವುದೇ ಮನುಜ ಧರ್ಮ ಎಂದರು.
ಯಾರೋ ಟೀಕೆ ಮಾಡಿದಾಕ್ಷಣ ಧರ್ಮ ದ ಶ್ರೇಷ್ಠತೆ ಕಡಿಮೆಯಾಗುವುದಿಲ್ಲ. ಟೀಕೆಗಳು ವ್ಯಕ್ತಿಗಳ ಅರಿವಿನ ಕೊರತೆಯನ್ನು ತೋರುತ್ತದೆ. ನಂಬಿಕೆಗಳ್ಳನ್ನು ಹೊಂದಿ ಮೂಢ ನಂಬಿಕೆಯನ್ನುತೊರೆದು ಕಾಯಕದಲ್ಲಿ ಶ್ರದ್ದೆ, ಪ್ರಯತ್ನಶೀಲತೆಯಿಂದ ಒಳ್ಳೆಯ ಫಲಾ ಫಲಗಳು ದೊರೆತು ವ್ಯಕ್ತಿ ಸುಖಿಯಾಗುತ್ತಾನೆ ಎಂದ ಶ್ರೀ ಗಳು ಭಾರತದ ಸನಾತನ ಧರ್ಮದ ಪ್ರತಿಪಾದನೆಯತ್ತ ಎಲ್ಲರೂ ಕಾರ್ಯೋನ್ಮು ಖರಾಗಬೇಕು ಎಂದು ಕರೆ ನೀಡಿದರು.
ಮಂಡ್ಯಕ್ಕೆ ಆಗಮಸಿದ ಶ್ರೀ ಗಳನ್ನು ಅಪಾರ ಸಂಖ್ಯೆಯ ಭಕ್ತಾಧಿಗಳು ವೈಭವದಿಂದ ಸ್ವಾಗತಿಸಿ ಬರ ಮಾಡಿಕೊಂಡರು.
ಜಿಲ್ಲಾಧಿಕಾರಿ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶ್ರೀ ಗಳ ಆಶೀರ್ವಾದ ಪಡೆದರು. ನೆಹರು ನಗರದ ಶ್ರೀ ಶಂಕರ ಮಠದಲ್ಲಿ ಶ್ರೀಗಳು ಚಂದ್ರಮೌಳೇಶ್ವರ ನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಗಳು ಭಕ್ತಾದಿ ಗಳಿಗೆ ಫಲ, ಮಂತ್ರಾಕ್ಷತೆ ನೀಡಿ ಆಶೀ ರ್ವದಿಸಿದರು.
