ಪಾಲನೆ ನ್ಯೂಸ್
ಬೆಂಗಳೂರು: ಬೇಸಿಗೆ ಕಾಲದಲ್ಲಿ ಬಳಸುವ ಹಣ್ಣುಗಳಿಗೆ ಕೃತಕ ಬಣ್ಣ ಬಳಸುವುದನ್ನು ತಡೆಯಲು ಮಾರ್ಚ್ ವೇಳೆಗೆ ರಾಜ್ಯಾದ್ಯಂತ ವ್ಯಾಪಕ ತಪಾಸಣೆ ನಡೆಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಸೇರಿದಂತೆ ಕೆಲ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಜನರಲ್ಲಿ ಆಕರ್ಷಣೆ ಹೆಚ್ಚಿಸಲು ಅಂತಹ ಹಣ್ಣುಗಳಿಗೆ ಕೃತಕ ಬಣ್ಣ ಬಳಸುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ಎಂಆರ್‌ಐ-ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಮತ್ತು ಸ್ಕ್ಯಾನಿಂಗ್ ಪರೀಕ್ಷೆ ಹೆಸರಿನಲ್ಲಿ ನಡೆಯುತ್ತಿದ್ದ ದುಂದು ವೆಚ್ಚಕ್ಕೆ ನಮ್ಮ ಸರ್ಕಾರ ಕಡಿವಾಣ ಹಾಕಿದೆ ಎಂದರು. 2019ರಿಂದ ಈವರೆಗೂ ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ಬಾಕಿ ಪಾವತಿಗೆ ಸಂಬಂಧಪಟ್ಟಂತೆ ವಿವಾದ ನಡೆಯುತ್ತಲೇ ಇದೆ.

ಸರ್ಕಾರದ ಬಳಿ ಹಣ ಇದೆ, ಬಾಕಿ ಕೊಡಲು ಸಮಸ್ಯೆ ಇಲ್ಲ. ಆದರೆ ಈ ಮೊದಲು ಸರ್ಕಾರದ ಹಣವನ್ನು ಅನಗತ್ಯವಾಗಿ ಪೋಲು ಮಾಡುತ್ತಿದ್ದುದು ಕಂಡು ಬಂದಿದೆ ಎಂದರು. ಎಂಆರ್‌ಐ ಮತ್ತು ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು 2017ರಲ್ಲಿ ನಿರ್ಧರಿಸಲಾಗಿತ್ತು. ಈ ಜವಾಬ್ದಾರಿಯನ್ನು ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯವರು 143 ಕೋಟಿ ರೂಪಾಯಿಗಳ ಬಾಕಿ ನೀಡಬೇಕು ಎಂದು ಹೇಳುತ್ತಿದ್ದಾರೆ.
ಖಾಸಗಿ ಸಂಸ್ಥೆಯ ವರು ಸ್ವೀಕರಿಸಿರುವ ಎಂಆರ್‌ಐ ಮತ್ತು ಸ್ಕ್ಯಾನಿಂಗ್ ಪರೀಕ್ಷೆಯ ಶಿಫಾರಸುಗಳು ಸಂಶಯಾಸ್ಪದವಾಗಿವೆ. ಒಬ್ಬ ವ್ಯಕ್ತಿಯನ್ನು ಒಂದು ০৫ ಪರೀಕ್ಷೆಗೆ ಒಳಪಡಿಸಬೇಕಾಗಿರುವ ಕಡೆ ತಲೆಯ ಭಾಗ ಒಂದು ಎಂದು ನಿರ್ಧರಿಸಿ ಎಂಆರ್‌ಐ ಮಾಡಲಾಗಿದೆ. ದೇಹದ ಮಧ್ಯಭಾಗ ಮತ್ತು ಕೆಳಭಾಗವನ್ನು ಮತ್ತೆರಡು ಭಾಗಗಳನ್ನಾಗಿ ವಿಂಗಡಿಸಿ ಎಂಆರ್‌ಐ ಮಾಡಿ ಬಿಲ್ ಮಾಡಿದ್ದಾರೆ. ಇದರಿಂದ ಹಣ ದುಂದು ವೆಚ್ಚವಾಗಿದೆ ಎಂದು ಹೇಳಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
