NEWS

‘ಬಿಗ್‌ಬಾಸ್‌’ ಮಾಜಿ ಸ್ಪರ್ಧಿ ರಜತ್ ಜಾಲತಾಣದಲ್ಲಿ ವೈರಲ್

ಪಾಲನೆ ನ್ಯೂಸ್

ಬೆಂಗಳೂರು: ಕಿರುತೆರೆ ನಟ, ‘ಬಿಗ್‌ಬಾಸ್‌’ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ರಜತ್, ಪೆಟ್ರೋಲ್ ಬಾಂಬ್ ಮಾದರಿಯ ವಸ್ತುಗಳನ್ನು ರಸ್ತೆಯಲ್ಲಿ ಸ್ಫೋಟಿಸಿ ರೀಲ್ ಮಾಡಿರುವ ವಿಡಿಯೋ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿವೆ.

1 ಪೆಟ್ರೋಲ್ ಬಾಂಬ್ ಮಾದರಿ ವಸ್ತು ಸ್ಫೋಟಿಸಿದ ವಿಡಿಯೋ ವೈರಲ್ ಮೂಲಕ
ರುವ ಈ ಕುರಿತು ಸೃಷ್ಟಿಸಿ ವಿಡಿಯೋದ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿ ದ್ದೀರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರಜತ್ ಕ್ಷಮೆ ಕೇಳಿದ್ದಾರೆ. ವಿಡಿಯೋದ ಕುರಿತು ಸ್ಪಷ್ಟನೆ ಸಹ ನೀಡಿದ್ದಾರೆ. ಪ್ರಮೋಷನಲ್ ವಿಡಿಯೋ ಮಾಡಿದ್ದೇನೆ. ಆದರೆ, ವೈರಲ್ ಸುದ್ದಿಯಾಗಿದೆ. ಯಾರಿಗೂ ತೊಂದರೆ ನೀಡುವ ಉದ್ದೇಶ ಇಲ್ಲ. ನಾನು ಕಲಾವಿದನಾಗಿ ಆ ರೀಲ್ಸ್‌ನಲ್ಲಿ ಕಾಣಿಸಿಕೊಂಡಿದ್ದೆ. ಜಾಲತಾಣದಲ್ಲಿ ವಿಡಿಯೋ ಹಾಕಿರುವುದು ಗೊತ್ತಾದ ತಕ್ಷಣವೇ ತಂಡದ ಸದಸ್ಯರಿಗೆ ತಿಳಿಸಿ ಡಿಲಿಟ್ ಮಾಡಿಸಿದ್ದೇನೆ ಎಂದು ರಜತ್ ಸ್ಪಷ್ಟನೆ ನೀಡಿದ್ದಾರೆ.
ಪೆಟ್ರೋಲ್ ಬಾಂಬ್ ಸಿಡಿಸಿ ರೀಲ್ಸ್ ಮಾಡಿದ ರಜತ್.

ರೀಲ್ ಮಾಡುವಾಗ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು. ಯಾರಿಗೂ ಹಾನಿ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ಆ ಊರಿನ ಮುಖಂಡರ ಅನುಮತಿಯನ್ನು ಪಡೆದುಕೊಂಡಿದ್ದೆವು ಎಂದು ಹೇಳಿದರು. ಕೆಲ ದಿನಗಳ ಹಿಂದೆ ಕೂಡ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ರಜತ್ ಹಾಗೂ ವಿನಯ್ ಗೌಡ ಅವರನ್ನು ಬಸವೇಶ್ವರನಗರ ಠಾಣೆಯ ಪೊಲೀಸರು ಬಂಧಿಸಿದ್ದರು.‌

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಳವಳ್ಳಿ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಪ್ರಜಾಸೌಧದ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ  ಮಳವಳ್ಳಿ ತಾಲ್ಲೂಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಒಂದು ದೇಶ ಒಂದೇ ಮತಪಟ್ಟಿ ಪರಿಕಲ್ಪನೆ ಜಾರಿ ವಿಚಾರ

ಇಲಾಖೆಯಿಂದಲೇ ಮಂಡ್ಯದಲ್ಲಿ ಕೈಗಾರಿಕೆ

Leave a Comment