NEWS

ವೈರಮುಡಿ ಬ್ರಹೋತ್ಸವದ ತೀರ್ಥ ಸ್ನಾನ

ಪಾಲನೆ ನ್ಯೂಸ್

ಮೇಲುಕೋಟೆ: ಶ್ರೀ ನಾರಾಯಣಸ್ವಾಮಿ ಭೂಲೋಕಕ್ಕೆ ಅವಿರ್ಭವಿಸಿದ ಜಯಂತ್ಯುತ್ಸವದ ಪವಿತ್ರ ದಿನವಾದ ಮೀನ-ಚೈತ್ರ ಮಾಸದ ಹಸ್ತ ನಕ್ಷತ್ರದ ಶುಭದಿನವಾದ ಗುರುವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಕಲ್ಯಾಣಿಯ ನಾಲ್ಕು ಕಡೆಯ ಸೋಪಾನಗಳು, ಸಾಲುಮಂಟಪಗಳ ಮೇಲ್ದಾಗ, ಧಾರಾಮಂಟಪಗಳ ಮೇಲೆ ಕಳೆದೆಲ್ಲಾ ಸಲಕ್ಕಿಂತ ಈ ಬಾರಿ ಕಿಕ್ಕಿರಿದು ತುಂಬಿದ್ದ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರ ಜಯಘೋಷಗಳ ನಡುವೆ ಸ್ನಪನ ಶೆಲ್ಡರಿಗೆ ಭಕ್ತರ ಇಷ್ಟಾರ್ಥ ಈಡೇರಿಕೆ, ನಾಡಿನ ಸುಭಿಕ್ಷೆ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ಮಾಡಲಾಯಿತು.

ಕಲ್ಯಾಣಿತಾಯಿಗೆ ಪೂಜೆ ನೆರವೇರಿಸಿ ಸ್ನಪನಶಲ್ವರನ್ನು ಕಲ್ಯಾಣಿಗೆ ವಕೊಂಡೊಯ್ದು ತೀರ್ಥಸ್ಥಾನ ನೆರವೇರಿಸಲಾ ಯಿತು. ಕಲ್ಯಾಣಿಯ ನಾಲ್ಕೂ ಕಡೆ ಸೇರಿದ್ದ ಸಹಸ್ರಾರು ಭಕ್ತರು ಪವಿತ್ರಸ್ಥಾನ ಮಾಡಿದರು. ಬೆಳಿಗ್ಗೆ ತಂಗಳನ್ನದ ಮಂಟಪಕ್ಕೆ ಚೆಲುವನಾರಾಯಣಸ್ವಾಮಿಯ ಉತ್ಸವ ನಡೆದ ನಂತರ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ ಸಂಧಾನಸೇವೆ ನೆರವೇರಿತು. ಮಧ್ಯಾಹ್ನ 1.30ರ ವೇಳೆಗೆ ಸ್ವಾಮಿಯ ಉತ್ಸವ ಕಲ್ಯಾಣಿಗೆ ತಲುಪಿದ ನಂತರ ತೀರ್ಥ ಸ್ನಾನದ ಪ್ರಕ್ರಿಯೆಗಳು ಆರಂಭವಾಗಿ 3 ಗಂಟೆಗೆ ಮುಕ್ತಾಯವಾದವು. ಪದ್ಧತಿಯಂತೆ ತೀರ್ಥಸ್ನಾನ ಆರಂಭವಾಗುವವರೆಗೆ ಯಾರೂ ಮೇಲುಕೋಟೆ ಪೊಲೀಸರು ಸಾಂಪ್ರದಾಯಿಕ ರಾಜಮುಡಿ ಕಿರೀಟಧಾರಣೆ ಮುಕ್ತಾಯ ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯಗಳು ನೆರವೇರಿದವು.

ಮಾರ್ಚ್ 28ರ ವೈರಮುಡಿ ಉತ್ಸವದ ರಾತ್ರಿಯಿಂದ ಚೆಲುವನಾರಾಯಣ ಸ್ವಾಮಿಯನ್ನು ಅಲಂಕರಿಸಿದ್ದ ರಾಜಮುಡಿ ಕಿರೀಟ ಬ್ರಹೋತ್ಸವದ ಕೊನೆಯ ಉತ್ಸವವಾದ ಗುರುವಾರದ ರಾತ್ರಿಯ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆಯ ಬಾರಿ ಅಲಂಕರಿಸಿತು. ರಾಜಮುಡಿ ಅಲಂಕಾರ ಮುಕ್ತಾಯವಾಗು ತ್ತಿದ್ದಂತೆ ಸ್ವಾಮಿಗೆ ಪುಷ್ಪಾಲಂಕೃತ ಸಮರಭೂಪಾಲವಾಹ ನೋತ್ಸವ ವೈಭವದಿಂದ ನೆರವೇರಿತು. ಕಲ್ಯಾಣಿಯಪವಿತ್ರತೀರ್ಥ ಸ್ಪರ್ಶಿಸದಂತೆ ಕಟ್ಟೆಚ್ಚರವಹಿಸಿದ್ದರು. ರಸ್ತೆಯಲ್ಲೇ ನಿಂತ ಚೆಲುವರಾಯಸ್ವಾಮಿ ಉತ್ಸವ ತೀರ್ಥಸ್ಥಾನ ಮುಗಿಸಿ ಕಲ್ಯಾಣಿಯಿಂದ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿ ಉತ್ಸವ ಟ್ರಾಫಿಕ್ ಜಾಮ್‌ನಿಂದಾಗಿ ಅರ್ಧಗಂಟೆ ಒಂದೇ ಕಡೆ ನಿಲ್ಲಬೇಕಾ ಯಿತು. ಉತ್ಸವ ಸಾಗುವ ಮಾರ್ಗದಲ್ಲಿ ವಾಹನಗಳು ನಿಲ್ಲದಂತೆ ಎಚ್ಚರವಹಿಸದ ಕಾರಣ ಹಯಗ್ರೀವ ಕಾಲೇಜಿನಿಂದ ಬಾಲಕಿಯರ ಶಾಲೆಯವರೆಗೆ ವಾಹನಗಳು ಸಾಲಾಗಿ ನಿಂತವು.

ಎಲ್ಲ ವಾಹನಗಳನ್ನೂ ಕಳುಹಿಸು ವವರೆಗೆ ಸ್ವಾಮಿಯ ಉತ್ಸವ ಅಲ್ಲೇ ನಿಲ್ಲಬೇಕಾಗಿ ಬಂತು. ಇನ್ಸ್‌ಪೆಕ್ಟರ್ ಶರತ್ ಮತ್ತು ಸಬ್‌ಇನ್ಸ್ಪೆಕ್ಟರ್ ಪ್ರಮೋದ್ ನೇತೃತ್ವದ ಪೊಲೀಸರ ತಂಡ ಭದ್ರತೆ ಒದಗಿಸಿತ್ತು. ಕಲ್ಯಾಣಿಗೆ ಗರುಡ ಪ್ರದಕ್ಷಿಣೆ, ತೀರ್ಥೋದ್ಭವ ಕಲ್ಯಾಣಿಯಲ್ಲಿ ತೀರ್ಥಸ್ನಾನ ನಡೆಯುತ್ತಿದ್ದ ವೇಳೆ ಪ್ರತಿವರ್ಷದಂತೆ ಕಾಣಿಸಿಕೊಂಡ ಗರುಡ, ಸ್ಪಪನ ಶೆಲ್ಡರಿಗೆ ಅಭಿಷೇಕವಾಗುತ್ತಿದ್ದ ವೇಳೆ ಕಲ್ಯಾಣಿಯಲ್ಲಿ ಪ್ರದಕ್ಷಿಣೆ ಹಾಕಿದಾಗ ಭಕ್ತರ ಜಯಘೋಷ ಮುಗಿಲುಮುಟ್ಟಿತು. ಬೆಳಿಗ್ಗೆಯಿಂದಲೂ ಕಲ್ಯಾಣಿಯತ್ತ ಸುಳಿಯದ ಗರುಡ ತೀರ್ಥಸ್ಥಾನದ ವೇಳೆ ಆಗಮಿಸಿ ತೀರ್ಥ ಮುಟ್ಟಿ ಹಾರಿಹೋದಾಗ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಮತ್ತೊಂದೆಡೆ ಮೇಲುಕೋಟೆಯಿಂದ 12ಕಿಮೀ ದೂರಲ್ಲಿರುವ ನಾರಾಯಣಪುರ ಗ್ರಾಮದ ಬರಡು ಹೊಲದಲ್ಲಿ ಚೆಲುವನಾರಾಯಣಸ್ವಾಮಿಗೆ ತೀರ್ಥಸ್ಥಾನವಾಗುತ್ತಿದ್ದಂತೆ, ಅಲ್ಲಿನ ಬರಡು ಹೊಲದಲ್ಲಿ ತೆಗೆದ ಒಂದೆರಡು ಅಡಿ ಆಳದ ಗುಂಡಿಯಲ್ಲಿ ತೀರ್ಥ ಶೇಖರವಾಗುವುದರೊಂದಿಗೆ ಪ್ರತಿವರ್ಷದ ಪವಾಡ ಈ ವರ್ಷವೂ ಸಂಭವಿಸಿತು. ತೀರ್ಥೋದ್ಭವದ ವೇಳೆ ಹೊಲದ ಮಾಲೀಕರಾದ ಶ್ರೀಧರ್ ಮತ್ತು ಕುಮಾರ್ ಪೂಜೆ ನೆರವೇರಿಸಿದರು. ದೇವಾ ಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪರಮೇಶ್‌ ಗೌಡ ಶಾಲಾಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಲೋಕೇಶ್ ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಭಾಗಿಯಾಗಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಪರಿಚಯ ಪ್ರಕಾಶನ ‘ಒಡಲು ಮತ್ತು ಸೃಷ್ಟಿ’ ಬಿಡುಗಡೆ ನಾಳೆ

ಅಲಿಪುರ್ ದ್ವಾರ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು

ಸೈಬರ್ ಅಪಾಯಗಳನ್ನು ಎದುರಿಸಲು ಬ್ಯಾಂಕುಗಳು ಸನ್ನದ್ಧವಾಗಬೇಕು

Leave a Comment