ಪಾಲನೆ ನ್ಯೂಸ್
ಅಮರಾವತಿ: ಸುಮಾರು 180 ಅಪ್ರಾಪ್ತ ಬಾಲಕಿಯರನ್ನ ಲೈಂಗಿಕವಾಗಿ ಶೋಷಿಸಿದ್ದಲ್ಲದೆ 350 ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದ 19 ವರ್ಷದ ಯುವಕನೊಬ್ಬನನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಬಂಧಿಸಲಾಗಿದೆ. ಈ ಆಘಾತಕಾರಿ ಕೃತ್ಯಗಳನ್ನು ನಡೆಸಿದ ಆರೋಪಿಯನ್ನು ಅಯಾನ್ ಅಹಮದ್ ತನ್ನೀರ್ ಯಾನೆ ಮಹಮದ್ ಅಯಾಝ್ ಎಂದು ಗುರುತಿಸಲಾಗಿದ್ದು, ಆತನ ಮನೆಯನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಬಿಜೆಪಿ ಸಂಸದ ಅನಿಲ್ ಬೊಂಡೆ ದಾಖಲಿಸಿದ ದೂರಿನ ಮೇರೆಗೆ ಪೊಲೀಸರು ಪರಾಟ್ವಾಡಾ ನಿವಾಸಿ ತಸ್ವೀರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್, ನಂತರ ಅದನ್ನು ಏಪ್ರಿಲ್ 21ರವರೆಗೆ ವಿಸ್ತರಿಸಿದೆ.
ಮೊಬೈಲ್ ಫೋನ್ ವಶ: ಆರೋಪಿಯ ಮೊಬೈಲ್ ಫೋನ್ ಮತ್ತು ಇತರ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ
ಹುಡುಗಿಯರ ಬ್ಲ್ಯಾಕ್‌ಮೇಲ್ವಾಟ್ಸ್ಆ್ಯಪ್ ಮತ್ತು ಸ್ಟ್ರಾಪ್ ಚಾಟ್ ಗ್ರೂಪ್‌ಗಳ ಮೂಲಕ ಹುಡುಗಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ನಂತರ ಅವರ ವಿಶ್ವಾಸ ಗಳಿಸಿಕೊಂಡು ಸಂಬಂಧ ಬೆಳೆಸುವಂತೆ ಪುಸಲಾಯಿಸುತ್ತಿದ್ದ.
ಅದಾದ ನಂತರ ಆತ ಕೆಲವು ಸಂತ್ರಸ್ತರನ್ನು ಮುಂಬೈ ಮತ್ತು ಪುಣೆಗೆ ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯರ ಅನುಮತಿ ಇಲ್ಲದೆ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅವರನ್ನು ಬ್ಲಾಕ್‌ಮೇಲ್ ಮಾಡಿ ಬಲವಂತದಿಂದ ವೇಶ್ಯಾವಾಟಿಕೆಗೆ ತಳ್ಳಲು ಬಳಸಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕೆಲವು ಆಕ್ಷೇಪಾರ್ಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡ ತೊಡಿದ್ದರಿಂದ ಈ ಹಗರಣ ಬಯಲಿಗೆ ಬಂದಿದೆ. ಪರಾಟ್ವಾಡಾ, ಅಚಲಾಪುರದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರಮುಖ ಪುರಾವೆಯನ್ನು ಡಿಲೀಟ್ ಮಾಡಿರುವ ಸಂಭವ ಇರುವುದರಿಂದ ಅಂಥ ಡೇಟಾ ರಿಕವರ್ ಮಾಡಲು ಪೊರೆನ್ಸಿಕ್ ತಜ್ಞರು ಪ್ರಯತ್ನಿಸುತ್ತಿದ್ದಾರೆ. ಆತ ಆನ್‌ಲೈನ್‌ನಲ್ಲಿ ಶೇರ್ ಮಾಡಿರುವ ವಿಡಿಯೋಗಳನ್ನು ಕೂಡ ಸೈಬರ್ ಸೆಲ್ ತಂಡಗಳು ಪರಿಶೀಲಿಸುತ್ತಿವೆ.
ತನ್ನೀರ್ ಏಕಾಂಗಿಯಾಗಿ ಈ ಕುಕೃತ್ಯ ನಡೆಸಿದ್ದಾನೆಯೇ ಅಥವಾ ಇನ್ನಿತರ ಯಾರಾದರೂ ಅವನೊಂದಿಗೆ ಶಾಮೀಲಾಗಿದ್ದಾರೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಇದುವರೆಗೆ ಏಳು ಸಂತ್ರಸ್ತರನ್ನು ಪೊಲೀಸರು ದೃಢಪಡಿಸಿದ್ದಾರೆ. ಆದರೆ ಇನ್ನೂ ಹೆಚ್ಚು ಜನರು ಮುಂದೆ ಬರುವ ನಿರೀಕ್ಷೆ ಇದೆ.

ರಾಜಕೀಯ ತಿರುವು: ಅಸಾವುದ್ದಿನ್ ಒವೈಸಿ ನೇತೃತ್ವದ ಎಐಎಂಐಎಂಗೆ
ಆರೋಪಿಯ ಸಂಬಂಧವಿದೆ ಎಂದು ಬಿಜೆಪಿ ನಾಯಕರು ಆರೋಪಿಸುವುದರೊಂದಿಗೆ ಪ್ರಕರಣ ರಾಜಕೀಯ ತಿರುವನ್ನು ಪಡೆದುಕೊಂಡಿದೆ. ತನಿಖೆ ತೀವ್ರಗೊಂಡಿರುವುದರ ನಡುವೆ, ಆರೋಪಿಯ ಮನೆಯ ಕೆಲವು ಭಾಗಗಳನ್ನು ನಗರಸಭೆ ಅಧಿಕಾರಿಗಳು ಬುಧವಾರ ಕೆಡವಿ ಹಾಕಿದ್ದಾರೆ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
