NEWS

ಆರ್. ವೈಶಾಲಿ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಚಾಂಪಿಯನ್

ಪಾಲನೆ ನ್ಯೂಸ್

ಪಪೋಸ್ (ಸೈಪ್ರಸ್): ಭಾರತದ ಗ್ರಾಂಡ್ ಮಾಸ್ಟರ್ ಆರ್. ವೈಶಾಲಿ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಹೊರಹೊಮ್ಮಿದ್ದಾರೆ. ಇದರೊಂದಿಗೆ ಅವರು ಹಾಲಿ ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಗೆ ಸವಾಲೊಡ್ಡುವ ಅವಕಾಶ ಪಡೆದುಕೊಂಡಿದ್ದಾರೆ.

ಅವರು ಮಹಿಳಾ ವಿಶ್ವ ಚಾಂಪಿಯನ್ ಪಟ್ಟಕ್ಕೆ ಸ್ಪರ್ಧಿಸಲಿರುವ 2ನೇ ಭಾರತೀಯ ಮಹಿಳೆ ಎನಿಸಿದ್ದಾರೆ. ಕೊನೆರು ಹಂಪಿ 2011ರಲ್ಲಿ ಮೊದಲ ಸಾಧಕಿ ಎನಿಸಿದ್ದರು. ತಮಿಳುನಾಡಿನ 24 ವರ್ಷದ ವೈಶಾಲಿ ಬುಧವಾರ ನಡೆದ 14ನೇ ಹಾಗೂ ಕೊನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಕ್ಯಾಟರಿನಾ ಲಾಂಗೋ ವಿರುದ್ಧ ಅಮೋಘ ಗೆಲುವು ಸಾಧಿಸಿದರು.

ಇದರೊಂದಿಗೆ ವೈಶಾಲಿ 8.5 ಅಂಕಗಳೊಂದಿಗೆ ಅಗ್ರಸ್ಥಾನ ಒಲಿಸಿಕೊಂಡರು. ಪ್ರಶಸ್ತಿ ರೇಸ್ ನಲ್ಲಿದ್ದ ಕಜಾಕ್‌ಸ್ತಾನದ ಬಿಬಿಸಾರಾ ಅಸೌಬಯೆವಾ (8) ಕೊನೇ ಸುತ್ತಿನಲ್ಲಿ ಭಾರತದ ದಿವ್ಯಾ ದೇಶಮುಖ್ ಎದುರು ಡಾಕ್ಕೆ ತೃಪ್ತಿಪಟ್ಟರು.

ಟೂರ್ನಿಯ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ ವೈಶಾಲಿ ಅವರ ಕಿರಿಯ ಸಹೋದರ ಆ‌ರ್. ಪ್ರಜ್ಞಾನಂದ 7ನೇ ಸ್ಥಾನಕ್ಕೆ ತೃಪ್ತಿಪಟ್ಟರು. ವೈಶಾಲಿ ಹಾಲಿ ವರ್ಷವೇ ನಡೆಯಲಿರುವ ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 5 ಬಾರಿಯ ಚಾಂಪಿಯನ್ ಚೀನಾದ ಜುವೆನ್‌ಜುನ್‌ ವಿರುದ್ಧ ಸೆಣಸಲಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮುಖ್ಯಮಂತ್ರಿ ಕುರ್ಚಿ ಕಾದಾಟದಿಂದ ಅಭಿವೃದ್ಧಿ ಕುಂಠಿತ: ಯದುವೀ‌ರ್

ಧರ್ಮಸ್ಥಳದ ಸಾಮೂಹಿಕ ವಿವಾಹಕ್ಕೆ 105 ವಧು-ವರರಿಂದ ನೋಂದಣಿ

೧೭ರಂದು ಕೌಶಲ್ಯಾಧಾರಿತ ಉದ್ಯಮಶೀಲತಾಅಭಿವೃದ್ಧಿ ತರಬೇತಿ ಕಾರ್ಯಕ್ರಮ

Leave a Comment