NEWS

ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ದಾಖಲೆ ಮಾಡಿದೆ: ನಿಖಿಲ್ ಆರೋಪ

ಪಾಲನೆ ನ್ಯೂಸ್

ಕೆ.ಆ‌ರ್.ನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಇತಿಹಾಸ ಮತ್ತು ದಾಖಲೆ ಸೃಷ್ಟಿ ಮಾಡಿದೆ ಎಂದು ಜಾವಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಪಟ್ಟಣದ ರೇಡಿಯೋ ಮೈದಾನದಲ್ಲಿ ಭಾನುವಾರ ಜಾದಳದ ವತಿಯಿಂದ ಏರ್ಪಡಿಸಿದ್ದ ‘ಜನರೊಂದಿಗೆ ಜನತಾದಳ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಸ್ ಸಿಎಸ್ಪಿ ಮತ್ತು ಟಿಎಸ್ ಪಿ ಹಣ ಬಳಸಿ ಕೊಂಡಿದ್ದಾರೆ. ಇದರ ಜೊತೆಗೆ ನಾನು ಸಿಎಂ, ನೀನು ಸಿಎಂ ಎಂದು ಪ್ರತಿನಿತ್ಯ ಜಟಾಪಟಿ ನಡೆಸುತ್ತಿದ್ದಾರೆ. ಇರ್ದ ಇವರ ಮೂರು ವರ್ಷಗಳ ಸಾಧನೆಯಾಗಿದೆ ಎಂದು ಟೀಕಿಸಿದರು.

ಪ್ರಾದೇಶಿಕ ಪಕ್ಷವಾದ ಜಾ.ದಳಕ್ಕೆ 18 ಸೀಟು ಬಂದಿದೆ ಎನ್ನುವ ನಿಮ್ಮ ಕಾಂಗ್ರೆಸ್ ದೇಶದಲ್ಲಿ ಎಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ? ಪಕ್ಷದ ಹೈಕ ಮಾಂಡ್ ಯಾರು ಎಂಬುದು ಗೊತ್ತಾಗುತ್ತಿಲ್ಲ. ಆದರೆ ಜಾ.ದಳದಲ್ಲಿ ಹೈಕಮಾಂಡ್ ಆಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇದ್ದಾರೆ ಕೆ.ಆರ್. ನಗರದಲ್ಲಿ ಜಾ.ದಳ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ ಕಾರ್ಯಕ್ರಮ ವನ್ನು ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು.

ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಪಿ.ಎನ್.ಮಂಜೇ ಗೌಡ, ಮಾಜಿ ಶಾಸಕ ಕೆ.ಮಹದೇವ್, ಮುಖಂಡರಾದ ఎటిఎం మంటు, డా.నా.. ರಾ.ಧನುಷ್, ಅಡಗೂರು ಚನ್ನಬಸಪ್ಪ, ಅಚ್ಯುತಾನಂದ್, ಸಿ.ಜೆ.ದ್ವಾರಕೀಶ್, ಎಂ.ಟಿ.ಕುಮಾರ್, ಅಮಿತ್ ದೇವರಹಟ್ಟಿ, ಕೆ.ಎನ್.ಬಸಂತ್ ಮತ್ತಿತರರನ್ನು ಚಿತ್ರದಲ್ಲಿ ಕಾಣಬಹುದು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಶೇ.56ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಮನವಿ ಪತ್ರವನ್ನು ಪ್ರಧಾನಿಗೆ ಸಲ್ಲಿಸಿದ ಸಿದ್ದರಾಮಯ್ಯ

ಫೆಬ್ರವರಿ 6ರಂದು ಮಂಡ್ಯದ ಬೇವುಕಲ್ಲು ಗ್ರಾಮದ ಬೀರೇಶ್ವರ ದೇವಸ್ಥಾನಕ್ಕೆ ಭೇಟಿ: ಮಾನ್ಯ ಮುಖ್ಯಮಂತ್ರಿಗಳು

ಮಂಡ್ಯದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಮೇ 13ಕ್ಕೆ

Leave a Comment