NEWS

ರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂಗೆ ರಾಷ್ಟ್ರಗೌರವ

ನವದೆಹಲಿ: ಎಲ್ಲ ಸರ್ಕಾರಿ ಕಾರ್ಯಕ್ರಮ ಶಾಲೆಗಳಿಗೆ ಅನ್ವಯ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಇನ್ಮುಂದೆ ಸರ್ಕಾರಿ ಕಾರ್ಯಕ್ರಮ ಹಾಗೂ ಎಲ್ಲ ಶಾಲೆಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವ ಮೊದಲು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನುಡಿಸುವುದನ್ನು ಕೇಂದ್ರ ಗೃಹ ಸಚಿವಾಲಯ ಬುಧವಾರ ಕಡ್ಡಾಯಗೊಳಿಸಿದೆ. ‘ವಂದೇ ಮಾತರಂ’ ಹಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಎದ್ದು ನಿಲ್ಲುವುದು ಕಡ್ಡಾಯ ಎಂಬುದನ್ನೂ ನಿಯಮ ಒಳಗೊಂಡಿದೆ.

ಹೊಸ ನಿರ್ದೇಶನದ ಪ್ರಕಾರ ಎಲ್ಲ ಸರ್ಕಾರಿ ಕಚೇರಿ, ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ನುಡಿಸುವುದು, ಹಾಡುವುದು, ಗೌರವಿಸುವುದು ಕಡ್ಡಾಯ. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ, ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅವರ ಆಗಮನ-ನಿರ್ಗಮನ ವೇಳೆ ಈ ನಿಯಮ ಪಾಲನೆ ಆಗಲಿದೆ. ಸಿನಿಮಾ ಮಂದಿರಗಳಲ್ಲೂ ‘ವಂದೇ ಮಾತರಂ’ ನುಡಿಸಬೇಕೆಂಬ ಸೂಚನೆ ಇದ್ದರೂ, ಅಲ್ಲಿ ಎದ್ದು ನಿಲ್ಲುವುದು ಕಡ್ಡಾಯವಲ್ಲ.

ಗಮನಾರ್ಹ ಸಂಗತಿಯೆಂದರೆ, 1937ರಲ್ಲಿ ಕಾಂಗ್ರೆಸ್ ಕೈಬಿಟ್ಟಿದ್ದ 4 ಚರಣ ಒಳಗೊಂಡಂತೆ, ಬಂಕಿಮ್ ಚಂದ್ರ ಚಟರ್ಜಿ ರಚಿಸಿದ ‘ವಂದೇ ಮಾತರಂ’ನ ಎಲ್ಲ 6 ಚರಣಗಳನ್ನು ಹಾಡಬೇಕಿದೆ. O ಪುಟ 2 ರಾಷ್ಟ್ರಗೀತೆ ಹಾಡುವುದಕ್ಕೆ ಅಡ್ಡಿಪಡಿಸುವ ಅಥವಾ ಇತರರು ಅದಕ್ಕೆ ಗೌರವ ಸಲ್ಲಿಸದಂತೆ ತಡೆಯುವ ಯಾವುದೇ ವ್ಯಕ್ತಿಗೆ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯಡಿ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ವಂದೇ ಮಾತರಂ @150 ಗೀತೆಯ ಹಿನ್ನೆಲೆ 19ನೇ ಶತಮಾನದ ಭಾರತದ ಅತ್ಯಂತ ಪ್ರಭಾವಶಾಲಿ ಚಿಂತಕರಲ್ಲಿ ಒಬ್ಬರಾದ ಬಂಗಾಳಿ ಲೇಖಕ ಬಂಕಿಮ ಚಂದ್ರ ಚಟರ್ಜಿ 1875ರ ನ. 7ರಂದು ಬರೆದಿದ್ದ ಕವಿತೆಯೇ ‘ವಂದೇ ಮಾತರಂ’. ಇದು ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆಯಾಯಿತು.

ಈ ಗೀತೆಯನ್ನು ಮೊದಲ ಬಾರಿಗೆ 1882ರಲ್ಲಿ ಅವರ ‘ಆನಂದಮಠ’ ಕಾದಂಬರಿಯಲ್ಲಿ ಪ್ರಕಟಿಸಲಾಯಿತು. ಅಗೌರವಕ್ಕೆ ಜೈಲು ಶಿಕ್ಷೆ ನೂತನ ಮಾರ್ಗಸೂಚಿ ಈ ವಂದೇ ಮಾತರಂ ಗೀತೆಯ ಎಲ್ಲ 6 ಚರಣ ಹಾಡುವುದು. ಇದರ ಒಟ್ಟು ಅವಧಿ 3 ನಿಮಿಷ 10 ಸೆಕೆಂಡ್ ಈ ಒಂದೇ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮತ್ತು ‘ಜನ ಗಣ ಮನ’ ಎರಡನ್ನೂ ಪ್ರಸ್ತುತಪಡಿಸುವಾಗ ಮೊದಲು ‘ವಂದೇ ಮಾತರಂ’ ನುಡಿಸಬೇಕು | ವಂದೇ ಮಾತರಂ ಹಾಡುವಾಗ /ನುಡಿಸುವಾಗ ಉಪಸ್ಥಿತರೆಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು.

ಕೆಲ ಸಂದರ್ಭಗಳಲ್ಲಷ್ಟೇ ಇದಕ್ಕೆ ವಿನಾಯಿತಿ ಇರುತ್ತದೆ 1 ದೇಶಾದ್ಯಂತ ಎಲ್ಲ ಶಾಲೆಗಳ ಪ್ರಾರ್ಥನಾ ಸಭೆಗಳಲ್ಲಿ ರಾಷ್ಟ್ರೀಯ ಗೀತೆ ಅಳವಡಿಸಿಕೊಳ್ಳಬೇಕು ಮತ್ತು ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಗೌರವ ಉತ್ತೇಜಿಸಬೇಕು ಸರ್ಕಾರಿ ಸಮಾರಂಭಗಳು, ನಾಗರಿಕ ಪ್ರಶಸ್ತಿ ಪ್ರದಾನ, ಧ್ವಜಾರೋಹಣ ಸಂದರ್ಭಗಳು ಹಾಗೂ ಅಧಿಕೃತ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ-ರಾಜ್ಯಪಾಲರ ಆಗಮನ-ನಿರ್ಗಮನ ವೇಳೆ ಈ ಗೀತೆ ನುಡಿಸತಕ್ಕದ್ದು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿ: ಡಾ. ಕುಮಾರ

ನಮ್ಮ ನಡೆ ಸ್ವಚ್ಛತೆಯ ಕಡೆರನ್ ಫಾರ್ ಮಂಡ್ಯ

Leave a Comment