NEWS

ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನಾಯಿ-ಕುದುರೆ ಸಾಕಣೆ

ಶ್ರೀರಂಗಪಟ್ಟಣ :ತಾಲೂಕಿನ ಕೆಂಪಲಿಂಗಾಪುರ ಗ್ರಾಮದ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನಾಯಿ ಮತ್ತು ಕುದುರೆ ಸಾಕಾಣಿಕೆಯಿಂದ ಅಕ್ಕಪಕ್ಕದ ರೈತರು ವ್ಯವಸಾಯ ಮಾಡಲು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡನೇತೃತ್ವದಲ್ಲಿ ಗ್ರಾಮಸ್ಥರುತಹಸೀಲ್ದಾರ್ ಗೆ ದೂರು ನೀಡಿದರು.

ಪಾಲಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಂಪಲಿಂಗಾಪುರ ಗ್ರಾಮದ ಸರ್ವೇ ನಂಬರ್32/1ರ ಕೃಷಿ ಭೂಮಿಯಲ್ಲಿ ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಶೆಡ್ ನಿರ್ಮಿಸಿ, ಸುಮಾರು 30 ರಿಂದ 40 ವಿವಿಧ ತಳಿಯ ನಾಯಿ ಹಾಗೂ ಕುದುರೆ ಸಾಕಲಾಗುತ್ತಿದೆ. ಇದರಿಂದ ಹೊರಬರುವ ಪ್ರಾಣಿಗಳ ತ್ಯಾಜ್ಯ ಮತ್ತು ಪ್ರಾಣಿಗಳನ್ನು ತೊಳೆದ ನೀರನ್ನೇ ಪಕ್ಕದ ರೈತರ ಜಮೀನುಗಳಿಗೆ ನೇರವಾಗಿ ಬಿಡುತ್ತಿರುವುದರಿಂದ ಬೆಳೆಗಳು ನಾಶವಾಗುವ ಜೊತೆಗೆ ವಾಸನೆಯಿಂದ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿರು.

ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತ ನಾಡಿ, ಈ ಸಾಕಾಣಿಕೆ ಕೇಂದ್ರದ ಮಾಲೀಕರು ನಾಯಿ ಸಾಕಾಣಿಕೆಗೆ ಸಂಬಂಧಿಸಿದಂತೆ ಯಾವುದೇ ಅನುಮತಿ ಪತ್ರ ಅಥವಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪತ್ರಗಳನ್ನು ಹಾಜರು ಪಡಿಸಿರುವುದಿಲ್ಲ. ಹೊಸದಾಗಿ ಕಟ್ಟಡ ನಿರ್ಮಿಸಲು ಜಾಗಕ್ಕೆ ಯಾವುದೇ ಅಧಿಕೃತ ಅನುಮತಿ ಪಡೆದಿಲ್ಲ.

ಪ್ರಾಣಿಗಳ ಮಲಮೂತ್ರ ಹಾಗೂ ತೊಳೆದನೀರು ರೈತರ ಜಮೀನುಗಳಿಗೆ ಮತ್ತು ಕಿರುಕಾಲುವೆಗಳಿಗೆ ಸೇರುತ್ತಿದ್ದು, ನೀರನ್ನು ಶುದ್ದೀಕರಿಸಲು ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಎಂಬುದು ಪಂಚಾಯ್ತಿ ವರದಿ ಯಲ್ಲಿ ದೃಢಪಟ್ಟಿದೆ. ಜೊತೆಗೆ ಈ ಸ್ಥಳವು ಸಂಪೂರ್ಣವಾಗಿ ರೆವಿನ್ಯೂ ಜಾಗವಾಗಿರುವುದರಿಂದ ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಕ್ರಮ ಕೈಗೊಂಡು, ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಗ್ರಾಮಸ್ಥರಾದ ಕೃಷ್ಣಣ್ಣ, ಪಾಲಹಳ್ಳಿ ಚಂದ್ರು, ವಿನಯ್, ಜಗದೀಶ್, ಕೇಶವ, ನಂದೀಶ್, ರಾಜು, ಪ್ರಸನ್ನ ಸೇರಿದಂತೆ ಇತರರಿದ್ದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಗೌಡ ಸಮಾಜದ ಏಳಿಗಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದೆ: ಪೊನ್ನಣ್ಣ

ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಿಶೇಷ ರಂಗೋಲಿ ಸ್ಪರ್ಧಾ

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಜಾರಿ: ಡಾ. ಕುಮಾರ

Leave a Comment