NEWS

ವಿಕೆಟ್ ಕೀಪರ್ -ಆರಂಭಿಕ ಸಂಜು ಸ್ಯಾಟ್ಸನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಪ್ರಶಸ್ತಿ ರೇಸ್‌ನಲ್ಲಿ

ಪಾಲನೆ ನ್ಯೂಸ್

ದುಬೈ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಸತತ 2ನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿಕೆಟ್ ಕೀಪರ್ -ಆರಂಭಿಕ ಸಂಜು ಸ್ಯಾಟ್ಸನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿಯ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿ ರೇಸ್ ನಲ್ಲಿದ್ದಾರೆ. ಇವರಿಬ್ಬರು ದಕ್ಷಿಣ ಆಫ್ರಿಕಾದ ಬ್ಯಾಟರ್ ಕಾನರ್ ಎಸ್ಟರ್‌ಹುಯಿಜೆನ್ ಜತೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಸ್ಯಾಟ್ಸನ್ ಟಿ20 ವಿಶ್ವಕಪ್‌ನಲ್ಲಿ ಕಡೇ ಸೂಪರ್-8 ಪಂದ್ಯದಲ್ಲಿ ವಿಂಡೀಸ್ ಎದುರು ಅಜೇಯ 97, ಸೆಮೀಸ್‌ನಲ್ಲಿ ಇಂಗ್ಲೆಂಡ್ ಎದುರು 89 ಮತ್ತು ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಮತ್ತೆ 89 ರನ್ ಸಿಡಿಸಿ ಮಿಂಚಿದ್ದರು. ಬುಮ್ರಾ ಇವೇ 3 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದರು. ಅದರಲ್ಲೂ ಫೈನಲ್‌ನಲ್ಲಿ ಕಿವೀಸ್ ಎದುರು 15 ರನ್‌ಗಳಿಗೆ 4 ವಿಕೆಟ್ ಕಬಳಿಸಿ ಗೆಲುವಿಗೆ ನೆರವಾಗಿದ್ದರು. ಎಸ್ಟರ್‌ಹುಯಿಜೆನ್ ಟಿ20 ವಿಶ್ವಕಪ್ ಬೆನ್ನಲ್ಲೇ ಕಿವೀಸ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ 50ರ ಸರಾಸರಿಯಲ್ಲಿ 200 ರನ್ ಸಿಡಿಸಿ ಗಮನಸೆಳೆದಿದ್ದರು. ಮಹಿಳೆಯರ ವಿಭಾಗದಲ್ಲಿ ನ್ಯೂಜಿಲೆಂಡ್‌ನ ಮೆಲೀ ಕೆರ್, ದಕ್ಷಿಣ ಆಫ್ರಿಕಾದ ಅಯಬೊಂಗಾ ಖಾಕಾ ಮತ್ತು ಆಸ್ಟ್ರೇಲಿಯಾದ ಬೆತ್ ಮೂನಿ ನಾಮನಿರ್ದೇಶನಗೊಂಡಿದ್ದಾರೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ವ್ಯಾಲೆಂಟಿನಾ ಇವಾನೋವ್ ವಿರುದ್ಧ ಸುಲಭ ಜಯ‌ ಭಾರತಕ್ಕೆ ಮಣಿದ ಕಿವೀಸ್ ಬಿಜೆಕೆ ಕಪ್ ಟೆನಿಸ್

ಅನಕ್ಷರಸ್ಥರು ಸೃಷ್ಟಿಸಿದ ಅದ್ಭುತ ಲೋಕ ಜಾನಪದ : ಕನ್ನಿಕ

ಸ್ಮೃತಿ ಪಡೆಗೆ 2ನೇ ಪ್ರಶಸ್ತಿ ತವಕ | ಕ್ಯಾಪಿಟಲ್ಸ್‌ಗೆ ಒಲಿಯುವುದೇ ಲಕ್?

Leave a Comment