ಜಾಗತಿಕ ಮ್ಯೂಚುಯಲ್ ಫಂಡ್ ಇತಿಹಾಸ 250 ವರ್ಷಗಳಷ್ಟು ಹಳೆಯದು
ಮ್ಯೂಚುವಲ್ ಫಂಡ್‌ನ ಜಾಗತಿಕ ಇತಿಹಾಸವು ಸುಮಾರು 250 ವರ್ಷಗಳಷ್ಟು ಹಳೆಯದಾಗಿದ್ದು, ನೆದರ್ಲ್ಯಾಂಡ್ಸ್‌ನಿಂದ ಪ್ರಾರಂಭವಾಗಿ ಇಂದು ಭಾರತದಲ್ಲಿ ಒಂದು ದೊಡ್ಡ ಹೂಡಿಕೆ ಉದ್ಯಮವಾಗಿ ಬೆಳೆದು ಬಂದಿದೆ. ಮ್ಯೂಚುವಲ್ ಫಂಡ್ ಪರಿಕಲ್ಪನೆಯು ಮೊದಲು ಯುರೋಪ್‌ನಲ್ಲಿ ಕಾಣಿಸಿಕೊಂಡಿತು
ವಿಶ್ವದ ಮೊದಲ ಫಂಡ್ (1774): ಆರ್ಥಿಕ ಸಂಕಷ್ಟದ ಸಮಯದಲ್ಲಿ ನೆದರ್ಲ್ಯಾಂಡ್ಸ್‌ನ ವ್ಯಾಪಾರಿ ಅಡ್ರಿಯನ್ ವ್ಯಾನ್ ಕೆಟ್ವಿಚ್ ಅವರು ಮೊದಲ ಮ್ಯೂಚುವಲ್ ಫಂಡ್ ಅನ್ನು ಸ್ಥಾಪಿಸಿದರು. ಅವರು ಇದಕ್ಕೆ ‘Eendragt Maakt Magt’ (ಒಗ್ಗಟ್ಟೇ ಬಲ) ಎಂದು ಹೆಸರಿಟ್ಟಿದ್ದರು.
ಆಧುನಿಕ ಮ್ಯೂಚುವಲ್ ಫಂಡ್ (1924): ಇಂದಿನ ಮ್ಯೂಚುವಲ್ ಫಂಡ್‌ನಂತಿರುವ ಮೊದಲ ಆಧುನಿಕ ಫಂಡ್ ‘Massachusetts Investors Trust’ (MIT) ಅಮೆರಿಕಾದ ಬೋಸ್ಟನ್‌ನಲ್ಲಿ ಪ್ರಾರಂಭವಾಯಿತು.
ಭಾರತದಲ್ಲಿ ಮ್ಯೂಚುವಲ್ ಫಂಡ್
ಭಾರತದಲ್ಲಿ ಮ್ಯೂಚುವಲ್ ಫಂಡ್‌ನ ಬೆಳವಣಿಗೆಯನ್ನು ಐದು ಪ್ರಮುಖ ಹಂತಗಳಾಗಿ ವಿಂಗಡಿಸಬಹುದು. ಇಂದು ಭಾರತದಲ್ಲಿ 40 ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಕಂಪನಿಗಳಿದ್ದು, ಹೂಡಿಕೆದಾರರಿಗೆ ಸಾವಿರಾರು ಯೋಜನೆಗಳನ್ನು ಒದಗಿಸುತ್ತಿವೆ.

ಹಂತ 1: ಯುಟಿಐ (UTI) ಯುಗ (1963 – 1987): ಭಾರತದಲ್ಲಿ ಮ್ಯೂಚುವಲ್ ಫಂಡ್ ಉದ್ಯಮವು 1963 ರಲ್ಲಿ ಭಾರತ ಸರ್ಕಾರ ಮತ್ತು ಆರ್‌ಬಿಐ (RBI) ಜಂಟಿಯಾಗಿ Unit Trust of India (UTI) ಅನ್ನು ಸ್ಥಾಪಿಸುವುದರೊಂದಿಗೆ ಪ್ರಾರಂಭವಾಯಿತು.
ಮೊದಲ ಯೋಜನೆ: 1964 ರಲ್ಲಿ ‘Unit Scheme 1964’ (US-64) ಎಂಬ ಯೋಜನೆಯನ್ನು ಪರಿಚಯಿಸಲಾಯಿತು, ಇದು ಜನರಲ್ಲಿ ಹೂಡಿಕೆಯ ಆಸಕ್ತಿಯನ್ನು ಮೂಡಿಸಿತು.
ಹಂತ 2: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪ್ರವೇಶ (1987 – 1993): 1987 ರಿಂದ ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಹೂಡಿಕೆ ನಿಧಿಗಳನ್ನು ಆರಂಭಿಸಲು ಅನುಮತಿ ನೀಡಿತು.
* SBI Mutual Fund (1987) ಮೊದಲ ಯುಟಿಐ-ಅಲ್ಲದ ಮ್ಯೂಚುವಲ್ ಫಂಡ್ ಆಗಿ ಹೊರಹೊಮ್ಮಿತು.
* ನಂತರ Canbank Mutual Fund, LIC Mutual Fund ಮತ್ತು PNB Mutual Fund ಗಳು ಸ್ಥಾಪನೆಯಾದವು.
ಹಂತ 3: ಖಾಸಗಿ ವಲಯದ ಪ್ರವೇಶ ಮತ್ತು SEBI ರಚನೆ (1993 – 2003):
1993ರಲ್ಲಿ ಖಾಸಗಿ ಕಂಪನಿಗಳಿಗೂ ಈ ಕ್ಷೇತ್ರದಲ್ಲಿ ಅವಕಾಶ ನೀಡಲಾಯಿತು. ‘Kothari Pioneer’ ಭಾರತದ ಮೊದಲ ಖಾಸಗಿ ಮ್ಯೂಚುವಲ್ ಫಂಡ್ ಕಂಪನಿಯಾಯಿತು. ಇದೆ ವೇಳೆ SEBI ನಿಯಮಾವಳಿಗಳನ್ನು ಜಾರಿಗೆ ತರಲಾಯಿತು.
ಹಂತ 4: ಬಲವರ್ಧನೆ ಮತ್ತು ವಿಭಜನೆ (2003 – 2014): 2003 ರಲ್ಲಿ UTI ಅನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು: SUUTI ಮತ್ತು UTI Mutual Fund. ಈ ಹಂತದಲ್ಲಿ ಉದ್ಯಮವು ಹಲವು ವಿಲೀನಗಳಿಗೆ ಸಾಕ್ಷಿಯಾಯಿತು.
ಹಂತ 5: ಈಗಿನ ಆಧುನಿಕ ಯುಗ (2014 ರಿಂದ ಪ್ರಸ್ತುತ): ಇತ್ತೀಚಿನ ವರ್ಷಗಳಲ್ಲಿ ಮ್ಯೂಚುವಲ್ ಫಂಡ್ ಜನಪ್ರಿಯತೆ ಗಗನಕ್ಕೇರಿದೆ. “Mutual Funds Sahi Hai” ಎಂಬ ಅಭಿಯಾನವು ಚಿಲ್ಲರೆ ಹೂಡಿಕೆದಾರರಲ್ಲಿ ಅರಿವು ಮೂಡಿಸಿದೆ. 2020 ರ ವೇಳೆಗೆ ಮ್ಯೂಚುವಲ್ ಫಂಡ್ ನಿರ್ವಹಿಸುವ ಒಟ್ಟು ಆಸ್ತಿಯ ಮೊತ್ತ (AUM) ₹30 ಟ್ರಿಲಿಯನ್ ದಾಟಿದೆ.

