ಪಾಲನೆ ನ್ಯೂಸ್
ಪಾಂಡವಪುರ(ಮಂಡ್ಯ ) : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಸುನಾಮಿ ರೀತಿ ಮೇಲೆದ್ದು ಬಂದಂತೆ 2028ರ ಚುನಾ ವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮೇಲೆದ್ದು ಬರುತ್ತಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟ ರಾಜು ಭವಿಷ್ಯ ನುಡಿದರು.

ತಾಲೂಕಿನಲ್ಲಿ ಗುರುವಾರ ನಡೆದ ಜನರೊಂದಿಗೆ ಜನತಾದಳ ಮತ್ತು ಜೆಡಿಎಸ್ 25 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಖಿಲ್ ಮೇಲೆ ದೈವಶಕ್ತಿ ಇದೆ. ರಾಜ್ಯದಲ್ಲಿ ಜೆಡಿಎಸ್ ಅಲೆ ಎಬ್ಬಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿ ನಿಖಿಲ್ ಅವರಿಗಿದೆ. ಅದಕ್ಕಾಗಿ ಪಾಂಡವರು ಹೋರಾಡಿದ ಮಣ್ಣಿನಿಂದಲೇ ಚಾಲನೆಯನ್ನು ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಬಂದು ರಾಜ್ಯದ ಆಶಾಕಿರಣವಾಗಲಿದ್ದಾರೆ. ಅವರಿಂದ ಹೊಸದೊಂದು ಅಧ್ಯಾಯ ಶುರುವಾಗಲಿದೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
