NEWS

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರು. ವೆಚ್ಚದಲ್ಲಿ ಅಕ್ಟೇರಿಯಂ

ಪಾಲನೆ ನ್ಯೂಸ್

ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತ್ಯಾಕರ್ಷಣೀಯ ಸಾರ್ವಜನಿಕ ಮತ್ಯಾಗಾರವನ್ನು (ಅಕ್ಟೇರಿಯಂ) 144.4 ಕೋಟಿ ರು. ವೆಚ್ಚದಲ್ಲಿ ಅಭಿವೃ ದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ (ಪಿಪಿಪಿ) 30 ವರ್ಷಗಳ ಅವಧಿಗೆ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. ಮುಖ್ಯವಾಗಿ ಅಕ್ಟೇರಿಯಂನಲ್ಲಿ ಅಕ್ಟೇರಿಯಂ ಮೀನುಗಳು, ಸಿಹಿ ನೀರು, ಸಮುದ್ರ ಹಾಗೂ ಉಪ್ಪು ನೀರಿನ ಜಲಚರಗಳ ಆಕರ್ಷಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. 7.5 ಎಕರೆ ವಿಸ್ತೀರ್ಣದಲ್ಲಿರುವಅಕ್ಟೇರಿಯಂನಲ್ಲಿ ಏಷ್ಯನ್, ಅಮೇಜಾನ್, ಆಫ್ರಿಕಾ, ಕೋರಲ್ ರೀಫ್‌ಗಳ ಪ್ರದರ್ಶನ ಇರಲಿದೆ. ಜತೆಗೆ

ಪಾರದರ್ಶಕ ವಾಕ್ ಹೂ ಸುರಂಗಗಗಳನ್ನು ಮಾಡಲು ತೀರ್ಮಾನಿಸಲಾಗಿದೆ. 3ಡಿ, 4ಡಿ, 5ಡಿ ಇಮ್ಮರ್ಸಿವ್ ಥಿಯೇಟರ್, ಗ್ಲಾಸ್ ಬಾಟಮ್ ಬೋಟ್ ರೈಡ್, ಸ್‌ಕ್ಯೂಬಾ ಡೈವಿಂಗ್, ಅಂಡರ್ ವಾಟರ್ ಶೋ ಸಹ ಇರಲಿದೆ ಎಂದು ಮೂಲಗಳು ತಿಳಿಸಿವೆ.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮೊದಲು ನ್ಯಾಯ ಬೇಡಿ ಬಂದವರಿಗೆ ನ್ಯಾಯ ನೀಡುವುದನ್ನು ಕಲಿತುಕೊಳ್ಳಿ : ಡಾ.ನಾಗಲಕ್ಷ್ಮೀ

ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ದಾಖಲೆಗೆ ಸಂಭ್ರಮಾಚರಣೆ

ಸರ್ಕಾರಿ ನೌಕರರು ದೈಹಿಕವಾಗಿ ಸಧೃಡವಾಗಿ ಇರಬೇಕು: ಎನ್ ಚಲುವರಾಯಸ್ವಾಮಿ

Leave a Comment