NEWS

ಸುಪ್ರೀಂ ಕೋರ್ಟ್‌ನಲ್ಲಿ ಸಮ್ಮಾನ್ ಸಮರೋಹ್ (ವಿಶೇಷ ಲೋಕ ಅದಾಲತ್)

ಪಾಲನೆ ನ್ಯೂಸ್

ಮಂಡ್ಯ: ನ್ಯಾಯವನ್ನು ಸರಳ ಮತ್ತು ಪ್ರತಿ ಮನೆಗೂ ಸುಲಭವಾಗಿ ತಲುಪಿಸುವ ಮತ್ತು ಜನರು ಒಟ್ಟಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಒಂದು ಪರಿಹಾರವನ್ನು ಒಪ್ಪಿಕೊಳ್ಳುವ ಮೂಲಕ ಭರವಸೆ ನೀಡುವ ಉದ್ದೇಶದಿಂದ ಗೌರವಾನ್ವಿತ  ಸರ್ವೋಚ್ಚ ನ್ಯಾಯಾಲಯವು 2026 ರ "ಸಮಾಧಾನ್‍ ಸಮರೋಹ್‍ "ಎಂಬ  ವಿಶೇಷ ಲೋಕ್‍ ಅದಾಲತ್‍ ನ ಪ್ರಕ್ರಿಯೆಯನ್ನು  ದಿನಾಂಕಃ 21/04/2026 ರಿಂದ ಪ್ರಾರಂಭಿಸಿದ್ದು, ವಿಶೇಷ ಲೋಕ್‍ ಅದಾಲತ್‍ ನ್ನು  ದಿನಾಂಕಃ 21, 22 ಹಾಗೂ 23.08.2026 ರವರೆಗೆ ಆಯೇಾಜಿಸಲಾಗಿರುತ್ತದೆ

ಸದರಿ ಲೋಕ ಅದಾಲತ್‍ ನಲ್ಲಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ವೈವಾಹಿಕ ಪ್ರಕರಣಗಳು, ಮೋಟರ್ ವಾಹನ ಪ್ರಕರಣಗಳು, ಚೆಕ್‍ ಬೌನ್ಸ್ ಪ್ರಕರಣಗಳು, ವಿಭಾಗ ಪ್ರಕರಣಗಳು, ನಿರ್ದಿಷ್ಟ ಪರಿಹಾರ ಕಾಯಿದೆಯಡಿಯ ಪ್ರಕರಣಗಳು, ಹಣ ವಸೂಲಾತಿ, ಕಾರ್ಮಿಕ ವಿವಾದಗಳು, ಭೂ ಸ್ವಾಧೀನ ಪ್ರಕರಣಗಳು ಇತರ ಸಿವಿಲ್‍ ಪ್ರಕರಣಗಳು ಹಾಗೂ ರಾಜಿ ಆಗಬಹುದಾದಂತಹ ಕ್ರಿಮಿನಲ್‍ ಪ್ರಕರಣಗಳು ಇತರ ಪ್ರಕರಣಗಳನ್ನುಾ ಸಹ ಆಯಾ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕಿನ ತಾಲ್ಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಕೈಗೆತ್ತಿಕೊಂಡು ಕಕ್ಷಿದಾರರಿಗೆ ಅನುಕುಾಲವಾಗುವ ರೀತಿಯಲ್ಲಿ ಪೂರ್ವ ಸಂಧಾನ ನಡೆಸುವುದರ ಮೂಲಕ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ದಿನಾಂಕಃ 21/04/2026 ರಿಂದ ಸಂಧಾನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿರುತ್ತದೆ ಪ್ರಸ್ತುತ ಈಗಾಗಲೇ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿರುವ ಒಟ್ಟು 30 ಪ್ರಕರಣಗಳನ್ನು ಗುರುತಿಸಲಾಗಿರುತ್ತದೆ.

ಆದ್ದರಿಂದ “SAMADHAN SAMAROH (Special Lok Adalath) ನಲ್ಲಿ ಸದರಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕಕ್ಷಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ನ್ಯಾಯಧಾನ ಮಾಡಬೇಕೆಂಬ ಇಚ್ಫೆಯಿಂದ ಈ ಮೇಲಿನ ಎಲ್ಲಾ ಪ್ರಕರಣಗಳನ್ನು ತೆಗೆದುಕೊಂಡಿದ್ದು, ಪ್ರಕರಣ ಬಾಕಿ ಇರುವ ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಂಡು ವಿಶೇಷ ಲೋಕ್‍ ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ವಿಶೇಷ ಲೋಕ್-ಅದಾಲತ್‍ ಅನ್ನು ಯಶಸ್ವಿಗೊಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.

✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

ಶ್ರೀ. ಸುಬ್ರಮಣ್ಯ ಜೆ.ಎನ್. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ

Related posts

ಎಸ್ಸೆಸ್ಸೆಲ್ಸಿ ಪ್ರಿಪರೇಟರಿಗೆ ಹೊಸ ನಿಯಮ ಜಾರಿ

ಜ.25 ಕ್ಕೆ ಅಂತಾರಾಷ್ಟ್ರೀಯ ಮತದಾನ ದಿನಾಚರಣೆ

ಡಿಸೆಂಬರ್ 21 ರಿಂದ 24 ರವರೆಗೆ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

Leave a Comment