ಪಾಲನೆ ನ್ಯೂಸ್
ದುಬೈ/ವಾಷಿಂಗ್ಟನ್: ಅಮೆರಿಕಕ್ಕೆ ಇರಾನ್ ಇತ್ತೀಚೆಗೆ ಸಲ್ಲಿಸಿರುವ ಪ್ರಸ್ತಾವವು, ಉಭಯ ದೇಶಗಳ ನಡುವಿನ ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಹಾಗೂ ಈ ಸಮಸ್ಯೆಗಳನ್ನು 30 ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದೆ.
ಅಮೆರಿಕದ ಒಂಬತ್ತು ಅಂಶಗಳ ಯೋಜನೆಗೆ ಪ್ರತಿಯಾಗಿ ಸಲ್ಲಿಸಿರುವ 14 ಆಂಶಗಳ ಪ್ರಸ್ತಾವದಲ್ಲಿ ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನೇ ನಿಲ್ಲಿಸಬೇಕು.
ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಹಿಂಪಡೆಯಬೇಕು. ಬಂದರುಗಳ ಮೇಲಿನ ಈ ನಿರ್ಬಂಧವನ್ನು ತೆರವುಗೊಳಿಸಬೇಕು. ಪ್ರದೇಶದಿಂದ ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಲೆಬನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆ ಸೇರಿದಂತೆ ಎಲ್ಲ ದಾಳಿಗಳನ್ನು ನಿಲ್ಲಿಸಬೇಕು ಎಂಬ ಅಂಶಗಳನ್ನು ಇರಾನ್ ಪ್ರಸ್ತಾಪಿಸಿದೆ ಎಂದು ಇರಾನ್‌ನ ‘ನೂರ್’ ನ್ಯೂಸ್ ಏಜೆನ್ಸಿ ಹಾಗೂ ಅಮೆರಿಕದ ‘ಆಕ್ಸಿಯೋಸ್’ ಸುದ್ದಿ ಸಂಸ್ಥೆ ವರದಿ ಮಾಡಿವೆ.

ಅಮೆರಿಕದ ದಿಗ್ಧಂಧನ ವಿಫಲ”ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಅದು ಯುದ್ಧಪೂರ್ವ ಪರಿಸ್ಥಿತಿಗೆ ಮರಳುವುದಿಲ್ಲ’ ಎಂದು ಇರಾನ್ ಸಂಸತ್ ಉಪ ಸಭಾಧ್ಯಕ್ಷ ಆಲಿ ನಿಕ್ಖಾದ್ ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ಸಮೀಪವಿರುವ ಲಾರಕ್ ದ್ವೀಪದ ಬಂದರಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
✅ ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
