NEWS

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಇಲ್ಲ‌ ; ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ

ಪಾಲನೆ ನ್ಯೂಸ್

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಸರ್ಕಾರಿ ತೈಲ ಕಂಪನಿಗಳು ಪ್ರತಿ ಲೀಟ‌ರ್ ಪೆಟ್ರೋಲ್ ಮೇಲೆ ₹20 ಮತ್ತು ಡೀಸೆಲ್ ಮೇಲೆ ₹100ರಷ್ಟು ನಷ್ಟ ಅನುಭವಿಸುತ್ತಿವೆ.

ಆದರೂ, ಜನಸಾಮಾನ್ಯರಿಗೆ ಹೊರೆಯಾಗದಂತೆ ಕಂಪನಿಗಳಿಗೆ ನಷ್ಟವಾದರೂ ಗ್ರಾಹಕರ ಮೇಲೆ ಹೊರೆ ಇಲ್ಲ | ಕೇಂದ್ರ ಸ್ಪಷ್ಟೋಕ್ತಿ ಬೆಲೆಯನ್ನು ಸ್ಥಿರವಾಗಿಡಲು ಸರ್ಕಾರ ನಿರ್ಧರಿಸಿದೆ. ವಿಧಾನಸಭೆ ಚುನಾವಣೆಗಳ ನಂತರ ತೈಲ ಬೆಲೆ 25-28 ಏರಿಕೆಯಾಗಲಿದೆ ಎಂಬ ವರದಿಗಳನ್ನು ಸಚಿವಾಲಯ ತಳ್ಳಿಹಾಕಿದೆ. ಇದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 113 ಡಾಲ‌ರ್ ದಾಟಿದ್ದರೂ, ತೆರಿಗೆ ಕಡಿತ ಮತ್ತು ಸಬ್ಸಿಡಿಗಳ ಮೂಲಕ ಗ್ರಾಹಕರ ಹಿತವನ್ನು ರಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಮಾರ್ಚ್ 7 ರಂದು ಅಸ್ಪೃಶ್ಯತಾ ನಿವಾರಣೆ ಕುರಿತ ವಿಚಾರ ಸಂಕಿರಣ

ರೇಷನ್‌ ಗಾಗಿ ಪರದಾಟ

ಕಳೆದ 6 ತಿಂಗಳಲ್ಲಿ ನಗರ ಪೊಲೀಸ್ ಘಟಕದಿಂದ 105 ಸ್ವತ್ತು ಕಳುವು ಪ್ರಕರಣಗಳ ಪತ್ತೆ

Leave a Comment