NEWS

ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ 20 ಸಾವಿರ ಫ್ರೆಶರ್ಸ್ ನೇಮಕಕ್ಕೆ ನಿರ್ಧಾರ

ಪಾಲನೆ ನ್ಯೂಸ್

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಗುರುವಾರ ತನ್ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ₹8,501 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ. 20.8ರಷ್ಟು ಏರಿಕೆಯಾಗಿದೆ. ಕಂಪನಿಯ ಕಾರ್ಯಾಚರಣೆ ಆದಾಯ ಶೇ. 13.4ರಷ್ಟು ಹೆಚ್ಚಳವಾಗಿದ್ದು, ₹46,402 ಕೋಟಿಗೆ ತಲುಪಿದೆ.

ಕಂಪನಿಯು 14.9 ಶತಕೋಟಿ ಮೌಲ್ಯದ ಬೃಹತ್ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಎಐ ತಂತ್ರಜ್ಞಾನದ ಸೇವೆಗಳಿಗೆ | ತ್ರೈಮಾಸಿಕ ಲಾಭ₹8,501 ಕೋಟಿ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಿಇಒ ಸಲಿಲ್ ಪರೇಖ್ ತಿಳಿಸಿದ್ದಾರೆ. 2026-27ರ ಹಣಕಾಸು ವರ್ಷದಲ್ಲಿ 20,000 ಪದವೀಧರರನ್ನು (ಫ್ರೆಶರ್ಸ್) ನೇಮಿಸಿಕೊಳ್ಳಲು ಕಂಪನಿ ಯೋಜಿಸಿದೆ. ಒಟ್ಟಾರೆ ವಾರ್ಷಿಕ ಲಾಭ₹29,440 ಕೋಟಿಗೆ ಏರಿಕೆಯಾಗಿದ್ದು, ಮುಂದಿನ ವರ್ಷ ಶೇ. 1.5ರಿಂದ 3.5ರಷ್ಟು ಆದಾಯ ಬೆಳವಣಿಗೆಯನ್ನು ಕಂಪನಿ ನಿರೀಕ್ಷಿಸುತ್ತಿದೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ತಂಬಾಕು ನಿಯಂತ್ರಣ ಕುರಿತು ಆದರ್ಶ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರ

ಜಿಲ್ಲೆಯಲ್ಲಿ ನಿರುದ್ಯೋಗ ಹೋಗಲಾಡಿಸಲು ಉದ್ಯಮಗಳಿಗೆ ಒತ್ತು ನೀಡಿ

ಪ್ರತಿಭೆಯನ್ನು ಅನಾವರಣಗೊಳಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ: ರವಿಕುಮಾರ್

Leave a Comment