NEWS

ಆರ್ ಆರ್‌ಗೆ 8 ವಿಕೆಟ್‌ ಜಯ

ಪಾಲನೆ ನ್ಯೂಸ್

ಗುವಹಾಟಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 8 ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಗುವಾಹಟಿಯ ಬಾರ್ಸಾಪರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್ ಬೌಲರ್‌ಗಳ ಮುಂದೆ ತತ್ತರಿಸಿತು. ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 127 ರನ್ ಗಳಿಸಿ ಆಲೌಟ್ ಆಯಿತು. ಸುಲಭ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 12.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 128ರನ್‌ಗಳಿಸಿ ಗೆಲುವು ಸಾಧಿಸಿತು.

15 ವೈಭವ್ ಸೂರ್ಯವಂಶಿ ತಾನು ಎದುರಿಸಿದ ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಅಬ್ಬರದ ಆಟವಾಡಿದರು. ಸೂರ್ಯವಂಶಿ ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಂತಿಮವಾಗಿ 52 ರನ್ (17 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ಕ್ಯಾಚ್ ನೀಡಿ ಔಟಾದರು. ಸೂರ್ಯವಂಶಿಯ ಅಬ್ಬರದ ಆಟದಿಂದ ಮೊದಲ ವಿಕೆಟ್‌ ಗೆ 38 ಎಸೆತಗಳಲ್ಲಿ 75 ರನ್ ಬಂದಿತ್ತು.

ಯಶಸ್ವಿ ಜೈಸ್ವಾಲ್ ಅವರು 38 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ರಾಜಸ್ಥಾನ್ ತಂಡವು ಗುರಿಯನ್ನು ಸುಲಭವಾಗಿ ತಲುಪಿತು. ಚೆನ್ನೈಗೆ ಆರಂಭದಲ್ಲೇ ಕುಸಿತ ಚೆನ್ನೈಗೆ ಆರಂಭದಲ್ಲೇ ಆರ್‌ಆ‌ರ್ ಬೌಲರ್‌ಗಳು ಶಾಕ್ ನೀಡಿದರು. ನಾಂಡ್ರೆ ಬರ್ಗರ್ ಸಂಜು ಸಾಮನ್ ಅವರನ್ನು ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಜೋಫಾ ಆರ್ಚರ್ ಬೌಲ್ಡ್ ಮಾಡಿದರು. ನಂತರ ಸಂದೀಪ್ ಶರ್ಮಾ, ನಾಯಕ ರವೀಂದ್ರ ಜಡೇಜಾ ನಾವು ಕಡಿಮೆ ಇಲ್ಲ ಎನ್ನುವಂತೆ ಬೌಲಿಂಗ್ ಮಾಡಿದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಯಿತು

2028ರಲ್ಲಿ ಮತ್ತೆ ಎಚ್‌ಡಿಕೆ‌ ಮುಖ್ಯಮಂತ್ರಿ ಆಗುತ್ತಾರೆ : ಜಿ.ಡಿ.ಹರೀಶ್‌ ಗೌಡ

ಯುಎಇನಲ್ಲಿ 3 ಭಾರತೀಯರಿಗೆ ಗಾಯ

Leave a Comment