NEWS

ಕೀಲಾರದಲ್ಲಿ ರಾಜಸೂಯ ಯಾಗ ಪೌರಾಣಿಕ ನಾಟಕ ಪ್ರದರ್ಶನ

ನಿತ್ಯ ಸಚಿವ ಕೆ.ವಿ.ಶಂಕರಗೌಡರ ನೆನಪಿನ ನಾಟಕ

ಪಾಲನೆ ನ್ಯೂಸ್
ಮಂಡ್ಯ: ತಾಲ್ಲೂಕು ಕೀಲಾರದಲ್ಲಿ ಶ್ರೀ ಸೋಮೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವತಿಯಿಂದ ಏ. 3, ಶುಕ್ರವಾರ ಗ್ರಾಮದ ಮಾರಿಗುಡಿ ಆವರಣದಲ್ಲಿ ನಿತ್ಯ ಸಚಿವ ಕೆ.ವಿ.ಶಂಕರಗೌಡರ ನೆನಪಿನಲ್ಲಿ ರಾತ್ರಿ 7-30ಕ್ಕೆ ರಾಜಸೂಯ ಯಾಗ ನಾಟಕ ಆಯೋಜಿಸಲಾಗಿದೆ.


ಸುಮಾರು 28 ಯುವ ಕಲಾವಿದರು ಎರಡು ತಿಂಗಳಿಂದ ನಿರಂತರವಾಗಿ ರಂಗ ತಾಲೀಮು ನಡೆಸಿದ್ದು, ಅದ್ಭುತವಾಗಿ ನಾಟಕ ಪ್ರದರ್ಶನ ಮಾಡಲು ಸಜ್ಜಾಗಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಾದ ಪಿ.ರವಿಕುಮಾರ್ ಗೌಡ ಅವರು ವಹಿಸಲಿದ್ದು.ಪಿ.ಇ.ಟಿ.ಅಧ್ಯಕ್ಷರಾದ ಕೆ.ಎಸ್.ವಿಜಯ್ ಆನಂದ್ಅವರು ಉಧ್ಟಾಟಿಸಲಿದ್ದಾರೆ.


ಮನ್ ಮುಲ್ ನಿರ್ದೇಶಕರಾದ ಬಿ ಆರ್.ರಾಮಚಂದ್ರು, ಕೆ.ಕೆ.ರಾಧಾಕೃಷ್ಣ,ಕೆರಗೋಡು ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್, ಕೆ.ಎಂ.ರುದ್ರೇಗೌಡ, ಕೆ.ಶಿವಮೂರ್ತಿ ಕೀಲಾರ, ಕಿರಣ್ ರಾಮಲಿಂಗೇಗೌಡ, ಜಿ.ವಸಂತರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೀಲಾರ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ವ್ಯವಸ್ಥಾಪಕರಾದ ಕೆ.ಎಂ.ವೀರೇಶ್, ಕೆ.ಸಿ.ಕುಮರ್ ಸ್ವಾಮಿ, ಕೆ.ಆರ್.ರಮೇಶ್, ಕೆ.ಎಂ.ಕೃಷ್ಣೇಗೌಡ, ಕೆ.ಆರ್.ಆನಂದ, ಕೆ.ಸಿ.ಮಧು ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಿಲ್ಲ, ಆತಂಕ ಬೇಡ

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ವೇಗ: ಸಿಎಂ ಸಿದ್ದರಾಮಯ್ಯ ಹೇಳಿಕೆ-Guarantee schemes

ಕೆನೆ ಪದರ ಅಳವಡಿಸಿದರೆ ಪರಿಶಿಷ್ಟರಿಗೆ ಅನ್ಯಾಯ

Leave a Comment