NEWS

ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಶಿಯಾಗಳ ಪ್ರತಿಭಟನೆ

ಪಾಲನೆ ನ್ಯೂಸ್

ಬೆಂಗಳೂರು : ಇರಾನ್‌ನ ಮೇಲೆ ಅಮೆರಿಕ ದಾಳಿ ನಡೆಸಿ ಅಲ್ಲಿನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಶಿಯಾ ಮುಸ್ಲಿಮರು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿ, ಅಮೆರಿಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾನನ್ ಮಾರ್ಕೆಟ್ ಬಳಿ ಇರುವ ಮಸೀದಿ ಸಮೀಪ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಂಗಸರು, ಮಕ್ಕಳು, ಪುರುಷರು ಕಪ್ಪು ಪಟ್ಟಿ ಧರಿಸಿ ಅಳುತ್ತಾ ಪಾಲ್ಗೊಂಡರು. ‘ನಮ್ಮ ಶಕ್ತಿ ಇಡೀ ಪ್ರಪಂಚಕ್ಕೆ ಗೊತ್ತಿದೆ.

ಅಮೆರಿಕ ನಮ್ಮನ್ನು ಕೆಣಕಿದೆ. ಅಮೆರಿಕವನ್ನು ನಾವು ಸುಮ್ಮನೇ ಬಿಡುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು. ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ಯುದ್ಧ ಸಾರಿರುವುದನ್ನು ಟೀಕಿಸಿದರು. ಪ್ರತಿಭಟನೆಯಲ್ಲಿದ್ದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಾತನಾಡಿ, ಅಮೆರಿಕಾದ ಕೈಯಲ್ಲಿ ಸೂಪರ್ ಪವರ್ ಇದೆ ಎಂದು ಅವರು ಏನು ಬೇಕಾದರೂ ಮಾಡಬಹುದೇ. ಬೇರೆಯವರು ಇದನ್ನು ಮಾಡಿದರೆ ತಪ್ಪಾಗುತ್ತದೆ. ನಮ್ಮ ಸರ್ವಶ್ರೇಷ್ಠ ಗುರುಗಳಾದ ಖಮೇನಿ ಅವರನ್ನು ಹತ್ಯೆ ಮಾಡಿದ್ದು ಸರಿಯಲ್ಲ ಎಂದರು.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಕದನ ವಿರಾಮವನ್ನು ವಿಸ್ತರಿಸುವ ಬದಲು ಯುದ್ಧವನ್ನೇ ನಿಲ್ಲಿಸಬೇಕು

ಮೊಜಬಾ ಖಮೇನಿ ಕೂಡ ಇದೀಗ ಜೀವಂತ ಶವವಾಗಿದ್ದಾರೆ

ರಷ್ಯಾದಿಂದ ತೈಲ: ಭಾರತದ ಮೇಲೆ ಅಮೆರಿಕದಿಂದ ಮತ್ತಷ್ಟು ದಂಡನೆ? ಹೊಸ ಮಸೂದೆ ಶೀಘ್ರ

Leave a Comment