NEWS

ಮಾದಪ್ಪನ ಬೆಟ್ಟಕ್ಕೆ ಕಾವೇರಿ ದಾಟಿ ಪಾದಯಾತ್ರೆ ಬಂದ ಭಕ್ತ ಸಾಗರ

ಕನಕಪುರ, ಬೆಂಗಳೂರಿನ ಸಾವಿರಾರು ಭಕ್ತರಿಂದ ನಡಿಗೆ | ಅರಣ್ಯ ಇಲಾಖೆ, ಪೊಲೀಸರಿಂದ ನೆರವು

ಪಾಲನೆ ನ್ಯೂಸ್

ಹನೂರು: ಶಿವರಾತ್ರಿ ಜಾತ್ರಾಮಹೋತ್ಸವ ಹಿನ್ನೆಲೆ ಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಮಂಗಳವಾರ ವಿವಿಧೆಡೆ ಯಿಂದ ಪಾದಯಾತ್ರೆ ಮೂಲಕ ಆಗಮಿ ಸಿದ ಭಕ್ತರು ಕಾವೇರಿ ನದಿ ದಾಟುತ್ತಿರುವ ದೃಶ್ಯ ಗಮನಸೆಳೆಯಿತು.

ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಯ ಆತಂಕದ ನಡುವೆಯೂ ಸಾವಿರಾರು ಭಕ್ತರು ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದು, ಮಂಗಳವಾರ ಜನರು ಕನಕಪುರ ತಾಲೂಕಿನ ಏಳಗಳ್ಳಿ ಗ್ರಾಮದಿಂದ ಸಂಗ ಮದ ಕಾವೇರಿ ನದಿ ದಾಟಿ ಬೆಟ್ಟಕ್ಕೆ ಬಂದರು. ಅಲ್ಲದೇ, ಬೆಂಗಳೂರು ಸೇರಿ ದಂತೆ ದಕ್ಷಿಣದ ಜಿಲ್ಲೆಗಳ ಭಕ್ತರು ಕಾವೇರಿ

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಕಾವೇರಿ ನದಿ ದಾಟುತ್ತಿರುವ ಸಹಸ್ರಾರು ಭಕ್ತರು.

ನದಿ ದಾಟಿ ಕಾಲ್ನಡಿಗೆಯಲ್ಲಿ ಆಗಮಿಸು ತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಎಲ್ಲರನ್ನೂ ಸುರಕ್ಷಿತವಾಗಿ ನದಿ ದಾಟಿಸಲು ಕ್ರಮ ಕೈಗೊಂಡಿದ್ದಾರೆ.

ಇನ್‌ಸ್ಪೆಕ್ಟರ್ ಆನಂದ್ ಮೂರ್ತಿ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಭಕ್ತರ ಸುರಕ್ಷಿತಗೆ ಆದ್ಯತೆ ನೀಡಿದ್ದು,

ಅರಣ್ಯ ಪ್ರದೇಶದಲ್ಲಿ ಗುಂಪಾಗಿ ಸಂಚರಿಸು ವಂತೆ ಧ್ವನಿವರ್ಧಕದಲ್ಲಿ ಮಾಹಿತಿ ನೀಡುತ್ತಿದ್ದಾರೆ.

ನೆರಳು, ಉಪಹಾರ ವ್ಯವಸ್ಥೆ: ಮಳವಳ್ಳಿ ತಾಲೂಕಿನಿಂದ ಹರಕೆ ಹೊತ್ತು ಮಾದಪ್ಪನ ಭಕ್ತನೊಬ್ಬ ತನ್ನ 1 ವರ್ಷದ ಮಗುವನ್ನು ಕಾವೇರಿ ನದಿ ದಾಟುತ್ತಿರುವ ದೃಶ್ಯ

ಗಮನ ಸೆಳೆಯಿತು. ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಶಾಗ್ಯ ಕಳ್ಳಿದೊಡ್ಡಿ ಗ್ರಾಮದ ಮುಖ್ಯರಸ್ತೆ ಹಾಗೂ ಅಲ್ಲಲ್ಲಿ ದಾನಿಗಳು ನೆರಳಿನ ವ್ಯವಸ್ಥೆ ಕಲ್ಪಿಸಿದ್ದು, ಕುಡಿಯುವ ನೀರು, ಮಜ್ಜಿಗೆ, ಪಾನಕ ಸೇರಿದಂತೆ ಉಪಹಾರದ ವ್ಯವಸ್ಥೆ ಮಾಡಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಬಂಡೀಪುರ ಸಫಾರಿ ಪುನಾರಂಭ 108 ದಿನ ಬಳಿಕ ಪುನಾರಂಭ

ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದಿಗೆ ಪ್ರತಿಭಟನೆ

ಯುಗಾದಿ ʻರಂಗೋಲಿ ಸ್ಪರ್ಧೆʼ

Leave a Comment