NEWS

ಇರಾನ್‌ಗೆ ಅಮೆರಿಕ ಅಧ್ಯಕ್ಷರ ಎಚ್ಚರಿಕೆ

ಪಾಲನೆ ನ್ಯೂಸ್

ವಾಷಿಂಗ್ಟನ್: ಇರಾನ್ ಮೇಲಿನ ‘ಆಪರೇಷನ್ ಪ್ಯೂರಿ’ ತೀವ್ರಗೊಳಿಸಿರುವ ಅಮೆರಿಕ, ಇರಾನ್‌ 9 ಯುದ್ಧನೌಕೆಗಳನ್ನು ಜಲಸಮಾಧಿ ಮಾಡಿದ್ದಾಗಿ ಹೇಳಿದೆ. ಈ ಕುರಿತು ಟ್ರುತ್ ಸೋಷಿ ಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿರುವ ಟ್ರಂಪ್, ‘ನಾವು ಇರಾನ್‌ನ ಅತಿದೊಡ್ಡ 9 ನೌಕೆ ಜಲಸಮಾಧಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇರಾನ್‌ನ ಇನ್ನಷ್ಟು ನೌಕೆ ತಳಸೇರ ಲಿವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ‌

ಇದರ ಜೊತೆಗೆ, ಇರಾನ್‌ ನೌಕಾಪಡೆಯ ಕೇಂದ್ರ ಕಚೇರಿ ಮೇಲೂ ನಮ್ಮ ವಿಮಾನಗಳು ದಾಳಿ ನಡೆಸಿದ್ದು ಅವು ಭಾರೀ ಹಾನಿಗೆ ಹಾನಿಗೆ ತುತ್ತಾಗಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಹೊಸ ನಾಯಕತ್ವದ ಜತೆ ಚರ್ಚೆಗೆ ರೆಡಿ ಅವರು ಮಾತುಕತೆ ಬಯಸಿದ್ದರು, ನಾನು ಒಪ್ಪಿದೆ: ಟ್ರಂಪ್ ವಾಷಿಂಗ್ಟನ್: ಸರ್ವಾಧಿಕಾರಿ ಅಧ್ಯಕ್ಷ ಖಮೇನಿ ಹತ್ಯೆ ಬೆನ್ನಲ್ಲೇ, ಇರಾನ್‌ನ ನೂತನ ನಾಯಕತ್ವ ನಮ್ಮೊಂದಿಗೆ ಮಾತು ಕತೆಗೆ ಬಯಸಿದೆ. ಅದಕ್ಕೆ ನಾನು ಒಪ್ಪಿ ಕೊಂಡಿದ್ದೇನೆ ಎಂದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಅಟ್ಲಾಂಟಿಕ್ ಮ್ಯಾಗಜಿನ್‌ಗೆ ಸಂದ ರ್ಶನ ನೀಡಿರುವ ಟ್ರಂಪ್, ‘ಅವರು ಮಾತುಕತೆ ಬಯಸಿದ್ದಾರೆ. ಇದನ್ನು ಬೇಗ ನಡೆಸಬೇಕು. ಅವರು ಈ ವಿಷಯದಲ್ಲಿ ಈಗಾಗಲೇ ಸಾಕಷ್ಟು ವಿಳಂಬ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಜೊತೆಗೆ ಇತ್ತೀಚಿನ ದಿನದವರೆಗೂ ನನ್ನೊಂದಿಗೆ ಮಾತುಕತೆ ನಡೆಸುತ್ತಿದ್ದ ಕೆಲವರು ಇದೀಗ ಇಲ್ಲ ಎನ್ನುವ ಮೂಲಕ ಅವರೆಲ್ಲಾ ಅಮೆರಿಕದ ದಾಳಿಗೆ ಬಲಿಯಾದ ವಿಷಯ ಖಚಿತ ಪಡಿಸಿದ್ದಾರೆ. ಆದರೆ ಯಾರ ಹೆಸರನ್ನೂ ಹೇಳಿಲ್ಲ. ಅಮೆರಿಕ ಅಬ್ರಹಾಂ ಲಿಂಕನ್ | ನೌಕೆ ಮೇಲೆ ದಾಳಿ: ಇರಾನ್ ಹತ್ತಿರ ಕೂಡಾ ಬಂದಿಲ್ಲ: ಅಮೆರಿಕ ದಾಳಿಗೆ ಅಮೆರಿಕದ 3 ಯೋಧರು ಬಲಿ ವಾಷಿಂಗ್ಟನ್: ಇರಾನ್ ಮೇಲೆ ತಾನು ನಡೆಸುತ್ತಿರುವ ಆಪರೇಷನ್ ಪ್ಯೂರಿ ವೇಳೆ ತನ್ನ ಮೂವರು ಯೋಧರು ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಹೇಳಿದೆ. ಇದು ಯುದ್ಧ ಆರಂಭವಾದ ಬಳಿಕ ಅಮೆರಿಕದ ಯೋಧರ ಸಾವಿನ ಮೊದಲ ಪ್ರಕರಣವಾಗಿದೆ.

ಅಮೆರಿಕದ ಅಬ್ರಹಾಂ ಲಿಂಕನ್ ನೌಕೆ ಮೇಲೆ ತಾನು ಕ್ಷಿಪಣಿ ದಾಳಿ ನಡೆಸಿದ್ದಾಗಿ ಇರಾನ್ ಹೇಳಿದ ಬೆನ್ನಲ್ಲೇ ಅಮೆರಿಕ ಯೋಧರ ಸಾವಿನ ಸುದ್ದಿ ಪ್ರಕಟಿಸಿದೆ. ಆದರೆ ಸಾವು ಎಲ್ಲಿ ಸಂಭವಿಸಿದೆ ಎಂದು ಹೇಳಿಲ್ಲ. ಟೆಹ್ರಾನ್: ಕಳೆದೊಂದು ತಿಂಗಳಿಂದ ಇರಾನ್ ಹಿತ್ತಲಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯ ಮೇಲೆ ದಾಳಿ ನಡೆಸಿ ರುವುದಾಗಿ ಇರಾನ್‌ನ ರೆವಲ್ಯೂ ಡ್ನರಿ ಗಾರ್ಡ್ಸ್ (ಐಆರ್‌ಜಿಸಿ) ಘೋಷಿಸಿದೆ. ‘ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿದ್ದೇವೆ’ ಎಂದು ಐಆರ್‌ಜಿಸಿ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಹೇಳಿಕೆಯನ್ನು ಪೂರ್ಣ ಸುಳ್ಳು ಎಂದಿರುವ ಅಮೆರಿಕ ಸೇನಾ ಪಡೆ, ನೌಕೆ ಸುರಕ್ಷಿತವಾಗಿರುವ ಫೋಟೋ ಬಿಡುಗಡೆ ಮಾಡಿದೆ.

ಜೊತೆಗೆ ಇರಾನ್ ಕ್ಷಿಪಣಿಗಳು ನಮ್ಮ ನೌಕೆಯ ಹತ್ತಿರ ಕೂಡಾ ಬಂದಿಲ್ಲ ಎಂದು ಹೇಳಿದೆ. ದಾಳಿ ಮುಂದುವರೆಸಿದರೆ ಹುಷಾರ್: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ ದುಬೈ: ಖಮೇನಿ ಹತ್ಯೆಯಿಂದ ಕ್ರೋಧಗೊಂಡು ದಾಳಿಯನ್ನು ತೀವ್ರ ಗೊಳಿಸಿರುವ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ‘ಆಕ್ರಮಣವನ್ನು ತೀವ್ರಗೊಳಿಸುವುದಾಗಿ ಇರಾನ್ ಘೋಷಿಸಿದೆ. ಆದರೆ ಅವರು ಹಾಗೆ ಹಾಗೆ ಮಾಡದಿದರೆ ಮಾಡದಿದ್ದರೆ ಒಳಿತು. ಒಳಿತು ಕಾರಣ, ಅದಕ್ಕೆ ಪ್ರತಿಯಾಗಿ ನಾವು ಕಂಡುಕೇಳರಿಯದ ದಾಳಿ ನಡೆ ಸುತ್ತೇವೆ’ ಎಂದು ಪೋಸ್ಟ್ ಮಾಡುವ ಮೂಲಕ ಟ್ರಂಪ್ ಬೆದರಿಸಿದ್ದಾರೆ. ಇದಲ್ಲದೆ ಮುಂದಿನ ದಿನಗಳ ಕಾಲ ಸೀಮಿತ ದಾಳಿ ಮುಂದುವರೆಯಲಿದೆ ಎನ್ನುವ ಮೂಲಕ ತಕ್ಷಣಕ್ಕೆ ದಾಳಿ ನಿಲ್ಲಿಸದೇ ಇರುವ ಸುಳಿವನ್ನೂ ನೀಡಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಜಿಲ್ಲಾಧಿಕಾರಿಗಳ ಕೆ.ಆರ್. ಪೇಟೆ ತಾಲ್ಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ

ಷೇರುಪೇಟೆ ಚೇತರಿಕೆ

ಪಂಜಾಬ್‌ಗೆ 6 ವಿಕೆಟ್‌ಗಳ ಗೆಲುವು

Leave a Comment