NEWS

ಆಫ್ಘನ್ ಸೇನೆ ಪ್ರತಿದಾಳಿ ; 15 ಔಟ್‌ಪೋಸ್ಟ್ ವಶ ಪಡಿಸಿಕೊಂಡ ಆಫ್ಘನ್ ಮಿಲಿಟರಿ

ಪಾಲನೆ ನ್ಯೂಸ್

ಕಾಬೂಲ್: ಪಾಕಿಸ್ತಾನ ಸೇನೆ ಅಫ್ಘಾನಿಸ್ತಾನದ ಮೇಲೆ ವಾಯುದಾಳಿ ನಡೆಸಿದ್ದಕ್ಕೆ 15 ಔಟ್‌ಪೋಸ್ಟ್ ವಶ ಎಂದು ಆಫ್ಘನ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಯಾಗಿ ಆಫ್ಘನ್ ಸೇನೆ ಗುರುವಾರ ರಾತ್ರಿ ಪಾಕ್ ಮೇಲೆ ಪ್ರತಿದಾಳಿ ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 15 ಔಟ್‌ಪೋಸ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಪಾಕಿಸ್ತಾನ ವಾಯುಪಡೆ ಇತ್ತೀಚೆಗೆ ಅಫ್ಘಾನಿಸ್ತಾನದ ನಂಗರ್ಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳಲ್ಲಿ ವಾಯುದಾಳಿ ನಡೆಸಿ 70 ಜನರನ್ನು ಹತ್ಯೆ ಮಾಡಿತ್ತು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿಯಾದ ಡುರಾಂಡ್ ರೇಖೆಯುದ್ದಕ್ಕೂ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಖೈಬರ್ ಪುಕ್ವಾ ಪ್ರಾಂತ್ಯದಲ್ಲಿ ಆಫ್ಘನ್ ಗಡಿಯಲ್ಲಿ ಹೆಚ್ಚಿನ ದಾಳಿ ನಡೆಯುತ್ತಿದ್ದು ಪಾಕಿಸ್ತಾನ ಸೇನಾ ಪಡೆಗಳೂ ಸಹ ಆಫ್ಘನ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಯುತ್ತಿದ್ದು, ನಾವೂ ಪ್ರತಿದಾಳಿ ನಡೆಸುತ್ತಿದ್ದೇವೆ ಎಂದು ಪಾಕಿಸ್ತಾನದ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ನೈಜ ಮಾರ್ಗದರ್ಶಕರ ಕೊರತೆ

ಅತ್ಯಾಚಾರ-ಹತ್ಯೆ ಮೂವರು ಅಪರಾಧಿಗಳಿಗೆ ಮರಣದಂಡನೆ

ಮಂಡ್ಯ ಜಿಲ್ಲೆಯು ಇ-ಪೌತಿ ಖಾತಾ ಆಂದೋಲನದಲ್ಲಿ ರಾಜ್ಯಕ್ಕೆ ಪ್ರಥಮ

Leave a Comment