NEWS

ರೈತರಿಗೆ ಕಿರುಕುಳ ನೀಡುವ ಖಾಸಗಿ ಫೈನಾನ್ಸಿಯರ್’ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು

ರೈತರ ಕುಂದುಕೊರತೆಗಳಿಗೆ ಹಾಗೂ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು – ಡಾ ಕುಮಾರ

ಪಾಲನೆ ನ್ಯೂಸ್

ಮಂಡ್ಯ: ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡಬಾರದು ಎಂಬುದು ಸರ್ಕಾರದ ಕಟ್ಟುನಿಟ್ಟಿನ ಆದೇಶವಾಗಿದೆ. ನಿಯಮ ಮೀರಿ ವರ್ತಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರೖತ ಸಂಘದ ಬೇಡಿಕೆಗಳ ಸಂಬಂಧ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರ್‌ಬಿಐಗೆ ಒಳಪಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿ ಮಾಡುವಾಗ ಆರ್‌ಬಿಐ (RBI) ನಿಗದಿಪಡಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ನಿಯಮಗಳನ್ನು ಪಾಲಿಸಬೇಕು. ನಿಯಮ ಮೀರಿ ದೌರ್ಜನ್ಯ ಎಸಗುವ ಸಂಸ್ಥೆಗಳ ವಿರುದ್ಧ ಕಾನೂನು ರೀತಿ ಕ್ರಮ ಕೖಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಳಿಗ್ಗೆಯ ಸಮಯದಲ್ಲಿ ರೈತರು ತಮ್ಮ ಬೆಳೆಗಳಿಗೆ ನೀರು ಹರಿಸುವುದು ಅತ್ಯಂತ ಪ್ರಯೋಜನಕಾರಿ ಚೆಸ್ಕಾಂ ನಿಂದ ಬೆಳಿಗ್ಗೆ ವಿದ್ಯುತ್ ನೀಡಲು ಅಗತ್ಯ ಕ್ರಮ ಕೖಗೊಳ್ಳಿ. ಹಗಲು ವೇಳೆ ವಿದ್ಯುತ್ ನೀಡಲು ತಾಂತ್ರಿಕ ಅಡಚಣೆಗಳು ಇದ್ದರೆ ಅದನ್ನು ಬಗಹರಿಸಿ ಅಗತ್ಯ ಕ್ರಮಕೊಳ್ಳಿ ಎಂದು ತಿಳಿಸಿದರು.

ಬೆಳಿಗ್ಗೆ ವಿದ್ಯುತ್ ನೀಡುವುದರಿಂದ ರೈತರಿಗೆ ಕ್ರಿಮಿ ಕೀಟಗಳ ಭಯವಿಲ್ಲದೆ ಮತ್ತು ಸರಿಯಾದ ಬೆಳಕಿನಲ್ಲಿ ನೀರು ಹರಿಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೈತರ ಕುಂದುಕೊರತೆಗಳಿಗೆ ಹಾಗೂ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ರೈತರಿಗೆ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಬ್ಯಾಂಕುಗಳು ಹಲವು ಬೆಳೆ ಸಾಲ ಯೋಜನೆಗಳನ್ನು ಸಮರ್ಪಕವಾಗಿ ನೀಡಲು ಕ್ರಮವಹಿಸಿ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಪ್ರತೀಕ್ ಹೆಗ್ಡೆ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.‌

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

ಯುವ ಜನತೆಯೂ ಡಾ. ರಾಜ್ ಕುಮಾರ್ ರವರ ಸರಳ ಜೀವನ ಶೈಲಿ ಹಾಗೂ ಅವರ ನೈತಿಕ ಮೌಲ್ಯಗಳನ್ನು ಅಳವಡಿಸಿ ಕೊಳ್ಳಿ : ಬಿ. ಪಿ. ಪ್ರಕಾಶ್

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ವೇಗ: ಸಿಎಂ ಸಿದ್ದರಾಮಯ್ಯ ಹೇಳಿಕೆ-Guarantee schemes

2028ರಲ್ಲಿ ಮತ್ತೆ ಎಚ್‌ಡಿಕೆ‌ ಮುಖ್ಯಮಂತ್ರಿ ಆಗುತ್ತಾರೆ : ಜಿ.ಡಿ.ಹರೀಶ್‌ ಗೌಡ

Leave a Comment