NEWS

ಯುವ ನಿಧಿ ಯೋಜನೆಯ ನೋಂದಣಿ ಕಾರ್ಯಕ್ರಮ

ಪಾಲನೆ ನ್ಯೂಸ್


ಮೈಸೂರು : “ಯುವ ನಿಧಿ’’ ಯೋಜನೆಯ ನೋಂದಣಿ ಕಾರ್ಯಕ್ರಮ ಪ್ರಕ್ರಿಯೆಯಲ್ಲಿದ್ದು, ಯುವನಿಧಿಯ ಫಲಾನುಭವಿಗಳು ಪ್ರತಿ ಮಾಹೆಯ ೧ ನೇ ದಿನಾಂಕದಿಂದ ೨೫ ನೇ ದಿನಾಂಕದೊಳಗಾಗಿ ಸೆಲ್ಪ್ ಡಿಕ್ಲರೇಷನ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.


೨೦೨೫ನೇ ಸಾಲಿನಲ್ಲಿ ಪಾಸಾದ ಪದವಿ/ಡಿಪ್ಲೋಮ ಉತ್ತೀರ್ಣರಾದ ವಿದ್ಯಾರ್ಥಿಗಳು, ಪದವಿ/ಡಿಪ್ಲೋಮ ಸ್ನಾತಕೊತ್ತರ ನಂತರ ಕನಿಷ್ಟ ೬ ತಿಂಗಳ ಅವಧಿಯವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು,
ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವವರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.

ನೋಂದಣಿ ಅಗತ್ಯವಿರುವ ದಾಖಾಲಾತಿಗಳು, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ/ಡಿಪ್ಲೋಮ ಪ್ರಮಾಣಪತ್ರ, ಅಭ್ಯರ್ಥಿಗಳು
ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್https://sevasindhu gs.karnataka.gov.in ಗೆ ಭೇಟಿ ನೀಡಿ ಉಚಿತವಾಗಿ ಕರ್ನಾಟಕಒನ್, ಬೆಂಗಳೂರು ಒನ್, ಗ್ರಾಮಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ ಲೈನ್ ೧೮೦೦ ೫೯೯ ೯೯೧೮, ೮೭೪೮೯೮೪೩೬೦,
೯೦೩೬೩೫೬೮೬೨, ೯೧೧೩೯೮೨೫೧೩, ೮೨೧೭೪೮೫೬೮೯ ನ್ನು ಸಂಪರ್ಕಿಸಬೇಕಾಗಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗ ಅಭ್ಯರ್ಥಿಗಳು ನೋಂದಾಯಿಸಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಡಿ.ಎಂ.ರಾಣಿ ತಿಳಿಸಿದ್ದಾರೆ.

✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ. ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn

Related posts

23 ರಿಂದ ಮೇ 22 ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ಧದ ಲಸಿಕಾ ಕಾರ್ಯಕ್ರಮ

ರಸ್ತೆಗಳ ಮೂಲೆಗಳಲ್ಲಿ ಕಸ ಹಾಕುವವರಿಗೆ ದಂಡ

ಸಾಹಿತ್ಯ ಸಮ್ಮೇಳನದ ಸವಿನೆನಪಿನ ಕನ್ನಡ ಭವನ ನಿರ್ಮಾಣಕ್ಕೆ ಭವ್ಯ ಸ್ವಾಗತ

Leave a Comment