ಪಾಲನೆ ನ್ಯೂಸ್

ಮಂಡ್ಯ: ಕಲರ್ಸ್ ಕನ್ನಡ ವಾಹಿನಿಯ ಬಹುಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ರ ವಿಜೇತರಾಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ.
ಭಾನುವಾರ ರಾತ್ರಿ ನಡೆದ ಗ್ರಾಂಡ್ ಫಿನಾಲೆ ಯಲ್ಲಿ ಕರ್ನಾಟಕದ ಲಕ್ಷಾಂತರ ಜನರ ನಿರೀಕ್ಷಂತೆಯೇ ನಟ ಕಿಚ್ಚ ಸುದೀಪ್ ಅವರು ಗಿಲ್ಲಿನಟನ ಕೈ ಎತ್ತಿದರು. ಮೊದಲ ರನ್ನರ್ ಅಪ್ ರಕ್ಷಿತಾ, 2ನೇ ರನ್ನರ್ ಅಪ್ ಅಶ್ವಿನಿಗೌಡ ತಮ್ಮದಾಗಿಸಿಕೊಂಡರು.
ಈ ಬಿಗ್‌ಬಾಸ್ ಒನ್ ಮ್ಯಾನ್ ಶೋನಂತೆ ನಡೆಯಿತು. ಬಿಗ್‌ಬಾಸ್ ಮನೆಯನ್ನು ಗಿಲ್ಲಿನಟ ಏಕಾಂಕಿಯಾಗಿ ಆಳಿದರು. ತಮ್ಮ ಹಾಸ್ಯ, ಡ್ಯಾನ್ಸ್, ಪಂಚಿಂಗ್ ಡೈಲಾಗ್ ಗಳ ಮೂಲಕ ಕರುನಾಡು ಜನತೆಯ ಹೃದಯ ಗೆದ್ದರು.
ಬಿಗ್ ಬಾಸ್ ಆರಂಭದ ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟನ ಕ್ರೇಜ್ ಜೋರಾಗಿಯೇ ಇತ್ತು. ಕೊನೆಯ ವಾರ ತಲುಪುವ ವೇಳೆ 16 ಲಕ್ಷ ಫಾಲೋವರ್ಸ್‌ಗಳನ್ನು ತನ್ನದಾಗಿಸಿಕೊಂಡಿದ್ದು, ಗಿಲ್ಲಿನಟನ ಜನಪ್ರಿತಯತೆಗೆ ಸಾಕ್ಷಿಯಾಗಿದೆ.
ನಾಡಿನಾದ್ಯಂತ ಗಿಲ್ಲಿ ನಟನ ಗೆಲುವಿಗೆ ಹಾರೈಸಿ ಪ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಅನೇಕ ಕಲಾವಿದರು ರೀಲ್ಸ್ ಮಾಡಿ ಬೆಂಬಲಿಸಿದರು. ಹಿರಿಯ ನಟ ಶಿವರಾಜ್ ಕುಮಾರ್, ಅನೇಕ ನಟ-ನಟಿಯರು ಗಿಲ್ಲಿಗೆಲುವಿಗೆ ಶುಭ ಹಾರೈಸಿದರು.
50 ಲಕ್ಷ ಬಹುಮಾನ, ಒಂದು ಕಾರು ಬಹುಮಾನ ಪಡೆದುಕೊಂಡರು.
” ಗೆದ್ದಾಗ ಹಿಗ್ಗಲ್ಲ ಸೋತಾಗ ಕುಗ್ಗಲ್ಲ ಯಾವಾಗಲೂ ಹೀಗೆ ಇರುತ್ತೇನೆ”.
ಕರುನಾಡಿನ ಜನತೆಯ ಪ್ರೀತಿ ಮತ್ತು ಸಹಕಾರಕ್ಕೆ ಧನ್ಯವಾದಗಳು.
-ಗಿಲ್ಲಿನಟ, ಬಿಗ್‌ಬಾಸ್ 12ರ ವಿಜೇತ
