NEWS

ರೈತರ ಸಮಸ್ಯೆ ಪರಿಹಾರಕ್ಕೆ ಹೋರಾಟ ರೂಪಿಸುವಂತೆ : ಚಂದ್ರಶೇಖರ್ ಸಲಹೆ

ಪಾಲನೆ ನ್ಯೂಸ್

ಮಂಡ್ಯ: ಜಿಲ್ಲೆಯಲ್ಲಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನ ಸೆಳೆಯಲು ಹೋರಾಟ ರೂಪಿಸುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖ‌ರ್ ತಿಳಿಸಿದರು.

ರಾಜ್ಯ ರೈತ ಸಂಘದ (ಮೂಲ ಸಂಘಟನೆ) ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಬೂದನೂರು ಪುಟ್ಟಸ್ವಾಮಿ ಅಧಿಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈತರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಳುವ ಸರ್ಕಾರ ಸ್ಪಂಧಿಸುವ ಕೆಲಸ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಬೇಸಿಗೆ ಹಂಗಾಮಿನಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ ಕಟ್ಟು ಪದ್ಧತಿಯಲ್ಲಿ 18-12ರ ಅನುಪಾತದಲ್ಲಿ ನಾಲೆಗಳಲ್ಲಿ ನೀರು ಹರಿಯುವುದಕ್ಕೆ ತೀರ್ಮಾನ ಪರಿಶೀಲಿಸಿ ನಾಲೆಗಳಲ್ಲಿ ನಿರಂತರ ನೀರು ಬಿಡಬೇಕು. ಕೆಆರ್‌ಎಸ್‌ನಲ್ಲಿ 123 ಅಡಿ ನೀರು ಲಭ್ಯವಿದೆ. ಮಳವಳ್ಳಿ ಲೋಕಸರ ಶಾಖೆಯಲ್ಲಿ ಸುಮಾರು 1800 ಎಕರೆ ಪ್ರದೇಶಕ್ಕೆ ಕಳೆದ ಮುಂಗಾರಿನಲ್ಲಿ ತಡವಾಗಿ ನೀರು ಬಿಟ್ಟಿದ್ದ ರಿಂದ ಬೆಳೆ ಇಳುವರಿ ಮೇಲೆ ಪರಿಣಾಮ ಬೀರಿತ್ತು. ಆದ್ದರಿಂದ ಹೆಬ್ಬಕವಾಡಿ ತುರುಗನೂರು ಶಾಖೆ ವಿ. ನಾಲೆಗಳಿಗೆ ಒಳಪಟ್ಟಂತೆ ಬೇಸಿಗೆಯಲ್ಲಿ ನಿಂತಿರುವ ಕಬ್ಬು, ರೇಷ್ಮೆ, ತೆಂಗು ಇತ್ಯಾದಿ ಬೆಳೆಗಳನ್ನು ರಕ್ಷಿಸಲು ನಿರಂತರ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ನಾಲಾ ಆಧುನೀಕರಣ ಸಕಾರಣವಾಗಿದ್ದರೂ ಆದ್ಯತೆ ಮೇರೆಗೆ ಉಪನಾಲೆ, ಸೀಳುನಾಲೆ, ನಾಲಾ ರಸ್ತೆಗಳನ್ನು ದುರಸ್ಥಿ ಮಾಡಿಸಿಕೊಡಬೇಕು. ಬೇಸಿಗೆಯಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಜೊತೆಗೆ ಹಗಲಿನಲ್ಲಿ ನಿರಂತರ 7 ಗಂಟೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ವಿದ್ಯುತ್ ಕಲ್ಪಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಖಾಸಗಿ, ಮೈಕ್ರೋ ಪೈನಾನ್ಸ್ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಲವಂತದ ಸಾಲ ವಸೂಲಾತಿ ಕ್ರಮ ನಿಲ್ಲಬೇಕು. ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ನಡೆದಿರುವ ಭೂ ಕಬಳಿಕೆಯ ಭ್ರಷ್ಟಾಚಾರ ತನಿಖೆ ಮಾಡಿಸಿ ಬಲಿಷ್ಟರಿಗೆ ಶಿಕ್ಷೆಯಾಗಬೇಕು ಮತ್ತು ಸಣ್ಣ ಹಿಡುವಳಿ ರೈತರು ಹತ್ತಾರು ವರ್ಷದಿಂದ ಉಳುಮೆ ಮಾಡುತ್ತಿರುವುದರಿಂದ ಅವರಿಗೆ ಭೂಮಿ ಸಿಗುವಂತಾಗಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ರೈತರ, ಸಾರ್ವ ಜನಿಕರ ಕೆಲಸ ಕಾರ್ಯಗಳು ವಿಳಂಬ ನೀತಿಗೆ ಕಡಿವಾಣ ಹಾಕಬೇಕು ಎಂಬ ನಿರ್ಣಯ ಕೈಗೊಂಡು ಜಿಲ್ಲಾದಿಕಾರಿಗಳಿಗೆ ಸಲ್ಲಿಸಲಾಯಿತು. ಇದೇ ವೇಳೆ ನೂರಾರು ಜನರು ಸಂಘಕ್ಕೆ ಸೇರ್ಪಡೆಯಾದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಶಿವಳ್ಳಿ ಚಂದ್ರು, ಎಂ.ಬಿ.ನಾಗಣ್ಣ, ಎಚ್.ಡಿ. ಜಯರಾಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಪೋಷಕರ ವಿರೋಧದ ನಡುವೆಯೂ ರುದ್ರಾಕ್ಷಿ ಹುಡುಗಿ ಮೊನಾಲಿಸಾ ಮದುವೆ

ಬೂದನೂರು ಉತ್ಸವ: 2ನೇ ದಿನ ಲೈವ್

ಮಾರ್ಚ್ 11 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ -2026

Leave a Comment