ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ, ಮಾರುಕಟ್ಟೆ ವಿಸ್ತರಣೆ ಸಂವಾದ
ಪಾಲನೆ ನ್ಯೂಸ್
ಮಂಡ್ಯ: ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ನ ಎರಡನೇ ವಾರ್ಷಿಕೋತ್ಸವ ಅಂಗವಾಗಿ ಸಮಗ್ರ ಸಾವಯವ ಸುಸ್ಥಿರ ಕೃಷಿಯ ಬಗ್ಗೆ ಜನ ಜಾಗೃತಿ ಅಭಿಯಾನವನ್ನು ಮಳವಳ್ಳಿ ತಾಲ್ಲೂಕು ಕಿರುಗಾವಲು ಹೋಬಳಿ, ಕಾಗೆಪುರ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸಮುದಾಯ ಭವನದಲ್ಲಿ ಮಾರ್ಚ್ 3 ರಂದು ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ದಿನ ಮಾನಗಳಲ್ಲಿ ಸರ್ಕಾರದ ಅಂಕಿ ಅಂಶದಂತೆ ಶೇ. 40 ರಷ್ಟು ಮಣ್ಣು ಪೋಷಕಾಂಶದ ಕೊರತೆಯಿಂದ ಕೂಡಿದೆ. ಮಣ್ಣಿನ ಸವಕಳಿ, ಪ್ರಕೃತಿ ವೈಫಲ್ಯತೆ, ಎರೆಹುಳು ಹಾಗೂ ಸೂಕ್ಷ್ಮಜೀವಿಗಳ ನಾಶ, ಬೆಳೆಗಳಿಗೆ ತಗಲುವ ರೋಗಗಳು, ಮಣ್ಣು ಸತ್ವ ಕಳೆದುಕೊಂಡಿರುವುದರಿಂದ ರೈತ ಬೆಳೆದ ಬೆಳೆಗಳಿಗೆ ಇಳುವರಿ ಕುಂಟಿತವಾಗಿದೆ.

ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಅಥವಾ ಕಂಪನಿಗಳಿಗೆ ಸಾಗಿಸಿದ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಾರೆ. ರೈತರು ಪ್ರಾಥಮಿಕ ಕೃಷಿಗೆ ಮಾತ್ರ ಸೀಮಿತವಾಗಿದ್ದಾರೆ. ನಂತರ ಬರುವುದು ದ್ವಿತೀಯ ಕೃಷಿ (Secondary Agriculture Farming). ಈ ದ್ವಿತೀಯ ಕೃಷಿಯನ್ನು ಮೌಲ್ಯವರ್ದನೆ ಮಾಡಿ ಮಾರುಕಟ್ಟೆ ಮಾಡಿದರೆ ಸಾಕಷ್ಟು ಲಾಭ ಬರುತ್ತದೆ. ಆಗ ರೈತರು ಸ್ವಾವಲಂಬಿತರಾಗುತ್ತಾರೆ (Sustanaible). ಇಂತಹ ವಿಷಯಗಳನ್ನು ರೈತರು ಹಾಗೂ ಹೋರಾಟಗಾರರು ಒಟ್ಟಿಗೆ ಸೇರಿ ನೇರ ಸಂವಾದದ ಮುಖಾಂತರ ಅರಿವು ಮೂಡಿಸಲು ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಜನ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಜೋಗಿಗೌಡ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9.30ಕ್ಕೆ ವಾರ್ಷಿಕೋತ್ಸವ ಹಾಗೂ ಅಭಿಯಾನ ಉದ್ಘಾಟನೆಯಾಗಲಿದ್ದು, 4.30 ರವರೆಗೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ 3 ಜನ ಪ್ರಗತಿಪರ ರೈತರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಸಂವಾದದಲ್ಲಿ ರಾಜ್ಯ ರೈತ ಮೋರ್ಚ ಪ್ರದಾನ ಕಾರ್ಯದರ್ಶಿ ಹಾಗೂ ಮಕ್ಕಳ ತಜ್ಞ ಡಾ॥ ಹೆಚ್.ವಿ. ನವೀನ್ ಕುಮಾರ್, ಮೈಕ್ರೋಬಿ ಫೌಂಡೇಷನ್ ಅಧ್ಯಕ್ಷ್ ಹಾಗೂ ಸಾವಯುವ ತಜ್ಞ ಡಾ|| ಕೆ.ಆರ್. ಹುಲ್ಲುನಾಚೇಗೌಡ, ರೈತ ಹೋರಾಟಗಾರ ಹೊನ್ನೂರು ಪ್ರಕಾಶ್, ಮಂಡ್ಯ ಜಿಲ್ಲೆ ಸಂಪೂರ್ಣ ಸಾವಯುವ ಕೃಷಿ ಸಂಘ ಅಧ್ಯಕ್ಷ ಎಂ.ವಿ. ಮಹೇಶ್ ಕುಮಾರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ರೈತರಿಗೆ ಮಧ್ಯಾಹ್ನ ಊಟದ (ಲಘು ಉಪಹಾರ) ವ್ಯವಸ್ಥೆ ಇರುತ್ತದೆ. ವಿವರಗಳು ಹಾಗೂ ನೋಂದಣಿಗೆ ಸಂಪರ್ಕಿಸಲು 9964992525 – ಜೋಗಿಗೌಡ , , 9845565414 – ವೈ.ಎಸ್. ಸಿದ್ದರಾಜು, 7353343113- ಎಸ್.ಸಿ. ರಂಗೇಗೌಡ, 9731869469- ಡಿ. ಪಿ. ಧರ್ಮಲಿಂಗು, 9164395266- ಎಂ.ಎಸ್. ಗಂಗಾಧರ್, 9902631465- ಸಿ.ಇ.ಲೋಕೇಶ್, 9731930012 – ಪರಮೇಶ.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
