NEWS

29 ಮಂದಿ ಜೂಜುಕೋರರ ಬಂಧನ: 10 ಲಕ್ಷ ರೂ. ವಶ

ಅಗ್ರಿ ಕ್ಲಬ್ ಮೇಲೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭಾರಾಣಿ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ತನಿಖೆ ನಡೆಸಿದರು.

ಪಾಲನೆ ನ್ಯೂಸ್

ಮಂಡ್ಯ: ನಗರದ ಹೊರವಲಯದಲ್ಲಿರುವ ಅಗ್ರಿ ಕ್ಲಬ್ ಮೇಲೆ ದಾಳಿ ನಡೆಸಿರುವ ಮಂಡ್ಯ ಗ್ರಾಮಾಂತರ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 29 ಮಂದಿಯನ್ನು ಬಂಧಿಸಿ, ಪಣಕ್ಕಿರಿಸಿದ್ದ 10 ಲಕ್ಷ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ವಿ.ಜೆ. ಶೋಭಾರಾಣಿ ಅವರ ನೇತೃತ್ವದಲ್ಲಿ ಸೋಮವಾರ ತಡರಾತ್ರಿ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 29 ಮಂದಿಯನ್ನು ವಶಕ್ಕೆ ಪಡೆದು, 10 ಲಕ್ಷ ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.

ಸಾಮಾನ್ಯವಾಗಿ ಕ್ಲಬ್‌ಗಳಲ್ಲಿ ರಾತ್ರಿ 11 ಗಂಟೆಯವರೆಗೆ ಜಾಕ್ ಪಾಟ್ ಹಾಗೂ ರಮ್ಮಿ ಆಡಲು ಅವಕಾಶ ನೀಡಲಾಗುತ್ತದೆ. ಆದರೆ, ಅಗ್ರಿ ಕ್ಲಬ್‌ನಲ್ಲಿ ಸಮಯ ಮೀರಿ ಇತರೇ ಜೂಜಿನಲ್ಲಿ ತಡರಾತ್ರಿಯವರೆಗೆ ಹಲವರು ತೊಡಗಿದ್ದರು ಎನ್ನಲಾಗಿದೆ. ಅಗ್ರಿ ಕ್ಲಬ್‌ನ ಸದಸ್ಯರಲ್ಲದೆ ರಾಮನಗರ, ಚನ್ನಪಟ್ಟಣ ಭಾಗದಲ್ಲಿ ಹಲವರು ಗೆಸ್ಟ್ ಹೆಸರಿನಲ್ಲಿ ಬಂದು ಇಲ್ಲಿ ಜೂಜಾಟ ಆಡುತ್ತಿದ್ದರು ಎನ್ನಲಾಗಿದೆ. ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ ಸಂದರ್ಭದಲ್ಲಿ ಕೆಲವರು ಕೌಂಪೌಂಡ್ ನೆಗೆದು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪದೇ ಪದೇ ಅಗ್ರಿ ಕ್ಲಬ್ ಮೇಲೆ ಈ ರೀತಿ ದಾಳಿ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಡಾ. ಬಾಬು ಜಗಜೀವನ್ ರಾಂ ರವರ ಆದರ್ಶ ಹಾಗೂ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು

ಸಂಚಲನ ಸೃಷ್ಟಿಸಲಿದೆ ಹನುಮಾನ್ ಚಾಲೀಸ ಪಾರಾಯಣ : ಶ್ರೀವತ್ಸ

ನಾನು ಸ್ತ್ರೀ ಅಭಿಯಾನಕ್ಕೆ ಇಂದು ಸಂಜೆ ಚಾಲನೆ

Leave a Comment