ಕಲೆ ಮತ್ತು ಕೌಶಲ್ಯ ಹೊಂದಿರುವವರಿಗೆ ಉತ್ತೇಜನ ನೀಡಿ
ಪಾಲನೆ ನ್ಯೂಸ್
ಮಂಡ್ಯ: ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇವರ ಸಹಯೋಗದಲ್ಲಿ ಸವಿತಾ ಮಹರ್ಷಿ ಜಯಂತಿಯ ಆಚರಣೆಯನ್ನು ಮಂಡ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ದೀಪ ಬೆಳಗಿಸಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಸಮಾಜದ ಉದ್ದಾರಕ್ಕಾಗಿ ಅಪಾರ ಜ್ಞಾನವನ್ನು ರೂಡಿಸಿಕೊಂಡು ಜ್ಞಾನವನ್ನು ಪಸರಿಸುವ ಮೂಲಕ ಸಮಾಜಕ್ಕೆ ಬೆಳಕದವರು. ಸವಿತಾ ಮಹರ್ಷಿ ರವರು ಅವರ ಆದರ್ಶಗಳನ್ನು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ರವರು ಹೇಳಿದರು.
ಪೌರಾಣಿಕ ವ್ಯಕ್ತಿಯಾಗಿ ದೇವತಾ ಪುರುಷನಾಗಿ ಸಮಾಜಕ್ಕೆ ನೀಡಿರುವ ಕೊಡುಗೆಗಳು ಮತ್ತು ಸಂದೇಶಗಳು ಅಪಾರ. ದೇಶದ ಸಂಸ್ಕೃತಿಗೆ ನಾಲ್ಕನೇ ವೇದವಾದ ಸಾಮ ವೇದವನ್ನು ಬರೆದವರು ಮತ್ತು ಗಾಯಿತ್ರಿ ಮಂತ್ರವನ್ನು ಉಪದೇಶ ಮಾಡಿದವರು ಹಾಗೂ ಜ್ಞಾನದ ಮೂಲಕ ಮಾತ್ರ ಸಾಧನೆ ಮಾಡಬಹುದು, ಸವಿತಾ ಮಹರ್ಷಿ ಸಮುದಾಯದವರು ಕಾಯಕಯೋಗಿಗಳು ಎಂದು ಅಭಿಪ್ರಾಯಪಟ್ಟರು.
ಸವಿತಾ ಸಮಾಜದ ಪ್ರತಿಯೊಬ್ಬರೂ ಕೂಡ ಕೌಶಲ್ಯ ಮತ್ತು ಕಾಯಕವನ್ನು ಬಹಳ ನಿಷ್ಠೆ ಮತ್ತು ಪ್ರಾಮಾಣಿಕತೆ, ಸಮಾನತೆಯಿಂದ ಕಾರ್ಯವನ್ನು ನಿರ್ವಹಿಸುತ್ತಾರೆ ಯಾವುದೇ ತಾರತಮ್ಯ ವಿಲ್ಲದೆ ಸೇವಾ ಮನೋಭಾವದಿಂದ, ತಾರತಮ್ಯ ರಹಿತವಾಗಿ ನಿಸ್ಕಲ್ಮಷ ಹೃದಯದಿಂದ ಕೆಲಸವನ್ನು ಮಾಡುತ್ತಾರೆ ಎಂದರು.
ಕಲೆ ಮತ್ತು ಕೌಶಲ್ಯ ಹೊಂದಿರುವವರಿಗೆ ಹೆಚ್ಚು ಉತ್ತೇಜನವನ್ನು ಕೊಡಬೇಕು ಹಾಗೂ ಆಯುರ್ವೇದ ಗಿಡ ಮುಲಿಕೆಗಳಿಂದ ಔಷಧಿಯನ್ನು ನೀಡಿ ರೋಗಗನ್ನು ಗುಣಪಡಿಸಿದ್ದಾರೆ. ಆದ್ದರಿಂದ ಹಿಂದಿನ ಪರಂಪರೆಯನ್ನು ಮತ್ತು ಸಂಪ್ರದಾಯವನ್ನು ಮರಿಯಬಾರದು,ಮೌಢ್ಯ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಿ ಅವರವರ ವೃತ್ತಿಯನ್ನು ಗೌರವಿಸಬೇಕು ಎಂದರು.

ಪಿ ಇ ಎಸ್ ಪದವಿ ಪೂರ್ವ ಕಾಲೇಜಿನ ಡಾ. ಅನಿತಾ ಎಂ. ಎಸ್ ರವರು ಮಾತನಾಡಿ ಸಮಾಜದ ಬದಲಾವಣೆಯು ಸವಿತಾ ಮಹರ್ಷಿ ಜಯಂತಿಯ ಆಶಯ. ಜಾತಿ, ವರ್ಗ, ಧರ್ಮ ಲಿಂಗ ತಾರತಮ್ಯ ವನ್ನು ಸಹಿಷ್ಣುತೆಯ ಸಮಾನತೆಯ ನಿರ್ಮಾಣ ಮಾಡಲು ಸವಿತಾ ಮಹರ್ಷಿ ಆಚರಣೆ ಮೂಲಕ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಪುರಾಣ ಪುರುಷ ನನ್ನ ಸಮುದಾಯದ ಮೂಲ ಪುರುಷ ಎಂದು ಉಪನ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ. ಬಿ. ವಿ. ನಂದೀಶ, ಮಳವಳ್ಳಿ ತಾಲ್ಲೂಕು ಅಧ್ಯಕ್ಷರಾದ ಕೆಂಪರಾಜು ಮತ್ತು ಸುರೇಶ, ಮಂಜುನಾಥ್, ಸಂದೇಶ್, ಜಗದೀಶ್, ರಾಮಲಿಂಗಯ್ಯ ಸಮುದಾಯದ ಮುಖಂಡರು ಇನ್ನಿತರರಿದ್ದರು.
ಪಾಲನೆ.ಇನ್ ವಾಟ್ಸ್ ಆಪ್ ಗುಂಪಿಗೆ ಸೇರಿರಿ.


