NEWS

ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಬಸ್ಸ್ ವ್ಯವಸ್ಥೆ ಕಲ್ಪಿಸಿ: ಚಿಕ್ಕಲಿಂಗಯ್ಯ

ಬೀದಿ ದೀಪಗಳನ್ನು ಆನ್ ಮತ್ತು ಆಫ್ ಮಾಡಲು ನಿರುಗಂಟಿ ಗಳಿಗೆ ಜವಾಬ್ದಾರಿ ವಹಿಸಿ

ಪಾಲನೆ ನ್ಯೂಸ್

ಮಂಡ್ಯ: 75 ವರ್ಷ ಮೇಲ್ಪಟ್ಟ ವಯಸ್ಕರ ಹೆಬ್ಬೆಟ್ಟಿನ ಗುರುತನ್ನು ಸ್ಕ್ಯಾನರ್ ಗಳು ಗುರುತಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಪಡಿತರ ಪಡೆಯುವ ಸಂದರ್ಭದಲ್ಲಿ ವಯೋವೃದ್ಧರು ಪರದಾಡುವಂತಾಗಿದೆ ಸಂಬಂಧಪಟ್ಟ ಅಧಿಕಾರಿಗಳು 75 ವರ್ಷ ಮೇಲ್ಪಟ್ಟ ವಯಸ್ಕರಿಗೆ ಪಡಿತರ ಪಡೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಯೋಮೆಟ್ರಿಕ್ ತಗೆದುಕೊಂಡ ದಿನ ಪಡಿತರ ನೀಡಬೇಕು. ಪಡಿತರ ವಿತರಣೆ ಬೇಗ ಮಾಡಬೇಕು ಎಂದು ಹೇಳಿದರು.

ಅನ್ನಸುವಿಧ ಯೋಜನೆಯ ಮೂಲಕ 75 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಕೆಲವರ ಬಳಿ ಮೊಬೈಲ್ ಇಲ್ಲದ ಕಾರಣ ಓಟಿಪಿ ಪಡೆದು ಪಡಿತರ ತಲುಪಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಓಟಿಪಿ ಮತ್ತು ಬಯೋಮೆಟ್ರಿಕ್ ಇಲ್ಲ ಶೇ. 2 ರಷ್ಟು ಜನರಿಗೆ ಪಡಿತರವನ್ನು ವಿತರಿಸಲು ಅವಕಾಶವಿದೆ. ಮಾನವಿಯತೆ ದೃಷ್ಟಿಯಿಂದ ವಯಸ್ಕರಿಗೆ ಪಡಿತರವನ್ನು ನೀಡಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಐ.ಟಿ.ಜಿ.ಎಸ್.ಟಿ ಪಾವತಿ ಮಾಡುತ್ತಿರುವ ಬಿ.ಪಿ.ಎಲ್ ಕಾರ್ಡ್ ದಾರರನ್ನು ಎ.ಪಿ.ಎಲ್ ಪರಿವರ್ತಿಸಲಾಗಿದೆ. ಸದರಿ ಪಟ್ಟಿಯನ್ನು ಪರಿಶೀಲಿಸಿ ಐ.ಟಿ.ಜಿ.ಎಸ್.ಟಿ  ಪಾವತಿಸದ ಅರ್ಹರನ್ನು ಎ.ಪಿ.ಎಲ್ ಪಟ್ಟಿಯಿಂದ ಕೈಬಿಡಿ. ಆರೋಗ್ಯದ ಸಮಸ್ಯೆ ಇರುವ ಅರ್ಹರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುತ್ತದೆ.  ಆರೋಗ್ಯದ ಸಮಸ್ಯೆ ಇರುವವರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುತ್ತದೆ. ಬಿ.ಪಿ.ಎಲ್ ಕಾರ್ಡ್ ನೀಡುವಲ್ಲಿ ವಿಳಂಬ ಮಾಡದೆ 15 ದಿನಗಳೊಳಗಾಗಿ ನೀಡಬೇಕು. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 447166 ಅರ್ಹ ಫಲಾನುಭವಿಗಳು ಇದ್ದಾರೆ ಎಂದು ಹೇಳಿದರು.

ಗೃಹ ಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 464602 ಅರ್ಹ ಫಲಾನುಭವಿಗಳು ಇದ್ದು  ತಲಾ ರೂ.2,000 ಗಳಂತೆ ಸೆಪ್ಟೆಂಬರ್ 2025 ರ ಅಂತ್ಯಕ್ಕೆ ಒಟ್ಟು ರೂ.2231 ಕೋಟಿಗಳನ್ನು ಪಾವತಿಸಲಾಗಿದೆ. ಅಕ್ಟೋಬರ್ ಮಾಹೆಯ ಹಣವನ್ನು ಬಿಲ್ ಮಾಡಲಾಗಿದ್ದು ಶೀಘ್ರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಕೆ ಹನುಮಂತಯ್ಯ ಅವರು ಮಾತನಾಡಿ  ಗೃಹಜ್ಯೋತಿ ಯೋಜನೆಯಡಿ 499156 ಅರ್ಹ ಫಲಾನುಭವಿಗಳು ಇದ್ದು ಯೋಜನೆ ಪ್ರಾರಂಭವಾದಾಗಿನಿಂದ ಡಿಸೆಂಬರ್ 2025 ವರೆಗೆ ಜಿಲ್ಲೆಯಲ್ಲಿ ರೂ. 511 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ  ಹಳ್ಳಿಗಳಲ್ಲಿ ಬೀದಿ ಬದಿಯ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಬೆಳಗಿನ ಸಮಯದಲ್ಲೂ ದೀಪಗಳು ಉರಿಯುತ್ತಿದೆ. ಬೀದಿ ದೀಪಗಳನ್ನು ಆನ್ ಮತ್ತು ಆಫ್ ಮಾಡಲು ನೀರುಗಂಟಿಳಿಗೆ ಜವಾಬ್ದಾರಿ ವಹಿಸಿ ಎಂದು ಹೇಳಿದರು.

ರೈತರು ತಮ್ಮ ಗದ್ದೆ ಹೊಲಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಟಿ.ಸಿ ಮತ್ತು ಕಂಬಗಳನ್ನು ಕಲ್ಪಿಸಲು ತಗುಲುವ ವೆಚ್ಚದ ಕುರಿತು ರೈತರಿಗೆ ಮಾಹಿತಿ ನೀಡಿ. ಗುತ್ತಿಗೆದಾರರು ಟಿ.ಸಿ ಮತ್ತು ಕಂಬಗಳನ್ನು ನೀಡಲು ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣದ ಬೇಡಿಕೆ ಇಟ್ಟರೆ ಅಂತಹ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 18.64 ಕೋಟಿಗೂ ಹೆಚ್ಚಿನ ಮಹಿಳೆಯರಿಗೆ ಟಿಕೇಟ್ ವಿತರಿಸಲಾಗಿದೆ. ಇದರಿಂದ ನಿಗಮಕ್ಕೆ ರೂ. 511 ಕೋಟಿಗೂ ಅಧಿಕ ಆದಾಯ ಲಭಿಸಿದೆ. ಬೇರೆ ಜಿಲ್ಲೆಯ ಘಟಕದ ಎಕ್ಸ್ಪ್ರೆಸ್ ಬಸ್ ಗಳು ಮಂಡ್ಯದಲ್ಲಿ ನಿಲ್ಲಿಸುತ್ತಿಲ್ಲ ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಬೇರೆ ಜಿಲ್ಲೆಯ ಘಟಕದ ಬಸ್ಸ್ ಗಳು ಮಂಡ್ಯದಲ್ಲಿ ನಿಲ್ಲಿಸುವಂತೆ ನೋಡಿಕೊಳ್ಳಿ ಎಂದು ಹೇಳಿದರು.

ಮಂಡ್ಯ ಘಕಟದ ಬಸ್ಸ್ ಗಳನ್ನು ಮೈಸೂರು – ಮಂಡ್ಯ ಮಾರ್ಗ ಬಿಡಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಮಂಡ್ಯದಿಂದ ಮೈಸೂರಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮಂಡ್ಯ ಘಟಕಕ್ಕೆ ಹೊಸ ಬಸ್ಸ್‌ ಗಳು ಬಂದ ತಕ್ಷಣ ಮಂಡ್ಯ –  ಮೈಸೂರು ಬಸ್ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಿ ಎಂದು ಹೇಳಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ರಾಜೇಂದ್ರ ಎಸ್.ಹೆಚ್ ಅವರು ಮಾತನಾಡಿ ಯುವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 6730 ಫಲಾನುಭವಿಗಳು ನೊಂದಣಿಯಾಗಿದ್ದು ಸೆಪ್ಟೆಂಬರ್ 2025 ರ ವರೆಗೂ 18.73 ಕೋಟಿ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ ನವೆಂಬರ್ ಮಾಹೆ ಹಣವನ್ನು ಬಿಲ್ ಮಾಡಲಾಗಿದ್ದು ಶೀಘ್ರವೇ ಪಾವತಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ  ಕಾಲೇಜುಗಳಲ್ಲಿ ಯುವನಿಧಿ ಯೋಜನೆಯ ಕುರಿತಾಗಿ ಹೆಚ್ಚಿನ ಪ್ರಚಾರ ಕೈಗೊಳ್ಳಿ. ಎಲ್ಲಾ ಕಾಲೇಜುಗಳಲ್ಲಿ ಯುವನಿಧಿ ಯೋಜನೆ ಕುರಿತು ಸೂಚನಾ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಿ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ  ಶಿವಣ್ಣ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಧನುಷ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳಾದ ಅಜಯ್ ಕುಮಾರ್ ಬಿ.ಪಿ, ಎ.ಬಿ ಕುಮಾರ,  ಕೆ. ರುದ್ರಪ್ಪ, ವೀಣಾ ,ಶಂಕರೇಗೌಡ, ಬಸವರಾಜು, ಮಹಮದ್ ಅನ್ಸರ್, ರಮೇಶ್ ಬಿ.ಎಂ, ಪಿ ಮಾದೇಶ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಇಂದು ಮಂಡ್ಯ ಜಿಲ್ಲಾ ಮಟ್ಟದ ಉದ್ಯೋಗ ಮೇಳ

ಈ ಬಾರಿ ಐಪಿಎಲ್ ಪಂದ್ಯಗಳು ನಡೆಯುವ ದಿನ ಕ್ರಿಕೆಟ್ ಪಂದ್ಯದ ಟಿಕೆಟ್ ಹೊಂದಿರುವ ಅಭಿಮಾನಿಗಳಿಗೆ ಮೆಟ್ರೋ ಉಚಿತ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ತಾಲ್ಲೂಕು ಕಚೇರಿ ಭೇಟಿ ಹಾಗೂ ಪರಿಶೀಲನೆ

Leave a Comment