ಪಾಲನೆ ನ್ಯೂಸ್

ಮೈಸೂರು: ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆಯಡಿ ಚಾಮುಂಡಿಬೆಟ್ಟದಲ್ಲಿ ಕೈಗೊಂಡಿರುವ ಕಾಮಗಾರಿ ಸ್ಥಗಿತ ಗೊಳಿಸುವಂತೆ ಒತ್ತಾಯಿಸಿ ಹಿಂದೂ ಪರ ಸಂಘಟನೆ ಸದಸ್ಯರು ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಸೋಮವಾರ ಬೆಳಿಗ್ಗೆ ಅಧಿಕಾರಿಗಳು ಪೊಲೀಸ್ ಬಿಗಿ ಭದ್ರತೆ ಯಲ್ಲಿ ಕಾಮಗಾರಿ ಆರಂಭಿಸಿದ್ದರು. ಕಾಮಗಾರಿ ಪ್ರಾರಂಭಿಸಿರುವ ಮಾಹಿತಿ ತಿಳಿದು ಶ್ರೀರಂಗಪಟ್ಟಣದ ಹನುಮ ಮಾಲಾಧಾರಿಗಳ ಸಮಿತಿ ಪದಾಧಿಕಾರಿಗಳು ಸ್ಥಳಕ್ಕಾಗಮಿಸಿ ಕಾಮಗಾರಿ ನಡೆಸದಂತೆ ಪ್ರತಿಭಟನೆ ನಡೆಸಿದರು. ಚಾಮುಂಡಿಬೆಟ್ಟ ಗ್ರಾಮಸ್ಥರೂ ಪ್ರತಿಭಟನಾಕಾರರೊಂದಿಗೆ ಸೇರಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣದ ಹನುಮ ಮಾಲಾಧಾರಿಗಳ ವಿಭಾಗೀಯ ಸಮಿತಿಯ ಸಂಚಾಲಕ ಲೋಹಿತ್ ಅರಸ್ ಮಾತನಾಡಿ, ದೇವಸ್ಥಾನದ 20 ಮೀ. ಸುತ್ತಳತೆ ಯಲ್ಲಿಯೇ ಭೂಮಿ ಅಗೆಯುತ್ತಿರುವುದರಿಂದ ದೇವಸ್ಥಾನದ ರಾಜ ಗೋಪುರಕ್ಕೆ ಹಾನಿಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಸಿಗೆ ಮನವಿ
ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಚಾಮುಂಡಿಬೆಟ್ಟದ ಪರಿಸರ ವ್ಯವಸ್ಥೆ ಈಗಾಗಲೇ ಅತಿ ಸೂಕ್ಷ್ಮ ಹಂತ ತಲುಪಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದೆ.
ಪ್ರಸಾದ್ ಯೋಜನೆಯಡಿ ಕಾಂಕ್ರೀಟ್ ಕಾಮಗಾರಿ ಸರಿಯಲ್ಲ. ಬೆಟ್ಟದ ಮೇಲೆ ಅನಗತ್ಯವಾಗಿ ವಾಣಿಜ್ಯ ಸಂಕೀರ್ಣಗಳು ಮತ್ತು ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನೈಸರ್ಗಿಕ ಸ್ವರೂಪವನ್ನು ಹದಗೆಡಿಸಲಾಗುತ್ತಿದೆ. ರೈಲಿಂಗ್ ಮತ್ತು ಪಾದಚಾರಿ ಮಾರ್ಗಗಳ ನವೀಕರಣದ ನೆಪದಲ್ಲಿ ಹೊಸದಾಗಿ ಕಬ್ಬಿಣ ಮತ್ತು ಸಿಮೆಂಟ್ ಸುರಿಯುವುದು ಹಣ ಲೂಟಿ ಮಾಡುವ ಷಡ್ಯಂತ್ರವಾಗಿದೆ ಎಂದು ಆರೋಪಿಸಿದೆ.
ಕಲ್ಲು, ಮಣ್ಣನ್ನು ತೆಗೆದಿದ್ದಾರೆ. ಇದರಿಂದ ಧಕ್ಕೆ ಉಂಟಾಗುತ್ತದೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ, ಪ್ರಾಧಿಕಾರದ ಗಮನಕ್ಕೆ ತಂದರೂ ಅಧಿಕಾರಿಗಳು ಕಿವುಡಾಗಿದ್ದಾರೆ ಎಂದು ಕಿಡಿಕಾರಿದರು.
ಚಂದನ್, ಶ್ರೀನಿವಾಸ್, ಸಂಘಟನೆಯ ಮನು, ರವಿ, ಹಿಂದೂಪರ ಮುಖಂಡರು, ಭಾಗವಹಿ ಚಾಮುಂಡಿಬೆಟ್ಟದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಸಿದ್ದರು.
✅ಪಾಲನೆ.ಇನ್ ವಾಟ್ಸ್ ಆ್ಯಪ್ ಗುಂಪಿಗೆ ಸೇರಿರಿ ನ್ಯೂಸ್ & ವ್ಯೂಸ್ ಓದಿರಿ. ಆಲೋಚಿಸಿ. ಸ್ಪಂದಿಸಿ.
https://chat.whatsapp.com/H1gUYgrzvnQGZAhIQSGMHn
