NEWS

ಹೊಸ ವರ್ಷ ಆಚರಣೆ ವೇಳೆ ಭೀಕರ ಅಗ್ನಿ ಅವಘಡ: 40 ಜನರು ಸಜೀವ ದಹನ..!

ಪಾಲನೆ ನ್ಯೂಸ್

ಸ್ವಿಟ್ಟರ್‌ಲ್ಯಾಂಡ್: 2026ರ ಹೊಸ ವರ್ಷ ಆಚರಣೆಯ ಸಮಯದಲ್ಲಿ ಸ್ವಿಟ್ಟರ್‌ಲ್ಯಾಂಡ್‌ನ ಪ್ರಸಿದ್ಧ ಸ್ಕಿ ರಿಸಾರ್ಟ್ ಕ್ರಾನ್ಸ್-ಮೊಂಟಾನಾದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 40 ಜನರು ಸಾವನ್ನಪ್ಪಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗುರುವಾರ ವರದಿಯಾಗಿದೆ.

ಜ.1ರ ಮುಂಜಾನೆ ಸುಮಾರು 1:30ಕ್ಕೆ ‘ಲೆ ಕಾನ್‌ಸ್ಟೆಲೇಷನ್‌‌ ‘ ಎಂಬ ಬಾರ್‌ನಲ್ಲಿ ಸ್ಫೋಟದಿಂದ ಆರಂಭವಾದ ಬೆಂಕಿಯಲ್ಲಿ 40 ಜನರು ಮೃತರಾಗಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕ್ರಾನ್ಸ್-ಮೊಂಟಾನಾ ಸ್ವಿಟ್ಟರ್‌ಲ್ಯಾಂಡ್‌ನ ಆಲ್ಸ್ ಪರ್ವತಗಳ ಮಧ್ಯೆ ಇರುವ ಐಷಾರಾಮಿ ರಿಸಾರ್ಟ್. ಮ್ಯಾಟರ್‌ಹಾರ್ನ್ ಶಿಖರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಈ ಸ್ಥಳವು ಪ್ರವಾಸಿಗರಿಗೆ ಪ್ರಸಿದ್ಧವಾದದ್ದು. ನವವರ್ಷದ ರಾತ್ರಿ ಇಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಬಾರ್‌ನಲ್ಲಿ ಸಂಗೀತ, ನೃತ್ಯ ಮತ್ತು ಆಚರಣೆ ತೀವ್ರವಾಗಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿ ಬೆಂಕಿ ಹರಡಿದೆ.

ಪೊಲೀಸ್ ಮಾಹಿತಿ ಪ್ರಕಾರ, ಬಾರ್‌ನಲ್ಲಿ 100ಕ್ಕೂ ಹೆಚ್ಚು ಜನರು ಇದ್ದರು. ಬೆಂಕಿ ವೇಗವಾಗಿ ಹರಡಿದ್ದರಿಂದ ಅನೇಕರು ಹೊರಬರಲು ಸಾಧ್ಯವಾಗಲಿಲ್ಲ. ಗಾಯಾಳುಗಳಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ 10 ಹೆಲಿಕಾಪ್ಟರ್‌ಗಳು, 40 ಆಂಬ್ಯುಲೆನ್ಸ್‌ಗಳು ಮತ್ತು ನೂರಾರು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿದರು. ಪ್ರದೇಶವನ್ನು ಸಂಪೂರ್ಣ ಮುಚ್ಚಿ ನೋ-ಫೈ ಜೋನ್ ಘೋಷಿಸಲಾಗಿದೆ.

ಅವಘಡದ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲವು ಸ್ವಿಸ್ ಮಾಧ್ಯಮಗಳು ಪಾರ್ಟಿಯ ಸಮಯದಲ್ಲಿ ಬಳಸಿದ ಪೈರೋಟೆಕ್ನಿಕ್ಸ್ ಅಥವಾ ಫೈರ್‌ವರ್ಕ್ಸ್‌ನಿಂದ ಇದು ಸಂಭವಿಸಿರಬಹುದು ಎಂದು ಊಹಿಸಿವೆ. ಆದರೆ ಪೊಲೀಸರು ಇದು ದಾಳಿ ಅಥವಾ ಉದ್ದೇಶಪೂರ್ವಕವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ದುರಂತ ಸ್ವಿಟ್ಟರ್‌ಲ್ಯಾಂಡ್‌ನ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಭಯಾನಕ ಘಟನೆಗಳಲ್ಲಿ ಒಂದು. ಗಾಯಾಳುಗಳ ಚಿಕಿತ್ಸೆ ಮತ್ತು ಮೃತರ ಗುರುತು ತಜ್ಞರು ಕಾರ್ಯನಿರತರಿದ್ದಾರೆ,(ಏಜೆನ್ಸಿಸ್).

Related posts

ಫೆ. 21 ರಿಂದ  22 ವರೆಗೆ ವಿಜೃಂಭಣೆಯಿಂದ ಬೂದನೂರು ಉತ್ಸವ ಆಚರಣೆ

ರೈತರ ಸಮಸ್ಯೆ ಪರಿಹರಿಸುವಂತೆ ಆಗ್ರಹ

ಯಡೂರು ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ, ಹಿಂದೂ ಕೌಟುಂಬಿಕ ಪದ್ದತಿ ಉಳಿಯಬೇಕು

Leave a Comment