NEWS

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20ಟೂರ್ನಿ: 2026ರ ಚಾಂಪಿಯನ್

ಕರ್ನಾಟಕ ಬುಲ್ಲೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಅವರು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು

ಪಾಲನೆ ನ್ಯೂಸ್

ಬೆಂಗಳೂರು: ಕರ್ನಾಟಕ ಬುಲ್ಲೋಜರ್ಸ್ ತಂಡವು ಭಾನುವಾರ ಆಗಿ ಹೊರಹೊಮ್ಮಿತು. ಅದರೊಂದಿಗೆ, 12ವರ್ಷಗಳ ಬಳಿಕ ಟೂರ್ನಿಯಲ್ಲಿ ಮತ್ತೆ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಕಿಚ್ಚ ಸುದೀಪ್ ನೇತೃತ್ವದ ಬುಲ್ಲೋಜರ್ಸ್ ತಂಡವು ತಮಿಳುನಾಡಿನ ಕೊಯಮತ್ತೂರಿನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಬೆಂಗಾಲ್ ಟೈಗರ್ಸ್ ತಂಡವನ್ನು ಮಣಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆಂಗಾಲ್ ತಂಡವು ಕುರಿ ಪ್ರತಾಪ್‌ (13ಕ್ಕೆ 3) ಹಾಗೂ ಸುನೀಲ್ ಕುಮಾರ್ (33ಕ್ಕೆ 2) ಅವರ ಪರಿಣಾಮಕಾರಿ ಬೌಲಿಂಗ್ ಎದುರು ರನ್ ಗಳಿಸುವಲ್ಲಿ ತಿಣುಕಾಡಿತು. ಒಂದೆಡೆ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಧೃತಿಗೆಡದೆ ಆಡಿದ ಆರಂಭಿಕ ಬ್ಯಾಟ‌ರ್ ಜಾಯ್ ಕುಮಾ‌ರ್ ಮುಖರ್ಜಿ ಅರ್ಧಶತಕದೊಂದಿಗೆ ಆಸರೆಯಾದರು. ಅದರಿಂದಾಗಿ, ಬೆಂಗಾಲ್ ತಂಡವು 20ಓವರ್‌ಗಳಲ್ಲಿ 129ರನ್ ಗಳಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ಸುದೀಪ್ ಪಡೆಯು ರಾಜೀವ್‌ ಹನು (69; 37ಎ, 4×14, 6×1) ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 16.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ದಡ ಸೇರಿತು.

2013ಮತ್ತು 2014ರ ಚಾಂಪಿಯನ್ ಬುಲ್ಲೋಜರ್ಸ್ ತಂಡವು ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿತ್ತು.

ಸಂಕ್ಷಿಪ್ತ ಸ್ಕೋರು

ಬೆಂಗಾಲ್ ಟೈಗರ್ಸ್: 20 ಓವರ್‌ಗಳಲ್ಲಿ 129 (ಜಾಯ್ ಕುಮಾರ್ ಮುಖರ್ಜಿ 54; ಕುರಿ ಪ್ರತಾಪ್ 13ಕ್ಕೆ3, ಸುನೀಲ್ ಕುಮಾರ್ 33ಕ್ಕೆ2).

ಕರ್ನಾಟಕ ಬುಲ್ಲೋಜರ್ಸ್‌: 16.4ಓವರ್‌ಗಳಲ್ಲಿ 4ವಿಕೆಟ್‌ಗೆ 133 (ರಾಜೀವ್ ಹನು 69, ಮಂಜುನಾಥ್ ಗೌಡ ಔಟಾಗದೇ 20; ರತ್ನದೀಪ್ ಘೋಷ್ 17ಕ್ಕೆ3).

ಪಾಲನೆ.ಇನ್‌ ವಾಟ್ಸ್‌ ಆಪ್‌ ಗುಂಪಿಗೆ ಸೇರಿರಿ.

Related posts

ಮಂಡ್ಯ ಜಿಲ್ಲೆ, ಜನರ ಯೋಗಕ್ಷೇಮಕ್ಕೆ ಪ್ರಧಾನಿಗಳ ನವ ಸೂತ್ರ

ಮಾ.23 ರಿಂದ ಏ. 5 ರ ವರೆಗೆ ವೈರಮುಡಿ ಬ್ರಹ್ಮೋತ್ಸವ ಆಚರಣೆ

ಆರ್‌ಸಿಬಿ ಪಂದ್ಯ ಬಗ್ಗೆ ಚಿನ್ನಸ್ವಾಮಿಯಲ್ಲಿ ನಾಡಿದ್ದು ಅಂತಿಮ ನಿರ್ಧಾರ?

Leave a Comment